ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಪರೀಕ್ಷೆಗೆ ಹಾಜರಾಗುವ ಮುನ್ನ ಈ ನಿಯಮಗಳನ್ನು ಓದಿ

|
Google Oneindia Kannada News

ನವದೆಹಲಿ, ಸಪ್ಟೆಂಬರ್.08: ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ 2020ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET)ಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಡ್ರೆಸ್ ಕೋಡ್ ಸೇರಿದಂತೆ ಕೆಲವು ನಿಯಮಗಳನ್ನು ಹೊರಡಿಸಿದೆ.

Recommended Video

Modi ವಿರುದ್ಧ ಸಿಡಿದೆದ್ದ Rahul Gandhi | Oneindia Kannada

ನೀಟ್ ಪರೀಕ್ಷೆ ಬರೆಯುವುದಕ್ಕೆ ತೆರಳುವ ಪರೀಕ್ಷಾರ್ಥಿಗಳು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಹೊರಡಿಸಿರುವ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಪ್ರಮುಖವಾಗಿ ಎನ್‌ಟಿಎಯ ಹೊಸ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ಪೂರ್ಣ ತೋಳು, ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ ಪರೀಕ್ಷಾ ಕೇಂದ್ರಕ್ಕೆ ತೆರಳುವಂತಿಲ್ಲ.

ಜೆಇಇ, ನೀಟ್ ಮುಂದೂಡಿಕೆ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್ಜೆಇಇ, ನೀಟ್ ಮುಂದೂಡಿಕೆ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ದೊಡ್ಡ ಗುಂಡಿ(ಬಟನ್)ಗಳನ್ನು ಹೊಂದಿರುವ ಬಟ್ಟೆಯನ್ನು ಧರಿಸಿ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವುದಕ್ಕೆ ಅನುಮತಿಯಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳಿಗೆ ನೀಡಿರುವ ಪರೀಕ್ಷಾ ಗುರುತಿನ ಚೀಟಿಯಲ್ಲಿ ಉಲ್ಲೇಖಿಸಲಾಗಿದೆ. ಪರೀಕ್ಷಾರ್ಥಿಗಳು ಬೂಟ್ ಧರಿಸಿಕೊಂಡು ಹೋಗುವುದಕ್ಕೆ ಅನುಮತಿಯಿಲ್ಲ. ಅದರ ಬದಲು ಚಪ್ಪಲಿಯನ್ನು ಮಾತ್ರ ಹಾಕಿಕೊಂಡು ಹೋಗಬೇಕೆಂದು ಹೊಸ ನಿಯಮಗಳಲ್ಲಿ ಹೇಳಲಾಗಿದೆ.

ಕೊವಿಡ್-19 ಸೋಂಕು ಹರಡುವಿಕೆ ಹಿನ್ನೆಲೆ ನಿಯಮ

ಕೊವಿಡ್-19 ಸೋಂಕು ಹರಡುವಿಕೆ ಹಿನ್ನೆಲೆ ನಿಯಮ

ದೇಶಾದ್ಯಂತ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಪರೀಕ್ಷಾರ್ಥಿಗಳು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಬೇಕು. ನಿಗದಿಗೊಳಿಸಿದ ಪರೀಕ್ಷಾ ಸಮಯಕ್ಕಿಂತ ಮೊದಲು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರು ಇರಬೇಕು. ಕೊವಿಡ್-19 ಹಿನ್ನೆಲೆ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷಿಸಿದ ಬಳಿಕವಷ್ಟೇ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶಿಸುವುದಕ್ಕೆ ಅವಕಾಶ ನೀಡಲಾಗುತ್ತದೆ.

ಪರೀಕ್ಷಾ ಕೇಂದ್ರಗಳಲ್ಲಿ ಈ ಸಾಮಗ್ರಿಗಳಿಗೆ ಅನುಮತಿ ನೀಡಲ್ಲ

ಪರೀಕ್ಷಾ ಕೇಂದ್ರಗಳಲ್ಲಿ ಈ ಸಾಮಗ್ರಿಗಳಿಗೆ ಅನುಮತಿ ನೀಡಲ್ಲ

ನೀಟ್ ಪರೀಕ್ಷೆಗೆ ತೆರಳು ವಿದ್ಯಾರ್ಥಿಗಳು ಮುದ್ರಿತ ಅಥವಾ ಬರೆದ ಸಾಮಗ್ರಿಗಳು, ಹಾಳೆಯ ತುಂಡುಗಳು, ಪೆನ್ಸಿಲ್ ಬಾಕ್ಸ್, ಜಿಯೋಮೆಟ್ರಿ ಬಾಕ್ಸ್, ಕ್ಯಾಲುಕಿಲೇಟರ್, ಪೆನ್, ಸ್ಕೇಲ್, ರೈಟಿಂಗ್ ಪ್ಯಾಡ್, ಪೆನ್ ಡ್ರೈವ್, ರಬ್ಬರ್, ಎಲೆಕ್ಟ್ರಾನಿಕ್ ಪೆನ್, ಸ್ಕ್ಯಾನರ್ ಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ಇರುವುದಿಲ್ಲ.

ಇಯರ್ ಫೋನ್, ಮೊಬೈಲ್ ಬಳಕೆ ನಿರ್ಬಂಧಿಸಿದ ಎನ್ ಟಿಎ

ಇಯರ್ ಫೋನ್, ಮೊಬೈಲ್ ಬಳಕೆ ನಿರ್ಬಂಧಿಸಿದ ಎನ್ ಟಿಎ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮೊಬೈಲ್, ಇಯರ್ ಫೋನ್, ಹೆಲ್ತ್ ಬ್ಯಾಂಡ್, ಹ್ಯಾಂಡ್ ಬ್ಯಾಗ್, ಗಾಗಲ್ಸ್, ಕ್ಯಾಪ್, ಬೆಲ್ಟ್ ಮತ್ತು ಆಭರಣಗಳನ್ನೂ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬಾರದಂತೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.

ದೇಶಾದ್ಯಂತ ನಡೆಸಿದ ಜೆಇಇ ಪರೀಕ್ಷೆಗಳು ಯಶಸ್ವಿ

ದೇಶಾದ್ಯಂತ ನಡೆಸಿದ ಜೆಇಇ ಪರೀಕ್ಷೆಗಳು ಯಶಸ್ವಿ

ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ಸಪ್ಟೆಂಬರ್.01ರಿಂದ ಸಪ್ಟೆಂಬರ್.06ರವರೆಗೂ ಜೆಇಇ ಪರೀಕ್ಷೆ ನಡೆಸುವಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಸಪ್ಟೆಂಬರ್.13ರಂದು ನೀಟ್ ಪರೀಕ್ಷೆ ನಡೆಸುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 2020ನೇ ಸಾಲಿನಲ್ಲಿ ನೀಟ್ ಪರೀಕ್ಷೆ ಬರೆಯುವುದಕ್ಕೆ 15.97 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ದೇಶಾದ್ಯಂತ ನೀಟ್ ಪರೀಕ್ಷೆಗಾಗಿ 3842 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.

English summary
NEET 2020: NTA Releases Dress Code For Students; No Full-Sleeves Or Light-Coloured Clothes Allowed In Exam Centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X