ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೌಕಾಪಡೆಯ ದಿನ 2021: ಆಪರೇಷನ್ ಟ್ರೈಡೆಂಟ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ

|
Google Oneindia Kannada News

ನವದೆಹಲಿ ಡಿಸೆಂಬರ್ 3: ಭಾರತೀಯ ನೌಕಾಪಡೆ ಭಾರತೀಯ ರಕ್ಷಣಾ ಪಡೆಗಳ ಒಂದು ಅಂಗ. ಇದು ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು 55000 ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸುಮಾರು 5000 ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು 2000 ಜನ ನೌಕಾ ಕಮಾಂಡೋಗಳಾಗಿದ್ದಾರೆ. ಭಾರತೀಯ ನೌಕಾಪಡೆ 155 ನೌಕೆಗಳನ್ನು ಹೊಂದಿದ್ದು, ಐ.ಎನ್.ಎಸ್.ವಿರಾಟ್ ಎಂಬ ವಾಯು ಯುದ್ಧ ನೌಕೆಯನ್ನು ಹೊಂದಿದೆ. ಸಂಪೂರ್ಣ ಏಷ್ಯಾ ಖಂಡದಲ್ಲಿರುವ ಎರಡು ವಾಯು ಯುದ್ಧ ನೌಕೆಗಳಲ್ಲಿ ಇದು ಒಂದು.

ಭಾರತೀಯ ನೌಕಾಪಡೆಯ ಪಾತ್ರ ಮತ್ತು ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಡಿಸೆಂಬರ್ 4 ರಂದು ಭಾರತದಲ್ಲಿ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ. 1971 ರಲ್ಲಿ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ಆಪರೇಷನ್ ಟ್ರೈಡೆಂಟ್ ಅನ್ನು ಪ್ರಾರಂಭಿಸುವ ನೆನಪಿಗಾಗಿ ಈ ದಿನವನ್ನು ಆಯ್ಕೆ ಮಾಡಲಾಗಿದೆ. ಈ ದಿನದಂದು ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ ಮತ್ತು ಪ್ರತಿ ವರ್ಷ, ನೌಕಾಪಡೆಯ ದಿನವನ್ನು ಆಚರಿಸಲು ವಿಭಿನ್ನ ಥೀಮ್ ಅನ್ನು ಪ್ರಸ್ತಾಪಿಸಲಾಗುತ್ತದೆ. ನೌಕಾಪಡೆಯ ದಿನ, ಅದರ ಇತಿಹಾಸ ಮತ್ತು ಅದರ ಮಹತ್ವದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಓದಿ.

ಭಾರತೀಯ ನೌಕಾಪಡೆಯ ದಿನ: ಇತಿಹಾಸ

ಭಾರತೀಯ ನೌಕಾಪಡೆಯ ದಿನ: ಇತಿಹಾಸ

1971 ರಲ್ಲಿ, ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ಪಾಕಿಸ್ತಾನವು ಡಿಸೆಂಬರ್ 3 ರ ಸಂಜೆ ಭಾರತೀಯ ವಾಯುನೆಲೆಗಳ ಮೇಲೆ ಆಕ್ರಮಣವನ್ನು ಪ್ರಾರಂಭಿಸಿತು. ಭಾರತವು ಅವರ ದಾಳಿಗೆ ಪ್ರತಿಕ್ರಿಯೆಯಾಗಿ, ನಿರ್ಘಾಟ್, ವೀರ್ ಮತ್ತು ನಿಪತ್ ಎನ್ನುವ 3 ಕ್ಷಿಪಣಿ ದೋಣಿಗಳನ್ನು ಕರಾಚಿ ಕಡೆಗೆ ವೇಗದಲ್ಲಿ ರವಾನಿಸಿತು. ಆಪರೇಷನ್ ಟ್ರೈಡೆಂಟ್ ಸಮಯದಲ್ಲಿ ಭಾರತೀಯ ನೌಕಾಪಡೆಯು PNS ಖೈಬರ್ ಸೇರಿದಂತೆ 4 ಪಾಕಿಸ್ತಾನಿ ಹಡಗುಗಳನ್ನು ಮುಳುಗಿಸಿತು. ಜೊತೆಗೆ ನೂರಾರು ಪಾಕಿಸ್ತಾನಿ ನೌಕಾಪಡೆ ಸಿಬ್ಬಂದಿಯನ್ನು ಕೊಂದಿತು. ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಕೊಲ್ಲಲ್ಪಟ್ಟವರನ್ನು ಸಹ ಈ ದಿನ ನೆನಪಿಸಿಕೊಳ್ಳಲಾಗುತ್ತದೆ. ಮರಾಠ ಚಕ್ರವರ್ತಿ, ಛತ್ರಪತಿ ಶಿವಾಜಿ ಮಹಾರಾಜರನ್ನು ಭಾರತೀಯ ನೌಕಾಪಡೆಯ ಪಿತಾಮಹ ಎಂದು ಪರಿಗಣಿಸಲಾಗಿದೆ.

