ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್‌ ಡೂಡಲ್‌ನಲ್ಲಿ ನೀಲ್ ಆರ್ಮ್‌ ಸ್ಟ್ರಾಂಗ್, ವಿಶೇಷತೆಯೇನು?

|
Google Oneindia Kannada News

ನವದೆಹಲಿ, ಜುಲೈ 19: ಎರಡನೇ ಬಾರಿ ಚಂದ್ರನ ಅಂಗಳಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲಿ ಚಂದ್ರನ ಮೇಲೆ ಕಾಲಿಟ್ಟ ಮೊದಲ ಘಳಿಗೆಯನ್ನು ಗೂಗಲ್ ಡೂಡಲ್ ನೆನಪಿಸಿದೆ.
ಬಾಹುಬಲಿ ಚಂದ್ರನ ಮೇಲೆ ಕಾಲಿಡಲು ಸಿದ್ಧತೆ ನಡೆಸಿದೆ. ಮಾನವ ಸಹಿತ ಉಪಗ್ರಹ ಅಪೋಲೊ 11 ಮಿಷನ್‌ಗೆ ಇಂದಿಗೆ 50 ವರ್ಷ ತುಂಬಿದೆ.

ಈ ಕುರಿತು ಸ್ಮರಣೀಯ ವೀಡಿಯೊ ಒಂದನ್ನು ಅಪ್‌ಲೋಡ್ ಮಾಡಿದ್ದು ಇದು ಸುಮಾರು ಐದು ನಿಮಿಷ ಇದ್ದು, ಅಪೋಲೋ ಗಗನ ನೌಕೆಯ ಉಡಾವಣೆ, ಚಂದ್ರನ ಮೇಲೆ ಪದಾರ್ಪಣೆ ಮತ್ತು ಮರಳಿ ಬರುವ ಪ್ರಕ್ರಿಯೆಯನ್ನು ವಿವರಿಸುತ್ತದೆ. ನಾಸಾ 2024ರೊಳಗೆ ಮತ್ತೊಮ್ಮೆ ಚಂದ್ರನ ಅಂಗಳಕ್ಕೆ ಹೋಗುವ ತಯಾರಿ ನಡೆಸುತ್ತಿದೆ.

ಮತೋತ್ಸವದಲ್ಲಿ ವಿಶಿಷ್ಟವಾಗಿ ಭಾಗಿಯಾದ ಗೂಗಲ್ಮತೋತ್ಸವದಲ್ಲಿ ವಿಶಿಷ್ಟವಾಗಿ ಭಾಗಿಯಾದ ಗೂಗಲ್

ನಾನು ಚಂದ್ರನ ಮೇಲೆ ಕಾಲಿರಿಸಿದಾಗ ಭೂಮಿ ತುಂಬಾ ಚಿಕ್ಕದಾಗಿ ಕಾಣುತ್ತಿತ್ತು. ಇಡೀ ಭೂಮಿ ನನ್ನ ಕಣ್ಣಿನಲ್ಲಿ ಕಾಣುತ್ತಿತ್ತು, ಎಂದು ಮೈಖೆಲ್ ಅನುಭವ ಹಂಚಿಕೊಂಡಿದ್ದಾರೆ.

Neil Armstrong appears in Google doodle what is the speciality

ನಾಸಾ 1969ರಲ್ಲಿ 'ಅಪೋಲೋ 11' ಮಿಷನ್​ಗೆ ಚಾಲನೆ ನೀಡಿತ್ತು. ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ ಸಹಿತ ಉಪಗ್ರಹ ಇದಾಗಿತ್ತು. ಗೂಗಲ್ ಸರ್ಚ್ ಮಾಡುವವರಿಗೆ ಈ ಡೂಡಲ್ ಗಮನ ಸೆಳೆಯುತ್ತಿದೆ.

ಈ ಐತಿಹಾಸಿಕ ಚಂದ್ರಲೋಕ ಯಾತ್ರೆಯನ್ನು ವಿವರಣೆ ಸಹಿತವಾಗಿ ನೋಡಬಹುದಾಗಿದೆ. ಕಮಾಂಡ್ ಮಾಡ್ಯೂಲ್ ಪೈಲಟ್ ಮೈಕೆಲ್ ಕಾಲಿನ್ಸ್ ಅವರ ಧ್ವನಿಯಲ್ಲಿ ಅನುಭವದ ಕಥನವಿದೆ.

ಈ ಭರ್ಜರಿ ಯೋಜನೆಯ ಹಿಂದೆ ಜಗತ್ತಿನ 4 ಲಕ್ಷ ಮಂದಿಯ ಕೊಡುಗೆಯಿದೆ. ನೀಲ್ ಆರ್ಮ್‌ಸ್ಟ್ರಾಂಗ್, ಎಡ್ವಿನ್ ಬುಝ್ ಆಲ್ಡರಿನ್ ಹಾಗೂ ಮೈಕೆಲ್ ಕಾಲಿನ್ಸ್ ಅವರು ಚಂದ್ರನ ಮೇಲೆ ಕಾಲಿಟ್ಟಿದ್ದು, ಅವರ ಜತೆಗೆ, ಭೂಮಿಯಲ್ಲೇ ಇರುವ ಫ್ಯಾಕ್ಟರಿ ಕೆಲಸಗಾರರು, ವಿಜ್ಞಾನಿಗಳು ಮತ್ತು ಎಂಜಿನಿಯರುಗಳ ಶ್ರಮವಿದೆ ಎಂದು ಕಾಲಿನ್ಸ್ ವಿವರಿಸುತ್ತಾರೆ.

English summary
Neil Armstrong appears in Google doodle what is the speciality, Google dedicated its doodle on Tuesday to fifty years NASA's Apollo 11 mission to the Moon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X