ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಲ್ಲಿ ಬಾಯಿ ಆಪ್‌ನ ಮಾಸ್ಟರ್ ಮೈಂಡ್ ನೀರಜ್ ಬಿಷ್ಣೋಯ್ ಆತ್ಮಹತ್ಯೆಗೆ ಯತ್ನ

|
Google Oneindia Kannada News

ನವದೆಹಲಿ ಜನವರಿ 09: ಬುಲ್ಲಿ ಬಾಯಿ ಆಪ್‌ನ ಮಾಸ್ಟರ್ ಮೈಂಡ್ ನೀರಜ್ ಬಿಷ್ಣೋಯ್ ಸದ್ಯ ದೆಹಲಿ ಪೊಲೀಸರ ವಶದಲ್ಲಿದ್ದಾರೆ. ವರದಿಯ ಪ್ರಕಾರ ನೀರಜ್ ಬಿಷ್ಣೋಯ್ ಜೈಲಿನಲ್ಲಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದಾದ ಬಳಿಕ ಪೊಲೀಸರು ನೀರಜ್‌ನ ವೈದ್ಯಕೀಯ ಪರೀಕ್ಷೆ ನಡೆಸಿ ಅವರು ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಸದ್ಯ ನೀರಜ್ ಸ್ಥಿರವಾಗಿದ್ದಾರೆ. ಈ ಸಂಪೂರ್ಣ ಪ್ರಕರಣದ ತನಿಖೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಯೊಬ್ಬರು ತನಿಖೆಯನ್ನು ಮುಂದಕ್ಕೆ ಕೊಂಡೊಯ್ಯುವುದು ನೀರಜ್ ಅವರ ಯೋಜನೆಯಾಗಿರಬಹುದು. ಹೀಗಾಗಿ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆ ಇದೆ ಎಂದು ಹೇಳಿದರು. ಆದರೆ ವಿಷಯದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಸಂಪೂರ್ಣ ಭದ್ರತೆ ಮತ್ತು ಕಾಳಜಿಯೊಂದಿಗೆ ವಿಚಾರಣೆ ನಡೆಸುತ್ತಿದ್ದಾರೆ.

ನೀರಜ್ ಬಿಷ್ಣೋಯ್ ಅನೇಕ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ. ನೀರಜ್ 15ನೇ ವಯಸ್ಸಿನಿಂದಲೇ ಇದೆಲ್ಲವನ್ನೂ ಮಾಡುತ್ತಿದ್ದಾನೆ. ಈ ಹಿಂದೆ ಭಾರತ ಮತ್ತು ಪಾಕಿಸ್ತಾನದ ಹಲವು ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳ ವೆಬ್‌ಸೈಟ್‌ಗಳನ್ನು ನೀರಜ್ ಹ್ಯಾಕ್ ಮಾಡಿದ್ದಾನೆ ಎಂದು ತನಿಖೆಯ ನೇತೃತ್ವದ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ. ಸದ್ಯ ಪೊಲೀಸರು ಶಾಲೆಯ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿದ್ದಾರೆ ಎಂಬ ಅವರ ಹೇಳಿಕೆಯನ್ನು ತನಿಖೆ ಮಾಡುತ್ತಿದ್ದಾರೆ.

ಈಗಾಗಲೇ ಉತ್ತರಾಖಂಡದ 18 ವರ್ಷದ ಶ್ವೇತಾ ಝಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ವಾಸ್ತವವಾಗಿ ಮುಂಬೈ ಪೊಲೀಸರಿಗೆ ಶ್ವೇತಾ ಝಾ ಅವರ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ್ದ ನೀರಜ್ ತಮ್ಮನ್ನ ಬಂಧಿಸಿ ತೋರಿಸುವಂತೆ ಸವಾಲು ಹಾಕಿದ್ದರು. ಈ ಟ್ವೀಟ್ ಜಾಲವನ್ನು ಹಿಡಿದು ಪೊಲೀಸರು ನೀರಜ್ ಅನ್ನು ಬಂಧಿಸಿದ್ದಾರೆ.