ಭಾರತೀಯ ನೌಕಾಪಡೆಯ ದಿನ: ಮಹತ್ವ

ಭಾರತೀಯ ನೌಕಾಪಡೆಯ ದಿನ: ಮಹತ್ವ

ನೌಕಾಪಡೆಯು 1971 ರ ಯುದ್ಧದ ವಿಜಯದ 50 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ 2021 ಅನ್ನು 'ಸ್ವರ್ಣಿಮ್ ವಿಜಯ್ ವರ್ಷ್' ಎಂದು ಆಚರಿಸಲು ಯೋಜಿಸಿದೆ. ಭಾರತೀಯ ನೌಕಾಪಡೆಯನ್ನು ಈಸ್ಟ್ ಇಂಡಿಯಾ ಕಂಪನಿಯು 1612 ರಲ್ಲಿ ಸ್ಥಾಪಿಸಿತು. ನಂತರ ಇದನ್ನು ರಾಯಲ್ ಇಂಡಿಯಾ ನೇವಿ ಎಂದು ಹೆಸರಿಸಲಾಯಿತು ಮತ್ತು ಸ್ವಾತಂತ್ರ್ಯದ ನಂತರ ಇದನ್ನು 1950 ರಲ್ಲಿ ಭಾರತೀಯ ನೌಕಾಪಡೆ ಎಂದು ಮರುಸಂಘಟಿಸಲಾಯಿತು.

ಪಾಕಿಸ್ತಾನದ ವಿರುದ್ಧದ ವಿನಾಶಕಾರಿ ಯುದ್ಧದ ನಂತರ, ಇಡೀ ದೇಶವು ಭಾರತೀಯ ನೌಕಾಪಡೆಯ ಯಶಸ್ಸನ್ನು ಆಚರಿಸಿತು. ಭಾರತದ ಮಹತ್ವ ಮತ್ತು ವಿಜಯದ ಬಗ್ಗೆ ಮಕ್ಕಳಿಗೆ ಮತ್ತು ಭಾರತದ ನಾಗರಿಕರಿಗೆ ಶಿಕ್ಷಣ ನೀಡುವುದು ಸಹ ಮುಖ್ಯವಾಗಿದೆ. ಮ್ಯಾರಥಾನ್‌ಗಳು, ಇಂಟರ್‌ಸ್ಕೂಲ್ ರಸಪ್ರಶ್ನೆ ಸ್ಪರ್ಧೆ, ಏರ್ ಡಿಸ್‌ಪ್ಲೇಗಳು ಮತ್ತು ಟ್ಯಾಟೂ ಸಮಾರಂಭಗಳಂತಹ ಹಲವಾರು ಕಾರ್ಯಕ್ರಮಗಳು ಈ ದಿನ ನಡೆಯುತ್ತವೆ.

