ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ವಿರುದ್ಧ ನೇಪಾಳ ಗರಂ: ರಾಯಭಾರಿಗೆ ಸಮನ್ಸ್

|
Google Oneindia Kannada News

ದೆಹಲಿ, ಮೇ 12: ಉತ್ತರಾಖಂಡದ ಚೀನಾ ಗಡಿಭಾಗದಲ್ಲಿ ಲಿಪುಲೆಖ್ ಪಾಸ್ ಮೂಲಕ ಹೊಸ ರಸ್ತೆ ನಿರ್ಮಿಸಲಾಗುತ್ತಿರುವ ಕುರಿತು ನೇಪಾಳ ಸರ್ಕಾರ, ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದೆ.

ಮಾನಸ ಸರೋವರಕ್ಕೆ ತೆರಳಲು ನೆರವಾಗುವಂತೆ ಸುಮುದ್ರ ಮಟ್ಟದಿಂದ 17,000 ಅಡಿ ಎತ್ತರದಲ್ಲಿರುವ ಹಿಮಾಲಯದಲ್ಲಿ 80 ಕಿಲೋಮೀಟರ್ ರಸ್ತೆ ಕಾಮಗಾರಿಯನ್ನು ಭಾರತ ಶುಕ್ರವಾರ ಉದ್ಘಾಟಿಸಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ದರು. ಇದಕ್ಕೆ ನೇಪಾಳ ವಿರೋಧ ವ್ಯಕ್ತಪಡಿಸಿದೆ.

ಭಾರತೀಯ ಹವಾಮಾನ ಇಲಾಖೆಯಿಂದ ಪಿಒಕೆ ಭಾಗದ ವರದಿ ಬೇಡ ಎಂದ ಪಾಕಿಸ್ತಾನಭಾರತೀಯ ಹವಾಮಾನ ಇಲಾಖೆಯಿಂದ ಪಿಒಕೆ ಭಾಗದ ವರದಿ ಬೇಡ ಎಂದ ಪಾಕಿಸ್ತಾನ

ಈ ಸಂಬಂಧ ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದೆ. ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ನೇಪಾಳ ಸರ್ಕಾರದ ನಿಲುವನ್ನು ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯವಾಲಿ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವತ್ರಾ ಅವರ ಬಳಿ ಚರ್ಚೆ ನಡೆಸಿದೆ. ಮಾನಸ ಸರೋವರ ಸಾಗುವ ರಸ್ತೆಗೆ ಸಂಬಂಧಿಸಿದಂತೆ ನೇಪಾಳದ ನಿಲುವಿನ ಕುರಿತು ರಾಜತಾಂತ್ರಿಕ ಟಿಪ್ಪಣೆಯನ್ನು ರಾಯಭಾರಿಗೆ ಹಸ್ತಾಂತರಿಸಲಾಗಿದೆ ಸೋಮವಾರ ಟ್ವೀಟ್ ಮಾಡಿದ್ದರು.

 Nepal Has Give Summons To Indian Ambassador

ಈ ಸಂಬಂಧ ಭಾರತವೂ ಪ್ರತಿಕ್ರಿಯೆ ನೀಡಿತ್ತು. "ಇದು ಭಾರತ ಗಡಿಯೊಳಗಿನ ಪ್ರದೇಶದ ಕಾಮಗಾರಿ. ಕೈಲಾಶ್ ಮಾನಸ ಸರೋವರ ಯಾತ್ರೆಗೆ ಹೋಗುವ ಯಾತ್ರಿಕರು, ಸ್ಥಳೀಯರು ಮತ್ತು ವ್ಯಾಪಾರಿಗಳ ಸುಲಭ ಮತ್ತು ಅನುಕೂಲಕ್ಕಾಗಿ ಅನುಕೂಲಕರವಾಗಿದೆ" ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ವಿವಾದಗಳನ್ನು ಮಾತುಕತೆಯ ಮೂಲಕ ಶಾಂತಿಯಾಗಿ ಬಗೆಹರಿಸಿಕೊಳ್ಳೋಣ ಎಂದು ಭಾರತ ಹೇಳಿತ್ತು.

English summary
Nepal Government has given summons to Indian ambassador over road built for kailash mansarovar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X