Neeraj Bishnoi, the mastermind of Bulli Bai app, tried to kill himself
ವಿಚಾರಣೆ ವೇಳೆ ನೀರಜ್ ಸುಲ್ಲಿ ಆ್ಯಪ್ @sullideals ಟ್ವಿಟರ್ ಹ್ಯಾಂಡಲ್‌ನೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಬಿಷ್ಣೋಯ್ ಬಹಿರಂಗಪಡಿಸಿದ್ದಾರೆ. ಸುಲ್ಲಿ ಡೀಲ್ ಪ್ರಕರಣಕ್ಕೆ ನೀರಜ್ ಬಿಷ್ಣೋಯ್‌ ಸಂಬಂಧವಿದೆ ಎಂಬುದಕ್ಕೆ ನಮ್ಮ ಬಳಿ ಪುರಾವೆಗಳಿವೆ ಎಂದು ಡಿಸಿಪಿ ಕೆಪಿಎಸ್ ಮಲ್ಹೋತ್ರಾ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಮುಸ್ಲಿಂ ಮಹಿಳೆಯರನ್ನು ಹರಾಜು ಹಾಕಲು 'ಬುಲ್ಲಿ ಬಾಯಿ' ಆ್ಯಪ್‌ನ ಹಿಂದಿನ ಪ್ರಮುಖ ಆರೋಪಿ ನೀರಜ್ ಬಿಷ್ಣೋಯ್ ಪೊಲೀಸ್ ವಿಚಾರಣೆ ವೇಳೆ ತನ್ನ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಬದಲಾಗಿ ಆರೋಪಿ ತಾನು ಮಾಡಿದ್ದು 'ಸರಿ' ಎಂದು ಭಾವಿಸಿದ್ದನು ಎಂದು ಮೂಲಗಳು ತಿಳಿಸಿವೆ. ಕಳೆದ ಕೆಲ ದಿನಗಳಿಂದ ಭಾರೀ ವಿವಾದವನ್ನು ಸೃಷ್ಟಿ ಮಾಡಿದ ಬುಲ್ಲಿ ಬಾಯಿ ಆ್ಯಪ್‌ನ ಸೃಷ್ಟಿಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅವರ ಅನುಮತಿ ಇಲ್ಲದೇ ಬುಲ್ಲಿ ಬಾಯಿ ಆ್ಯಪ್‌ನಲ್ಲಿ ಅಪ್ಲೋಡ್ ಮಾಡುವ ಮೂಲಕ ಹರಾಜಿಗಾಗಿ ಬಳಕೆ ಮಾಡಲಾಗುತ್ತಿತ್ತು. ಇದನ್ನು ಖಂಡಿಸಿ ಹಲವಾರು ಜನ ಆಕ್ರೋಶ ಹೊರಹಾಕಿದ್ದರು ಜೊತೆಗೆ ಕ್ರಮಕ್ಕೆ ಒತ್ತಾಯಿಸಿದ್ದರು. ಜೊತೆಗೆ ಇದು ರಾಜಕೀಯ ಕದನಕ್ಕೂ ಒಳಗಾಗಿತ್ತು. ಇದರ ಬೆನ್ನಲ್ಲೇ ಪೊಲೀಸರು ಇದರ ವಿಚಾರಣೆಯನ್ನು ಚುರುಕುಗೊಳಿಸಿ ಈವರೆಗೆ ಪ್ರಕರಣದಲ್ಲಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

ಒಂದು ವರ್ಷದೊಳಗೆ ಇದು ಎರಡನೇ ಬಾರಿಗೆ ಆ್ಯಪ್ ಸೃಷ್ಟಿಯಾಗಿದೆ. ಆರಂಭದಲ್ಲಿ 'ಸುಲ್ಲಿ ಡೀಲ್' ಎನ್ನುವ ಆ್ಯಪ್‌ ಸೃಷ್ಟಿಸಲಾಗಿತ್ತು. ಈ ವೇಳೆ ಯಾಋನ್ನೂ ಬಂಧಿಸಲಾಗಿರಲಿಲ್ಲ. 'ಸುಲ್ಲಿ' ಎಂಬುದು ಭಾರತದ ಮುಸ್ಲಿಂ ಮಹಿಳೆಯರ ವಿರುದ್ಧ ಬಲಪಂಥೀಯರು ಬಳಸುವ ಅವಹೇಳನಕಾರಿ ಗ್ರಾಮ್ಯ ಪದವಾಗಿದೆ.

English summary
Neeraj Bishnoi, the mastermind of Bulli Bai app, is currently in the custody of Delhi Police. According to the report, Neeraj Bishnoi has tried to commit suicide twice inside the jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X