ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಒಮಿಕ್ರೋನ್ ರೂಪಾಂತರಿಯನ್ನು ಆರಂಭದಲ್ಲಿಯೇ ಕಟ್ಟಿಹಾಕಬೇಕು: ಮೋದಿ

|
Google Oneindia Kannada News

ನವದೆಹಲಿ, ನವೆಂಬರ್ 27: ಕೊರೊನಾ ಸೋಂಕಿನ ಒಮಿಕ್ರೋನ್ ರೂಪಾಂತರಿ ಕುರಿತು ಎಚ್ಚರಿಕೆಯಿಂದಿರಲು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ.

Need To Be Proactive In Light Of New Variant Says PM Modi

ಒಮಿಕ್ರೋನ್ ರೂಪಾಂತರಿಯನ್ನು ಆರಂಭದಿಂದಲೇ ಕಟ್ಟಿಹಾಕಬೇಕು ಎಂದು ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ತೀವ್ರ ನಿಗಾವಹಿಸಬೇಕು, ಯಾವ ದೇಶದಲ್ಲಿ ಹೆಚ್ಚು ಪ್ರಕರಣಗಳಿವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗಿದೆ. ಆ ದೇಶಗಳಿಂದ ಬರುವ ವಿಮಾನಗಳಿಗೆ ನಿರ್ಬಂಧ ವಿಧಿಸುವ ಕುರಿತು ಚರ್ಚೆ ನಡೆದಿದೆ.

ವಿಶ್ವವನ್ನೇ ಕಂಗೆಡಿಸಿರುವ ಹೊಸ ತಳಿಯ ಒಮಿಕ್ರೋನ್ ಕೊರೊನಾ ಸೋಂಕಿನ ಪ್ರಸರಣ ಕೆಲವು ರಾಷ್ಟ್ರಗಳಲ್ಲಿ ತೀವ್ರತೆ ಪಡೆದುಕೊಂಡ ಬೆನ್ನಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮಹತ್ವದ ಸಭೆ ನಡೆಸಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು.

ಶನಿವಾರ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ಅವರು ಹೊಸ ರೂಪಾಂತರ ಸೋಂಕಿನ ಗುಣಲಕ್ಷಣಗಳ ಬಗ್ಗೆ ಮಾಹಿತಿ ಪಡೆದುಕೊಂಡಿದಲ್ಲದೇ ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ಸೇರಿದಂತೆ ಏಳು ದೇಶಗಳಲ್ಲಿ ಹೊಸ ತಳಿಯ ಸೋಂಕು ಪತ್ತೆಯಾಗಿದೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರೋನ್ ಎಂದು ಹೆಸರಿಟ್ಟಿದೆ. ಹಿಂದಿನ ಎಲ್ಲಾ ಸೋಂಕುಗಳಿಗಿಂತಲೂ ರೂಪಾಂತರಿ ಅತ್ಯಂತ ವೇಗವಾಗಿ ಹರಡಲಿದೆ. ಹಾಲಿ ಲಭ್ಯ ಇರುವ ಲಸಿಕೆಗಳಿಗೆ ಇದು ಜಗ್ಗುವುದಿಲ್ಲ ಎಂಬ ವರದಿ ಇದೆ.

ಈ ಮೊದಲು ಕೋವಿಡ್ ಬಾಧಿತರಾಗಿ ಗುಣಮುಖರಾದವರಿಗೆ ಎರಡನೇ ಬಾರಿ ಸೋಂಕು ತಗುಲಿದರೂ ಹೆಚ್ಚಿನ ಅಪಾಯಗಳಿರುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಹೊಸ ರೂಪಾಂತರಿ ಮರುಕಳಿಸುವ ಸಾಧ್ಯತೆಗಳು ಹೆಚ್ಚಿವೆ ಮತ್ತು ಅಪಾಯದ ಮಟ್ಟವೂ ಕೂಡ ತೀವ್ರವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಈ ಮೊದಲು ಕಾಣಿಸಿಕೊಂಡಿದ್ದ ಡೆಲ್ಟಾ ಸೋಂಕು ಹೆಚ್ಚು ಅಪಾಯಕಾರಿ ಎಂದು ಹೇಳಲಾಗಿತ್ತು. ಆದರೆ ಅದು ನಿರೀಕ್ಷಿತ ಮಟ್ಟದ ಅಪಾಯ ಮಾಡಲಿಲ್ಲ. ಡೆಲ್ಟಾ ತನ್ನಷ್ಟಕ್ಕೆ ತಾನೇ ಕ್ಷೀಣಿಸಿದೆ. ಒಮಿಕ್ರೋನ್ ಸೋಂಕು ಡೆಲ್ಟಾಗಿಂತ ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢ ಪಡಿಸಿದೆ. ವಿಶ್ವದಲ್ಲೇ ಲಸಿಕೆಯಲ್ಲಿ ಮುಂಚೂಣಿಯಲ್ಲಿರುವ ಇಸ್ರೇಲ್‍ನಲ್ಲೂ ಒಮಿಕ್ರೋನ್ನ ಆತಂಕ ಮನೆ ಮಾಡಿದೆ. ವಿಶ್ವದ 27 ರಾಷ್ಟ್ರಗಳು ಈಗಾಗಲೇ ಸ್ವಯಂ ನಿರ್ಬಂಧ ವಿಧಿಸಿಕೊಂಡಿವೆ.ವಿಮಾನ ಪ್ರಯಾಣ, ವ್ಯಾಪಾರ ವಹಿವಾಟುಗಳಲ್ಲಿ ನಿರ್ಬಂಧಗಳನ್ನು ಮರು ಜಾರಿಗೊಳಿಸಲಾಗುತ್ತಿದೆ.

