ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಹರು ಪರಂಪರೆಯನ್ನು ಬಿಜೆಪಿ ಹಾಳುಗೆಡವುತ್ತಿದೆ: ಸೋನಿಯಾ ಗಾಂಧಿ

|
Google Oneindia Kannada News

Recommended Video

ನೆಹರು ಪರಂಪರೆಯನ್ನು ಬಿಜೆಪಿ ಹಾಳುಗೆಡವುತ್ತಿದೆ: ಸೋನಿಯಾ ಗಾಂಧಿ | Oneindia Kannada

ನವದೆಹಲಿ, ನವೆಂಬರ್ 14: 'ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೌಲ್ಯಯುತ ಪರಂಪರೆಯನ್ನು ಬಿಜೆಪಿ ಹಾಳುಗೆಡವುತ್ತಿದೆ' ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದರು.

ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಮುನ್ನಾದಿನ ಅಂದರೆ ಮಂಗಳವಾರ, ನೆಹರು ಕುರಿತು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಬರೆದ ಪುಸ್ತಕವನ್ನು ನವದೆಹಲಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಬಿಜೆಪಿಗೆ ವರ, ಕಾಂಗ್ರೆಸ್ಸಿಗೆ ದುಃಸ್ವಪ್ನವಾಗಲಿದೆ ನೆಹರು ಬರೆದಿದ್ದ 'ಆ ಪತ್ರ'! ಬಿಜೆಪಿಗೆ ವರ, ಕಾಂಗ್ರೆಸ್ಸಿಗೆ ದುಃಸ್ವಪ್ನವಾಗಲಿದೆ ನೆಹರು ಬರೆದಿದ್ದ 'ಆ ಪತ್ರ'!

'Nehru: The Invention of India' ಪುಸ್ತಕ ಬಿಡುಗಡೆಗೊಳಿಸಿದ ಅವರು, 'ಇಂದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿರುವವರ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವವನ್ನು ಉಳಿಸುವ ಮೂಲಕ ನಾವು ನೆಹರು ಅವರಿಗೆ ಗೌರವ ನೀಡಬೇಕಿದೆ' ಎಂದು ಸೋನಿಯಾ ಗಾಂಧಿ ಹೇಳಿದರು.

 Nehrus legacy being undermined by those in power: Sonia Gandhi

'1947 ರಲ್ಲಿ ಭಾರತದ ವಿಭಜನೆಯಾದರೂ, ಕಿತ್ತು ತಿನ್ನುವ ಬಡತನವಿದ್ದರೂ ಪ್ರಜಾಪ್ರಭುತ್ವ ದುರ್ಬಲಗೊಂಡಿರಲಿಲ್ಲ. ಪ್ರಜಾಪ್ರಭುತ್ವವನ್ನು ಯಾರೂ ಸದರದಲ್ಲಿ ನೋಡಿರಲಿಲ್ಲ. ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಉಳಿಸಿ, ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿದ ಕೀರ್ತಿ ನೆಹರು ಅವರಿಗೆ ಸಲ್ಲಬೇಕು' ಎಂದು ಅವರು ನೆಹರು ಗುಣಗಾನ ಮಾಡಿದರು.

ನೆಹರೂ -ಎಡ್ವಿನಾ ನಡುವೆ ಪ್ರೀತಿಗೆ ಪಮೇಲಾ ಸಾಕ್ಷಿನೆಹರೂ -ಎಡ್ವಿನಾ ನಡುವೆ ಪ್ರೀತಿಗೆ ಪಮೇಲಾ ಸಾಕ್ಷಿ

ಜವಾಹರಲಾಲ್ ನೆಹರು ಅವರ 129 ನೇ ಜನ್ಮದಿನವನ್ನು ಇಂದು(ನ.14) ಮಕ್ಕಳ ದಿನವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ.

English summary
UPA chairperson and former Congress chief Sonia Gandhi attacked the Bharatiya Janata Party (BJP) for undermined the legacy of the first Prime Minister of India. She was speaking after releasing a book by Congress leader Shashi Taroor on Jawaharlal Nehru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X