ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೋಲ್ ಪ್ಲಾಜಾದಲ್ಲಿ ಪಾವತಿಗಾಗಿ ನಿಲ್ಲುವ ತಲೆನೋವೇ ಇಲ್ಲ!

|
Google Oneindia Kannada News

ನವದೆಹಲಿ, ಏಪ್ರಿಲ್ 21: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪಾವತಿಗಾಗಿ ಇನ್ನು ಹೆಚ್ಚು ಸಮಯ ವ್ಯಯ ಮಾಡಬೇಕಿಲ್ಲ. ಮೊಬೈಲ್ ಅಪ್ಲಿಕೇಷನ್ ಮೂಲಕ ಶುಲ್ಕ ಪಾವತಿಸುವ ಹೊಸ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಇದರಿಂದ ವಾಹನ ಸವಾರರ ಅಮೂಲ್ಯ ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ. ಬೆಂಗಳೂರು-ಚೆನ್ನೈ, ದೆಹಲಿ-ಮುಂಬೈ, ದೆಹಲಿ-ಚಂಡೀಘಡ, ದೆಹಲಿ-ಕೋಲ್ಕತ್ತ ಹೆದ್ದಾರಿಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಸಿದ್ಧತೆ ನಡೆದಿದೆ. ಮೊಬೈಲ್ ಅಪ್ಲಿಕೇಷನ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

ಒಂದು ಬದಲಿ ಮಾರ್ಗ ಎರಡು ಲಾಭ: ಟ್ರಾಫಿಕ್ , ಟೋಲ್ ಇಲ್ಒಂದು ಬದಲಿ ಮಾರ್ಗ ಎರಡು ಲಾಭ: ಟ್ರಾಫಿಕ್ , ಟೋಲ್ ಇಲ್

ಬಳಕೆ ಹೇಗೆ: ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ, ವಾಹನ ವಿವರಗಳನ್ನು ದಾಖಲಿಸಬೇಕು. ವಾಹನದ ನೋಂದಣಿಯನ್ನು ಮರುಪರಿಶೀಲಿಸಿ ವಾಹನದ ಮಾಲೀಕತ್ವ ಮತ್ತು ನನೋಂದಣಿಯನ್ನು ದೃಢೀಕರಿಸಲಾಗುತ್ತದೆ. ಅಪ್ಲಿಕೇಷನ್ ನಲ್ಲಿರುವ ಪ್ರಿಪೇಯ್ಡ್ ವ್ಯಾಲೆಟ್ ಬಳಸಿ ಹಣ ಪಾವತಿಸಬೇಕು. ವಾಹನ ಟೋಲ್ ಗೇಟ್ ತಲುಪುತ್ತಲೇ ಕ್ಯೂ ಆರ್ ಕೋಡ್ ಸೃಜನೆಯಾಗುತ್ತದೆ. ಟೋಲ್ ಪ್ಲಾಜಾ ತಲುಪುತ್ತಲೇ ಚಾಲಕ ಅದನ್ನು ಸ್ಕ್ಯಾನ್ ಮಾಡಿ, ಮುಂದೆ ಸಾಗಬಹುದಾಗಿದೆ.

New App for high toll payment

ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರವು ಮೊಬೈಲ್ ವ್ಯಾಲೆಟ್ ಗಳು, ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಗಳಿಂದಲೇ ನೇರೌಆಗಿ ಪಾವತಿಯಾಗಲಿದ್ದು, ವಾಹನಗಳಿಗೆ ರಿಚಾರ್ಜ್ ಆಧಾರಿತ ಫಾಸ್ಟ್ ಟ್ಯಾಗ್ ಸಹ ಅತ್ಯವಿರುವುದಿಲ್ಲ.

ಮತ್ತೊಂದು ವ್ಯವಸ್ಥೆಯೆಂದರೆ ಮೊಬೈಲ್ ಅಪ್ಲಿಕೇಷನ್ ನನ್ನು ಬ್ಯಾಂಕ್ ಖಾತೆಯಿಂದ ನೇರವಾಗಿ ಪಾವತಿಯಾಗುವ ವ್ಯವಸ್ಥೆಯಾಗಿರುವ ಯುಪಿಐ ಜತೆ ಲಿಂಕ್ ಮಾಡಬೇಕು. ಇದರಿಂದ ಈ ವಾಹನ ಟೋಲ್ ಪ್ಲಾಜಾ ತಲುಪುತ್ತಿದ್ದಂತೆ ವಾಹನದ ನಿರ್ದಿಷ್ಟ ಟೋಲ್ ದರವು ಯುಪಿಐ ವ್ಯವಸ್ಥೆಯಿಂದ ಕಡಿತಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
Ministry of road transportation and highways introducing new application to pay toll fees in highways. This app will reduce waiting time in tolls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X