ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ: ಮತ್ತೆ ಮೋದಿ ಸರ್ಕಾರವನ್ನು ಹಳಿದ ಸಿಧು

|
Google Oneindia Kannada News

ಅವಕಾಶವಾದಿ ರಾಜಕಾರಣ ಎಂದರೆ ಇದೇ ಇರಬೇಕು! ಬಿಜೆಪಿಯೊಂದಿಗಿದ್ದ ಸಂದರ್ಭದಲ್ಲಿ ಕಂದಹಾರ್ ವಿಮಾನ ಅಪಹರಣದ ಬಗ್ಗೆ ಸೊಲ್ಲೆತ್ತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಇದೀಗ ಕಾಂಗ್ರೆಸ್ ಗೆ ಸೇರಿದ ಮೇಲೆ ಈ ಕುರಿತು ಪ್ರಶ್ನೆ ಕೇಳುತ್ತಿದ್ದಾರೆ!

'ದೇಶದ್ರೋಹಿ' ಸಿಧುವನ್ನು ಕಾಂಗ್ರೆಸ್ಸಿನಿಂದ ಅಮಾನತು ಮಾಡಿ : ಅಕಾಲಿ'ದೇಶದ್ರೋಹಿ' ಸಿಧುವನ್ನು ಕಾಂಗ್ರೆಸ್ಸಿನಿಂದ ಅಮಾನತು ಮಾಡಿ : ಅಕಾಲಿ

"1999 ರ ಕಂದಹಾರ್ ವಿಮಾನ ಅಪಹರಣ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಿದ್ದು ಯಾರು ಎಂಬ ಪ್ರಶ್ನೆಗೆ ನನಗೆ ಉತ್ತರ ಬೇಕಿದೆ, ಅದಕ್ಕೆ ಯಾರು ಹೊಣೆ? ನಮ್ಮ ಹೋರಾಟ ಅವರ ವಿರುದ್ಧ. ಸೈನಿಕರು ಯಾಕೆ ಸಾಯಬೇಕು? ಇದಕ್ಕೆ ಒಂದು ಶಾಶ್ವತ ಪರಿಹಾರ ಬೇಕು" ಎಂದು ನವಜೋತ್ ಸಿಂಗ್ ಸಿಧು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವಜೋತ್ ಸಿಧುನನ್ನು ಪಾಕಿಸ್ತಾನಕ್ಕೆ ಕಳಿಸಿ, ದೇಶಭಕ್ತರ ಆಕ್ರೋಶನವಜೋತ್ ಸಿಧುನನ್ನು ಪಾಕಿಸ್ತಾನಕ್ಕೆ ಕಳಿಸಿ, ದೇಶಭಕ್ತರ ಆಕ್ರೋಶ

"ನನ್ನ ನಿಲುವಗೆ ನಾನು ಬದ್ಧವಾಗಿದ್ದೇನೆ. ಭಯೋತ್ಪಾದನೆಯನ್ನು ಸಹಿಸಿಕೊಳ್ಳಬೇಕು ಎಂದು ನಾನು ಎಂದಿಗೂ ಹೇಳುವುದಿಲ್ಲ. ಆರೋಪಿಗಳಿಗೆ ಮುಂದಿನ ತಲೆಮಾರುಗಳೂ ನೆನಪಿಟ್ಟುಕೊಳ್ಳುವಂಥ ಉಗ್ರ ಶಿಕ್ಷೆಯಾಗಬೇಕು ಎಂಬುದು ನನ್ನ ಭಾವನೆ" ಎಂದು ಕಾಂಗ್ರೆಸ್ ಮುಖಂಡ ಸಿದ್ದು ಹೇಳಿದ್ದಾರೆ.

Navjot Sindhu again attacks Modi government for Pulwama attack

ಪುಲ್ವಾಮಾದಲ್ಲಿ 44 ಯೋಧರ ಬಲಿದಾನಕ್ಕೆ ಕಾರಣವಾದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಪಾಕಿಸ್ತಾನಕ್ಕೆ ಸೇರಿದ್ದು. ಮತ್ತು ಈ ಘಟನೆಗೆ ಪಾಕಿಸ್ತಾನವೇ ಕಾರಣ ಎಂದು ಇಡೀ ದೇಶವೂ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಒಂದು ಘಟನೆಗೆ ಇಡೀ ದೇಶವನ್ನೂ ಹೊಣೆ ಮಾಡುವುದು ಸರಿಯಲ್ಲ. ಮಾತುಕತೆಯ ಮೂಲಕ ಪರಿಹಾರ ಹುಡುಕಿ ಎಂದು ಸಿಧು ಹೇಳಿದ್ದರು. ಅವರ ಈ ಮಾತು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದ ನವಜೋತ್ ಸಿಂಗ್ ಸಿದ್ದು, ವ್ಯಾಪಕ ಆಕ್ರೋಶಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದ ನವಜೋತ್ ಸಿಂಗ್ ಸಿದ್ದು, ವ್ಯಾಪಕ ಆಕ್ರೋಶ

ಕಂದಹಾರ್ ನಲ್ಲಿ 168 ಪ್ರಯಾಣಿಕರಿದ್ದ ವಿಮಾನವನ್ನು ಉಗ್ರರು ಅಪಹರಿಸಿದ್ದರು. ಪ್ರಯಾಣಿಕರನ್ನು ಉಳಿಸಬೇಕೆಂದರೆ 30 ಕ್ಕೂ ಹೆಚ್ಚು ಉಗ್ರರನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಡಲಾಗಿತ್ತು. ಒತ್ತೆಯಾಳುಗಳನ್ನು ಉಳಿಸುವ ಸಲುವಾಗಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಉಗ್ರರನ್ನು ಬಿಡುಗಡೆ ಮಾಡಿ, ಪ್ರಯಾಣಿಕರನ್ನು ಉಳಿಸಿಕೊಂಡಿತ್ತು.

English summary
Congress leader Navjot Singh Sidhu said, 'I want to ask who released those involved in 1999 Kandahar incident? Who's responsibility is it? Our fight is against them. Why should a soldier die? Why can't there be a permanent solution?'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X