ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್‌ನಲ್ಲಿ ಯುವ ಸಂಸದ ತೇಜಸ್ವಿ ಸೂರ್ಯ ಮೊದಲ ಭಾಷಣ

|
Google Oneindia Kannada News

Recommended Video

ಸಂಸತ್‌ನಲ್ಲಿ ಯುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭಾಷಣ ಇಂದು | Oneindia Kannada

ನವದೆಹಲಿ, ಜೂನ್ 25: ಸಂಸತ್‌ನಲ್ಲಿ ಯುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಇಂದು ಭಾಷಣ ಮಾಡಿದ್ದಾರೆ. ಮೊದಲ ಭಾಷಣದಲ್ಲೇ ಅವರು ಸಂಸತ್‌ನ ಗಮನ ಸೆಳೆದಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಪರವಾಗಿ ಮಾತನಾಡಿದ ತೇಜಸ್ವಿ ಸೂರ್ಯ ಅವರು, ಭಾಷಣದ ಮೊದಲಿನಲ್ಲಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಹಾಗೂ ಭಾಷಣದ ಉದ್ದಕ್ಕೂ ಮೋದಿ ಅವರ ಗುಣಗಾನ ಮಾಡಿದರು.

ಬ್ಯಾಂಕ್ ನೇಮಕಾತಿ:ಕನ್ನಡಿಗರ ಪರ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮನವಿಬ್ಯಾಂಕ್ ನೇಮಕಾತಿ:ಕನ್ನಡಿಗರ ಪರ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮನವಿ

21 ನಿಮಿಷಗಳಿಗೂ ಹೆಚ್ಚು ಕಾಲ ಮಾತನಾಡಿದ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ಮತ್ತು ಅದರ ಕುಟುಂಬ ರಾಜಕಾರಣವನ್ನು ತರಾಟೆಗೆ ತೆಗೆದುಕೊಂಡರು.

ಐದು ವರ್ಷಗಳ ಹಿಂದೆ ತಾವು ನರೇಂದ್ರ ಮೋದಿ ಅವರ ಪರವಾಗಿ ಕರಪತ್ರಗಳನ್ನು ಹಂಚುತ್ತಿದ್ದುದಾಗಿ, ಘೋಷ ವಾಕ್ಯಗಳನ್ನು ಬರೆಯುತ್ತಿದ್ದೆ, ಸಣ್ಣ ಪುಟ್ಟ ಗುಂಪುಗಳಿಗೆ ಮೋದಿ ಪರವಾಗಿ ಭಾಷಣ ಮಾಡುತ್ತಿದ್ದೆ, ಆಗ ಮುಂದಿನ ಐದು ವರ್ಷದಲ್ಲಿ ನಾನು ಸಂಸದನಾಗುತ್ತೇನೆ ಎಂದು ಎಣಿಸಿರಲಿಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದರು.

ರಾಜಕೀಯ ಪರಿಭಾಷೆ ಬದಲಾಯಿಸಿದ ಮೋದಿ

ರಾಜಕೀಯ ಪರಿಭಾಷೆ ಬದಲಾಯಿಸಿದ ಮೋದಿ

ಮೋದಿ ಅವರು ಭಾರತದ ರಾಜಕೀಯ ಪರಿಭಾಷೆಯನ್ನೇ ಬದಲಾಯಿಸಿದ್ದಾರೆ ಎಂದ ತೇಜಸ್ವಿ ಸೂರ್ಯ, ನೆಹರು ಕಾಲದ ಅಭಿವೃದ್ಧಿಯನ್ನು ಟೀಕಿಸಿ, ಕಳೆದ ಐದು ವರ್ಷದಲ್ಲಿ ಆಗುತ್ತಿರುವುದೇ ನಿಜವಾದ ಅಭಿವೃದ್ಧಿ ಎಂದು ಹೇಳಿದರು.