INS ವಿಕ್ರಮಾದಿತ್ಯ

INS ವಿಕ್ರಮಾದಿತ್ಯ

ಮೂರು ಕಡೆ ಸಾಗರ ಆವರಿಸಿರುವ ಭಾರತದ ರಕ್ಷಣೆಗೆ ಕನಿಷ್ಠ ಮೂರು ವಿಮಾನವಾಹಕ ನೌಕೆಗಳು ಬೇಕು. ಆದರೆ ಭಾರತ ಈಗ 'ವಿಕ್ರಮಾದಿತ್ಯ' ಒಂದನ್ನೇ ನೆಚ್ಚಿದೆ. ಈ ನೌಕೆಗೂ ಅಗತ್ಯ ಸಂಖ್ಯೆಯಲ್ಲಿ ಬೆಂಗಾವಲು ಸಬ್‌ಮರೀನ್‌ಗಳು ಮತ್ತು ಆಗಸದಿಂದಲೇ ಸಬ್‌ಮರೀನ್‌ಗಳನ್ನು ಗುರುತಿಸಿ ನಾಶಪಡಿಸಬಲ್ಲ ಹೆಲಿಕಾಪ್ಟರ್‌ಗಳ ಬೆಂಬಲ ಇಲ್ಲ.

INS ವಿಕ್ರಮಾದಿತ್ಯ ಎಂಬುದು 284 ಮೀಟರ್ ಉದ್ದದ್ದ ಹಾಗೂ 60 ಮೀಟರ್ ಅಗಲದ ನೌಕೆ. ಅಂದಾಜಿಗೆ ಸರಿಯಾಗಿ ಸಿಗುವಂತೆ ಹೇಳಬೇಕೆಂದರೆ, ಫುಟ್​ಬಾಲ್​ ಆಡುವಂಥ ಮೂರು ಮೈದಾನವನ್ನು ಒಟ್ಟುಗೂಡಿಸಿದರೆ ಅದೆಷ್ಟು ವಿಶಾಲ ಆಗುತ್ತದೋ ಅಷ್ಟು ವಿಶಾಲ ಆಗಿರುವಂಥ ನೌಕೆ ಇದು. ತಳಭಾಗದಿಂದ ಅದರ ಗರಿಷ್ಠ ಪ್ರಮಾಣದ ತುದಿಗೆ 20 ಅಂತಸ್ತು ಎತ್ತರದಲ್ಲಿದೆ. ಈ ನೌಕೆಯಲ್ಲಿ ಒಟ್ಟು 22 ಡೆಕ್​ಗಳಿದ್ದು, 1600ರಷ್ಟು ಸಿಬ್ಬಂದಿಯನ್ನು ಒಯ್ಯುತ್ತದೆ. ಕೀವ್- ಕ್ಲಾಸ್ ವಿಮಾನ ಹೊತ್ತೊಯ್ಯುವ- ಮಾರ್ಪಾಟು ಮಾಡಲಾದ ಈ ಯುದ್ಧ ನೌಕೆಯನ್ನು ಭಾರತವು ರಷ್ಟಾದಿಂದ 2013ನೇ ಇಸವಿಯಲ್ಲಿ ಖರೀದಿ ಮಾಡಿದೆ. ಆ ನಂತರ ಅದಕ್ಕೆ ಭಾರತದ ಖ್ಯಾತ ಸಾಮ್ರಾಟ ವಿಕ್ರಮಾದಿತ್ಯನ ಹೆಸರನ್ನು ಇಡಲಾಯಿತು. ಇದು ಮೂಲತಃ ಬಾಕುನಲ್ಲಿ ನಿರ್ಮಿಸಲಾಯಿತು ಮತ್ತು 1987ರಲ್ಲಿ ಕಾರ್ಯಾರಂಭ ಮಾಡಿತು. ಈ ನೌಕೆಯು ಸೋವಿಯತ್ (ಸೋವಿಯತ್ ಒಕ್ಕೂಟವನ್ನು ವಿಸರ್ಜಿಸುವವರೆಗೂ) ಮತ್ತು ರಷ್ಯಾದ ನೌಕಾಪಡೆಯಿಂದ ಬಳಕೆ ನಿಲ್ಲಿಸುವ ತನಕ 1996ರವರೆಗೆ ಕಾರ್ಯ ನಿರ್ವಹಿಸಿತು. ಇದರ ಕಾರ್ಯ ನಿರ್ವಹಣೆ ತುಂಬಾ ದುಬಾರಿ.

