ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯು ಪಠ್ಯದಿಂದ ಗುಜರಾತ್ ಗಲಭೆ ವಿಚಾರ ಕೈಬಿಟ್ಟ NCERT, ಏನಿತ್ತು ಅದರಲ್ಲಿ?

|
Google Oneindia Kannada News

ನವದೆಹಲಿ ಜೂ.17: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್ ಸಿಇಆರ್ ಟಿ) ಸಂಸ್ಥೆಯು ದ್ವಿತೀಯ ಪಿಯುಸಿ ವಿಷಯದಲ್ಲಿದ್ದ ಗುಜರಾತ್ ಗಲಭೆ ಕುರಿತು ಅಂಶಗಳನ್ನು ತೆಗೆದುಹಾಕಿದೆ.

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು ದ್ವಿತೀಯ ಪಿಯುಸಿ ಪಠ್ಯಪುಸ್ತಕದ ಅಂಶಗಳನ್ನು ತರ್ಕಬದ್ಧಗೊಳಿಸಿದೆ. ಈ ಪ್ರಕ್ರಿಯೆಯಲ್ಲಿ ಯಾವ ಯಾವ ಅಂಶಗಳನ್ನು ಕೈ ಬಿಡಲಾಗಿದೆ ಎಂಬುದರ ಕುರಿತು ಟಿಪ್ಪಣಿಯೊಂದನ್ನು ಗುರುವಾರ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಗುಜರಾತ್ ನಲ್ಲಿ ನಡೆದ ಗಲಭೆ ಕುರಿತು ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ಪಠ್ಯಕ್ರಮದಲ್ಲಿನ 187-189ನೇ ಪುಟದಲ್ಲಿ ಇದ್ದ ಗುಜರಾತ ಗಲಭೆ ಅಂಶಗಳನ್ನು ಕೈ ಬಿಟ್ಟು ಪಠ್ಯ ತರ್ಕಬದ್ಧಗೊಳಿಸಿದೆ ಎಂದು ಹೇಳಲಾಗಿದೆ.

ಕೈ ಬಿಟ್ಟ ಅಂಶವೇನು?

ಗುಜರಾತ್ ನಲ್ಲಿ 2002 ನಡೆದ ಕೋಮಗಳ ಮಧ್ಯದ ಹಿಂಸಾಚಾರ, ಗಲಭೆಗಳು ರಾಜಕೀಯ ಸೈದ್ಧಾಂತಿಕ ಆಧಾರದಲ್ಲಿ, ಭಾವೋದ್ವೇಗಗಳಿಗೆ ಒಳಗಾಗಿ ನಡೆದ ಗಲಭೆ ಆಗಿವೆ. ರಾಜಕೀಯ ದುರುದ್ದೇಶಗಳಿಗಾಗಿ ಜನರು ಭಾವನೆ ಅದರಲ್ಲೂ ಧಾರ್ಮಿಕ ಭಾವನೆ ಬಳಕೆ ಮಾಡಿಕೊಳ್ಳಲಾಗಿತ್ತು. ಅದರಿಂದ ನಾಡಿಗೆ ತೀವ್ರತರ ಅಪಾಯಗಳು ಎದುರಾಗುತ್ತವೆ. ಇದು ಪ್ರಜಾಸತ್ತಾತ್ಮಕ ರಾಜಕೀಯಕ್ಕೆ ಅಪಾಯ ತಂದೊಡ್ಡಬಲ್ಲ ಸಂಗತಿಯಾಗಿದೆ. ಇಂತಹಕೆಲವು ಅಂಶಗಳನ್ನು ಎನ್ ಸಿಇ ಆರ್ ಟಿ ಪಠ್ಯದಿಂದ ಕೈ ಬಿಟ್ಟಿದೆ ಎಂದು ತಿಳಿದು ಬಂದಿದೆ.

NCERT Drops Text on Gujarat riot From 2nd PUC Book

105, 113 ಮತ್ತು 117ನೇ ಪುಟಗಳಿಗೆ ಕೋಕ್

ಗಲಭೆ ನಡೆದ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ರಾಜನಾದವನು ರಾಜಧರ್ಮ ಅನುಸರಿಸಬೇಕು. ಅಧಿಕಾರ ಹಿಡಿದ ಆಡಳಿತಗಾರ ತನ್ನ ಪ್ರಜೆಗಳ ನಡುವೆ ಜಾತಿ, ಧರ್ಮ, ಪಂಗಡದ ಹೆಸರಿನಲ್ಲಿ ತಾರತಮ್ಯ ಮಾಡಬಾರದು ಎಂದು ಹೇಳಿದ್ದರು. ಈ ಅಂಶಗವನ್ನು ಅದೇ ಪುಟಗಳಲ್ಲಿ ಉಲ್ಲೇಕಿಸಲಾಗಿದೆ.

ನಕ್ಸಲೀಯ ಚಳವಳಿ ಇತಿಹಾಸ ಕುರಿತು ನಮೂದಾಗಿದ್ದ 105ನೇ ಪುಟಗಳನ್ನು ಹಾಗೂ ತುರ್ತು ಪರಿಸ್ಥಿತಿ ಹೇರಿದ್ದ ವೇಳೆ ಆ ಬಗ್ಗೆ ಉಂಟಾಗಿದ್ದ ವಿವಾದಕ್ಕೆ ಸಂಬಂಧಿಸಿದ ಅಂಶಗಳು ಇದ್ದ ಪುಟ 133 ಮತ್ತು 117ನೇ ಪುಟಗಳನ್ನು ಕೈ ಬಿಡಲಾಗಿದೆ ಎನ್ನಲಾಗಿದೆ.

ಪಠ್ಯಕ್ರಮ ಉದ್ದಕ್ಕೂ ಅತಿಕ್ರಮಿಸಿದ್ದ ಒಂದೇ ರೀತಿಯ ವಿಷಯಗಳು ಹಾಗೂ ಇಂದಿನ ಪ್ರಸ್ತುತ ಸನ್ನಿವೇಶಗಳಲ್ಲಿ ಅಪ್ರಸ್ತುವೆನಿಸುವ ಸತ್ಯಕ್ಕೆ ದೂರವಾದ ಅಂಶಗಳಿಗೆ ಪಠ್ಯದಿಂದ ಕೋಕ್ ನೀಡಲಾಗಿದೆ.

ಕೋವಿಡ್ ಕಾಲದಲ್ಲಿ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಪಠ್ಯಕ್ರಮ ತರ್ಕಬದ್ಧಗೊಳಿಸುವಿಕೆ ಪ್ರಕ್ರಿಯೆ ಆರಂಭಿಸಲಾಗಿತ್ತು. ಈ ಕುರಿತು ರಾಷ್ಟ್ರೀಯ ಶಿಕ್ಷಣ ನೀತಿ-2020 ಮಾರ್ಗದರ್ಶನ, ನಿಯಮಗಳ ಅನ್ವಯ ಪರಿಷ್ಕರಣೆ ಮಾಡಲಾಗಿದೆ ಎಂದು ಎನ್ ಸಿಇಆರ್ ಟಿ ಮಾಹಿತಿ ನೀಡಿದೆ.

English summary
NCERT removed few content on 2002 Gujarat riots from class 12 social science text book as part of its Text Book Rationalization drive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X