ದಿನದ 20 ಗಂಟೆ ಕೆಲಸ ಮಾಡುತ್ತಾರೆ ಮೋದಿ

ದಿನದ 20 ಗಂಟೆ ಕೆಲಸ ಮಾಡುತ್ತಾರೆ ಮೋದಿ

ಮೋದಿ ಅವರು ದಿನದ 20 ಗಂಟೆ ಕೆಲಸ ಮಾಡುವ ಮೂಲಕ, ದೇಶಕ್ಕೆ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ, ಮೋದಿ ಅವರು ಯಂಗ್ ಇಂಡಿಯಾ ಕಟ್ಟುವ ಕನಸಿನಲ್ಲಿ ನಮಗೂ ಅವಕಾಶ ಕೊಟ್ಟಿದ್ದಾರೆ. ನಾನೂ ಸಹ ಯಂಗ್ ಇಂಡಿಯಾದ ಭಾಗ ಎಂದು ತೇಜಸ್ವಿ ಸೂರ್ಯ ಹೇಳಿದರು.

ಪಂಚೆ, ಶಲ್ಯ ತೊಟ್ಟು ಸಂಸತ್ ಪ್ರವೇಶಿಸಿದ ತೇಜಸ್ವಿ ಸೂರ್ಯಪಂಚೆ, ಶಲ್ಯ ತೊಟ್ಟು ಸಂಸತ್ ಪ್ರವೇಶಿಸಿದ ತೇಜಸ್ವಿ ಸೂರ್ಯ

ಹಿಂದುತ್ವದ ಮೇಲೂ ಬೆಳಕು ಚೆಲ್ಲಿದ ತೇಜಸ್ವಿ

ಹಿಂದುತ್ವದ ಮೇಲೂ ಬೆಳಕು ಚೆಲ್ಲಿದ ತೇಜಸ್ವಿ

ಹಿಂದುತ್ವದ ಮೇಲೆಯೂ ಬೆಳಕು ಚೆಲ್ಲಿದ ತೇಜಸ್ವಿ ಸೂರ್ಯ, ತಮ್ಮದೇ ದೇಶದಲ್ಲಿ ತಮ್ಮತನವನ್ನು ಪ್ರದರ್ಶಿಸಲು ಅಡ್ಡಿಯಾಗಿದ್ದ ಸಮಯದಲ್ಲಿ ಮೋದಿ ಅವರು ಆಗಮಿಸಿ ಹಿಂದೂಗಳಿಗೆ ಗೌರವ ದೊರಕಿಸಿಕೊಟ್ಟಿದ್ದಾರೆ. ಅವರೂ ಸಹ ಸ್ವತಃ ಗಂಗಾರತಿ ಮಾಡುವ ಮೂಲಕ, ಕೇದಾರನಾಥದಲ್ಲಿ ಧ್ಯಾನ ಮಾಡುವ ಮೂಲಕ ಹಿಂದೂ ಆಚರಣೆಗಳು ವಿಶ್ವವ್ಯಾಪಿ ಹರಡುವಂತೆ ಮಾಡಿದ್ದಾರೆ ಎಂದರು.

ಈ ಹಿಂದೆ ಹೇಳಿದ ಮಾತುಗಳು ಬಹುತೇಕ ಪುನರಾವರ್ತನೆ

ಈ ಹಿಂದೆ ಹೇಳಿದ ಮಾತುಗಳು ಬಹುತೇಕ ಪುನರಾವರ್ತನೆ

ಈಗಾಗಲೇ ತಮ್ಮ ಹಲವು ಭಾಷಣಗಳಲ್ಲಿ ಹೇಳಿರುವ ವಿಷಯಗಳನ್ನೇ ತೇಜಸ್ವಿ ಸೂರ್ಯ ಅವರು ಮತ್ತೆ ಸಂಸತ್‌ನಲ್ಲಿ ಮಾತನಾಡಿದರು. ಸೂರ್ಯ ಅವರ ಹಿಂದೆಯೇ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಕೂತಿದ್ದು, ತೇಜಸ್ವಿ ಸೂರ್ಯ ಅವರ ಭಾಷಣಕ್ಕೆ ಮೇಜು ಕುಟ್ಟಿ ಸ್ವಾಗತ ವ್ಯಕ್ತಪಡಿಸಿದರು.

ಅನಂತ್ ಕುಮಾರ್ ಕಚೇರಿ ಬೇಡ ಎಂದ ಸಂಸದ ತೇಜಸ್ವಿ ಸೂರ್ಯಅನಂತ್ ಕುಮಾರ್ ಕಚೇರಿ ಬೇಡ ಎಂದ ಸಂಸದ ತೇಜಸ್ವಿ ಸೂರ್ಯ

English summary
New BJP MP Tejasvi Surya first speech in parliament today. In his speech he tanked Modi and lambasted against congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X