ಭಾರತೀಯ ನೌಕಾಪಡೆ

ಭಾರತೀಯ ನೌಕಾಪಡೆ

ಭಾರತದ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ 'ಐಎನ್‌ಎಸ್‌ ವಿಕ್ರಾಂತ್' 2013ರಲ್ಲಿ ಸಾಗರಕ್ಕಿಳಿದಿದೆ. ಆದರೆ ಇನ್ನೂ ಅದರ ಪರೀಕ್ಷೆಗಳು ಮುಗಿದಿಲ್ಲ. ಇದು 2020ರ ವೇಳೆಗೆ ಸೇವೆಗೆ ಲಭ್ಯವಾಗಬಹುದು. ಕೊಚಿನ್‌ನಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಮತ್ತೊಂದು ವಿಮಾನ ವಾಹಕ ನೌಕೆ 2023ರ ವೇಳೆಗೆ ನೌಕಾಪಡೆ ಸೇವೆಗೆ ಲಭ್ಯವಾಗುವ ನಿರೀಕ್ಷೆ ಇದೆ. ರಕ್ಷಣಾ ಸಮತೋಲನದಲ್ಲಿ ಚೀನಾಗೆ ಸಮಾನ ನೆಲೆಯಲ್ಲಿ ನಿಲ್ಲಲು ಮತ್ತು ಹಿಂದೂ ಮಹಾಸಾಗರದಲ್ಲಿ ಪಾರಮ್ಯ ಮೆರೆಯುವ ಕನಸು ನನಸು ಮಾಡಿಕೊಳ್ಳಲು ನಮ್ಮ ನೌಕಾದಳದ ತ್ವರಿತ ಸುಧಾರಣೆ ಅತ್ಯಗತ್ಯ. ಭಾರತ ದೇಶವು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು ಮತ್ತು ಭವಿಷ್ಯದ ಬೆಳವಣಿಗೆಗಳನ್ನು ಅಂದಾಜಿಸಿ ನಮ್ಮ ದೇಶದ ನೌಕಾದಳದ ಸಾಮರ್ಥ್ಯ ಹೀಗಿರಬೇಕು ಎಂದು ಕೆಲ ವಿಶ್ಲೇಷಕರು ಲೆಕ್ಕಾಚಾರ ಹಾಕಿದ್ದಾರೆ. ಈ ಲೆಕ್ಕಾಚಾರದಂತೆ ಒಟ್ಟು 3 ವಿಮಾನವಾಹಕ ನೌಕೆಗಳು, 4 ನ್ಯೂಕ್ಲಿಯರ್ ಸಬ್‌ಮರೀನ್‌ಗಳು, 16 ಸಾಂಪ್ರದಾಯಿಕ ಸಬ್‌ಮರೀನ್‌ಗಳು, 32 (ದಾಳಿ) ಸಮರನೌಕೆಗಳು, ಸೈನಿಕರನ್ನು ದೂರ ದೇಶಗಳ ತೀರಕ್ಕೆ ಕ್ಷಿಪ್ರಗತಿಯಲ್ಲಿ ಸಾಗಿಸಬಲ್ಲ 4 ಸಾಗಣೆ (ಆಂಫೀಬಿಯಸ್) ನೌಕೆಗಳು, 4 ತೈಲ ಸಾಗಣೆ ಟ್ಯಾಂಕರ್‌ಗಳು, 12 ಕ್ಷಿಪಣಿ ಉಡಾವಣಾ ನೌಕೆಗಳು, 12 ಮೈನ್‌ (ಸಾಗರದಾಳದ ಬಾಂಬ್) ನಾಶಕ ನೌಕೆಗಳು, 12 ಗಸ್ತು ನೌಕೆಗಳು, 20 ವೇಗವಾಗಿ ಸಂಚರಿಸಬಲ್ಲ ದಾಳಿ ನೌಕೆಗಳು, 12 ಗಸ್ತು ವಿಮಾನಗಳು, ತಲಾ 12ರಿಂದ 24 ಯುದ್ಧ ವಿಮಾನಗಳಿರುವ ನಾಲ್ಕು ವೈಮಾನಿಕ ಯುದ್ಧ ತಂಡಗಳು, 24 ಮಲ್ಟಿರೋಲ್ ಮತ್ತು 36 ಲಘು ಹೆಲಿಕಾಪ್ಟರ್‌ಗಳು ನೌಕಾದಳದಲ್ಲಿ ಇರಬೇಕಂತೆ.

English summary
Navy Day in India is observed on December 4 every year to recognise the role and achievements of the Indian Navy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X