ರೂಪಾಂತರಿ ಸೋಂಕು ಪೀಡಿತ ಏಳು ರಾಷ್ಟ್ರಗಳಿಂದ ಪ್ರವಾಸಿಗರ ಆಗಮನಕ್ಕೆ ಅಮೆರಿಕಾ ತಡೆ ನೀಡಿದೆ. ಅಮೆರಿಕಾದ ನಿವಾಸಿಗಳು ಮರಳಲು ಅವಕಾಶ ನೀಡಲಾಗಿದೆ. ಆದರೆ ದೇಶಕ್ಕೆ ಮರಳಿದ ಬಳಿಕ ಕ್ವಾರಂಟೈನ್ ಕಡ್ಡಾಯ. ನೆಗೆಟಿವ್ ವರದಿಯ ಬಳಿಕವಷ್ಟೇ ಮುಖ್ಯವಾಹಿನಿಗೆ ಸೇರಲು ಅವಕಾಶವಿದೆ ಎಂದು ಶ್ವೇತ ಭವನ ತಿಳಿಸಿದೆ.

ಅಮೆರಿಕಾ, ಆಸ್ಟ್ರೇಲಿಯಾ, ಬ್ರಿಟನ್ ಸೇರಿದಂತೆ ಅನೇಕ ದೇಶಗಳು ನಿರ್ಬಂಧಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ ಭಾರತವೂ ಮುನ್ನೆಚ್ಚರಿಕೆ ಕೈಗೊಂಡಿದೆ. ದೇಶದಲ್ಲಿ ಜನ ಈಗಾಗಲೇ ಕೋವಿಡ್ ಶಿಷ್ಠಾಚಾರಗಳನ್ನು ನಿರ್ಲಕ್ಷ್ಯಿಸಿ ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ. ವ್ಯಕ್ತಿಗತ ಅಂತರ ಪಾಲನೆ, ಮಾಸ್ಕ್ ಧಾರಣೆ ಕಡೆಗಣಿಸಲಾಗಿದೆ. ಚುನಾವಣೆ, ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಸಾವಿರಾರು ಜನ ಸೇರುತ್ತಿದ್ದಾರೆ.

ಈ ಹಂತದಲ್ಲಿ ಒಮಿಕ್ರೋನ್ ಕಾಲಿಲಟ್ಟರೆ ಮತ್ತೆ ಎರಡನೇ ಅಲೆಯಲ್ಲಿ ನಡೆದ ಅನಾವುತಗಳು ಪುನಾರಾವರ್ತನೆಯಾಗಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತ ಪಡಿಸಿದ್ದಾರೆ. ಒಮಿಕ್ರೋನ್ ರೋಗ ಲಕ್ಷಣಗಳನ್ನು ತೋರಿಸದೆ ಏಕಾಏಕಿ ಆವರಿಸಿಕೊಳ್ಳಲಿದ್ದು, ಅದನ್ನು ಗುರುತಿಸುವ ವೇಳೆಗೆ ಅಪಾಯಕಾರಿ ಮಟ್ಟ ತಲುಪಿರುತ್ತದೆ. ಪ್ರಯೋಗಾಲಯ ಪರೀಕ್ಷೆಯಲ್ಲಿ ಮಾತ್ರ ಸೋಂಕನ್ನು ನಿಖರವಾಗಿ ಗುರುತಿಸಲು ಸಾಧ್ಯ ಎಂದು ಅದರ ತವರೂರು ದಕ್ಷಿಣ ಆಫ್ರಿಕಾದ ತಜ್ಞರು ಹೇಳಿದ್ದಾರೆ.

ಹೀಗಾಗಿ ಭಾರತದಲ್ಲಿ ತಕ್ಷಣದಿಂದಲೇ ಕೋವಿಡ್ ಶಿಷ್ಟಾಚಾರಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸೂಚಿಸಿದ್ದಾರೆ.
ಜೊತೆಯಲ್ಲಿ ದೇಶದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಅಭಿಯಾನದ ಪ್ರಗತಿಯನ್ನು ಪರಿಶೀಲಿಸಿದ್ದಾರೆ. ಇಂದಿಗೆ ದೇಶದಲ್ಲಿ 120 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಬಾಕಿ ಉಳಿದವರು ಲಸಿಕೆ ಪಡೆಯಬೇಕು. ಇದರಿಂದ ಕೋವಿಡ್ ಸೋಂಕು ತಗುಲಿದಾಗ ಕ್ಲಿನಿಕಲ್ ಅಪಾಯಗಳು ಮತ್ತು ಮರಣದ ಪ್ರಮಾಣ ತಗ್ಗಲಿದೆ ಎಂಬುದನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕಿದೆ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.

English summary
PM Narendra Modi said that all international arrivals should be monitored, tested as per guidelines and with a specific focus on countries identified ‘at risk’ because of the new variant following a meeting today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X