ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಫಲಿತಾಂಶ: 720ಕ್ಕೆ 720 ಅಂಕ ಪಡೆದರೂ ಕೈತಪ್ಪಿದ ಅಗ್ರಸ್ಥಾನ!

|
Google Oneindia Kannada News

ನವದೆಹಲಿ, ಅಕ್ಟೋಬರ್.17: ವೈದ್ಯಕೀಯ ಶಿಕ್ಷಣ ಪಡೆಯಬೇಕೆಂದ ಕನಸು ಹೊತ್ತ ವಿದ್ಯಾರ್ಥಿನಿ ಶ್ರಮಕ್ಕೆ ವಯಸ್ಸು ಅಡ್ಡಿಯಾಗಿದೆ. ಅಂದುಕೊಂಡಂತೆ ಹೆಚ್ಚು ಅಂಕ ಗಳಿಸಿದರೂ ಅಗ್ರಸ್ಥಾನ ಪಡೆಯುವಲ್ಲಿ ವಿದ್ಯಾರ್ಥಿನಿ ಹಿಂದೆ ಉಳಿಯುವಂತಾಗಿದೆ.

ದೇಶಾದ್ಯಂತ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶವು ಶುಕ್ರವಾರ ಪ್ರಕಟವಾಗಿದೆ. ವೈದ್ಯಕೀಯ ಪ್ರವೇಶಕ್ಕಾಗಿ ನೀಟ್ ಪರೀಕ್ಷೆ ಬರೆದ ನವದೆಹಲಿಯ ಆಕಾಂಶಾ ಸಿಂಗ್ 720ಕ್ಕೆ 720 ಅಂಕಗಳನ್ನು ಗಳಿಸಿದ್ದಾರೆ.

ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಒಡಿಶಾದ ಟಾಪರ್‌ಗೆ 720 ಅಂಕನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಒಡಿಶಾದ ಟಾಪರ್‌ಗೆ 720 ಅಂಕ

ಶೇಕಡಾ 100ರಷ್ಟು ಅಂಕಗಳನ್ನು ಗಳಿಸಿದರೂ ವಿದ್ಯಾರ್ಥಿನಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅಗ್ರಸ್ಥಾನ ಕೈತಪ್ಪಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಟೈ-ಬ್ರೇಕಿಂಗ್ ನೀತಿಯಡಿ ಕಿರಿಯ ವಯಸ್ಸಿನ ಕಾರಣದಿಂದಾಗಿ ವಿದ್ಯಾರ್ಥಿನಿ ಬದಲಿಗೆ ವಯಸ್ಸಿನ ಆಧಾರದಲ್ಲಿ 720 ಅಂಕಗಳನ್ನೇ ಪಡೆದ ಒಡಿಶಾದ ಸೋಯೆಬ್ ಅಫ್ತಾಬ್ ಎಂಬ ವಿದ್ಯಾರ್ಥಿಗೆ ಅಗ್ರಸ್ಥಾನವನ್ನು ನೀಡಲಾಗಿದೆ.

ಟೈ-ಬ್ರೇಕಿಂಗ್ ನೀತಿ ಅಂಶಗಳು ಇಂತಿವೆ

ಟೈ-ಬ್ರೇಕಿಂಗ್ ನೀತಿ ಅಂಶಗಳು ಇಂತಿವೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಟೈ-ಬ್ರೇಕಿಂಗ್ ನೀತಿಯಡಿ ವಿದ್ಯಾರ್ಥಿಗಳ ಸ್ಥಾನವನ್ನು ನಿರ್ಧರಿಸಲಾಗುತ್ತದೆ. ಅಧಿಕಾರಿಗಳ ಪ್ರಕಾರ, ಟೈ-ಬ್ರೇಕಿಂಗ್ ನೀತಿಯು ವಯಸ್ಸು, ವಿಷಯವಾರು ಅಂಕಗಳು ಮತ್ತು ತಪ್ಪಾದ ಉತ್ತರಗಳ ಸಂಖ್ಯೆಗಳಂತ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. "ಒಡಿಶಾದ ಸೋಯೆಬ್ ಅಫ್ತಾಬ್ ಮತ್ತು ದೆಹಲಿಯ ಆಕಾಶಾ ಸಿಂಗ್ ಇಬ್ಬರೂ ನೀಟ್ ಪರೀಕ್ಷೆಯಲ್ಲಿ ಪರಿಪೂರ್ಣ 720 ಅಂಕಗಳನ್ನು ಪಡೆದುಕೊಂಡಿದ್ದಾರೆ. ಹೀಗಿದ್ದರೂ ಸೋಯೆಬ್ ಅಫ್ತಾಬ್ ವಯಸ್ಸಾದ ಕಾರಣ ಅವರು ರಾಷ್ಟ್ರೀಯ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡುವುದು ಹೇಗೆ?

ವಿದ್ಯಾರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡುವುದು ಹೇಗೆ?

"ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ಪಡೆದ ಅಂಕಗಳನ್ನು ಆಧಾರವಾಗಿಟ್ಟುಕೊಂಡು ವಿದ್ಯಾರ್ಥಿಗಳ ಶ್ರೇಯಾಂಕವನ್ನು ಆರಂಭದಲ್ಲಿ ನಿರ್ಧರಿಸಲಾಗುತ್ತದೆ. ಇವುಗಳನ್ನು ಅನುಸರಿಸಿ, ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಬಳಸಿಕೊಂಡು ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಅದು ಸಾಧ್ಯವಾಗದಿದ್ದಲ್ಲಿ ಅಭ್ಯರ್ಥಿಗಳ ಉತ್ತರ ಸಂಖ್ಯೆಯನ್ನು ಪರಿಗಣಿಸಿ ಮತ್ತಷ್ಟು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ, ವಯಸ್ಸಿಗೆ ಅನುಗುಣವಾಗಿ ಕಿರುಪಟ್ಟಿ ಮಾಡಲಾಗುತ್ತದೆ. ಅಂತಿಮವಾಗಿ ಹಿರಿಯ ವಯಸ್ಸಿನವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಅಧಿಕಾರಿಗಳು" ತಿಳಿಸಿದ್ದಾರೆ.

ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳ ಹೆಸರು ಮತ್ತು ಅಂಕ

ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳ ಹೆಸರು ಮತ್ತು ಅಂಕ

ದೇಶಾದ್ಯಂತ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಬರೆದ 7.7 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಶುಕ್ರವಾರ ಪ್ರಕಟವಾಯಿತು. ಟೈ-ಬ್ರೇಕಿಂಗ್ ನೀತಿಯ ಅಡಿಯಲ್ಲಿ ವಿದ್ಯಾರ್ಥಿಗಳ ಶ್ರೇಯಾಂಕವನ್ನು ತೀರ್ಮಾನಿಸಲಾಗಿದೆ. ತೆಲಂಗಾಣದ ತುಮ್ಮಲಾ ಸ್ನಿಕಿತಾ, ರಾಜಸ್ಥಾನದ ವಿನಿತ್ ಶರ್ಮಾ, ಹರಿಯಾಣದ ಅಮ್ರಿಶಾ ಕೈತಾನ್, ಆಂಧ್ರ ಪ್ರದೇಶದ ಗುಥಿ ಚೈತನ್ಯ ಸಿಂಧು ಎಂಬ ವಿದ್ಯಾರ್ಥಿಗಳು 720ರಲ್ಲಿ 715 ಅಂಕಗಳನ್ನು ಗಳಿಸಿದ್ದು, 3, 4, 5, 6ನೇ ಶ್ರೇಯಾಂಕದಲ್ಲಿ ಗುರುತಿಸಿಕೊಂಡಿದ್ದಾರೆ. 720ಕ್ಕೆ 710 ಅಂಕಗಳನ್ನು ಗಳಿಸಿದ 20 ವಿದ್ಯಾರ್ಥಿಗಳು 8ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 705 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು 25 ರಿಂದ 50ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.

11 ಭಾಷೆಗಳಲ್ಲಿ ಸಪ್ಟೆಂಬರ್.13ರಂದು ನೀಟ್ ಪರೀಕ್ಷೆ

11 ಭಾಷೆಗಳಲ್ಲಿ ಸಪ್ಟೆಂಬರ್.13ರಂದು ನೀಟ್ ಪರೀಕ್ಷೆ

ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಭೀತಿ ಹಿನ್ನೆಲೆ ಎರಡು ಬಾರಿ ಮುಂದೂಡಿಕೆಯಾಗಿದ್ದ ನೀಟ್ ಪರೀಕ್ಷೆಯನ್ನು ಸಪ್ಟೆಂಬರ್.13ರಂದು ನಡೆಸಲಾಯಿತು. ಇಂಗ್ಲೀಷ್, ಹಿಂದೆ, ಅಸ್ಸಾಮೀಸ್, ಬೆಂಗಾಲಿ, ಗುಜರಾತಿ, ಕನ್ನಡ, ಮರಾಠಿ, ಓಡಿಯಾ, ತಮಿಳು, ತೆಲುಗು ಮತ್ತು ಉರ್ದು ಭಾಷೆಯಲ್ಲಿ ಪರೀಕ್ಷೆ ನಡೆಸಲಾಯಿತು. ಶೇ.77ರಷ್ಟು ವಿದ್ಯಾರ್ಥಿಗಳು ಇಂಗ್ಲೀಷ್ ನಲ್ಲಿ ಪರೀಕ್ಷೆ ಬರೆದರೆ 12ರಷ್ಟು ವಿದ್ಯಾರ್ಥಿಗಳು ಹಿಂದಿ ಮತ್ತು ಶೇ.11ರಷ್ಟು ಅನ್ಯಬಾಷೆಗಳಲ್ಲಿ ನೀಟ್ ಪರೀಕ್ಷೆಯನ್ನು ಬರೆದಿದ್ದರು. ಈ ಶೈಕ್ಷಣಿಕ ಸಾಲಿನಲ್ಲಿ "ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ಜವಾಹರಲಾಲ್ ನೆಹರೂ ಇನ್ಸ್ ಟ್ಯೂಟ್ ಆಫ್ ಪೋಸ್ಟ್ ಗ್ಯಾಜುಯೇಟ್ ಮೆಡಿಕಲ್ ಏಜ್ಯುಕೇಷನ್ ಆಂಡ್ ರಿಸರ್ಚ್ ಪುದುಚೇರಿಯಲ್ಲಿ ಪ್ರವೇಶಾತಿ ನೀಡಲಾಗುತ್ತಿದೆ.

English summary
NEET Tie-Breaker Policy: Delhi Based Akansha Loses Top Rank Due To Younger Age.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X