ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಮಸೂದೆ: ರಾಜ್ಯಸಭೆಯಲ್ಲಿ ಬಿಜೆಪಿಗೆ ಕೈಕೊಟ್ಟ ಬಿಜೆಡಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 21: ರಾಜ್ಯಸಭೆಯಲ್ಲಿ ಬಿಜು ಜನತಾದಳ ಪಕ್ಷವು ಕೃಷಿಗೆ ಸಂಬಂಧಿಸಿದ ಎರಡು ಮಸೂದೆಯನ್ನು ವಿರೋಧಿಸುವ ಮೂಲಕ ಆಡಳಿತರೂಢ ಬಿಜೆಪಿ ಹಾಗೂ ಎನ್‌ಡಿಎಗೆ ಅಶ್ಚರ್ಯ ನೀಡಿದೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಸಾಕಷ್ಟು ವಿಧೇಯಕಗಳಿಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಗೆ ಬೆಂಬಲ ನೀಡುತ್ತಿದ್ದ ಬಿಜೆಡಿ, ಈ ಬಾರಿ ಮಾತ್ರ ಕೃಷಿಗೆ ಸಂಬಂಧಿಸಿದ ವಿಧೇಯಕದಲ್ಲಿ ಯಾವುದೇ ಬೆಂಬಲವನ್ನು ನೀಡಿಲ್ಲ. ಲೋಕಸಭೆಯಲ್ಲೂ ವಿಧೇಯಕವನ್ನು ಸದನ ಸಮಿತಿಗೆ ಕಳಿಸಬೇಕು ಎನ್ನುವುದು ಬಿಜೆಪಿ ಸಂಸದರ ವಾದವಾಗಿತ್ತು .

ಕೇಂದ್ರದ ಕೃಷಿ ಮಸೂದೆ ಬಗ್ಗೆ ರೈತರಿಗೇಕೆ ಬೇಸರ: ಇಲ್ಲಿದೆ ಕಾರಣ ಕೇಂದ್ರದ ಕೃಷಿ ಮಸೂದೆ ಬಗ್ಗೆ ರೈತರಿಗೇಕೆ ಬೇಸರ: ಇಲ್ಲಿದೆ ಕಾರಣ

ಆದರೆ ಲೋಕಸಭೆಯಲ್ಲಿ ಯಾವುದೇ ಮತದಾನ ನಡೆದಿರಲಿಲ್ಲ. ಹಾಗೆಯೇ ರಾಜ್ಯಸಭೆಯಲ್ಲೂ ಕೂಡ ವಿಧೇಯಕದ ಹಾಲಿ ಕೆಲವು ಅಂಶಗಳಿಗೆ ತನ್ನ ಆಕ್ಷೇಪವಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ರೈತರ ಹಿತದೃಷ್ಟಿಯಿಂದ ಬಿಜೆಡಿ ಇಂತಹ ನಿಲುವು ತಾಳಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Naveen Patnaik Opposed Two Farm Bills Of Central Government

ಹಾಗೆಯೇ ಇತ್ತೀಚೆಗೆ ನಡೆದ ಉಪ ಸಭಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಡಿ ಆಡಳಿತಾರೂಢ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿತ್ತು. ಹಾಗೆಯೇ ಬಿಜೆಡಿ ಸಂಸದರಿಗೆ ಈ ಸ್ಥಾನವನ್ನು ನೀಡಲಾಗಿತ್ತು.

ಆದರೆ ಆ ಸಂದರ್ಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನವೀನ್ ಪಟ್ನಾಯಕ್ ಅವರನ್ನು ಸಂಪರ್ಕಸಿ ಸರ್ಕಾರವನ್ನು ಬೆಂಬಲಿಸಲು ಮನವಿ ಮಾಡಿದ್ದರು ಎಂದು ಹೇಳಲಾಗಿದೆ.

ಆದರೆ ಈ ಬಾರಿ ಮಾತ್ರ ಬಿಜೆಪಿಗೆ ಬಿಜೆಡಿ ಶಾಕ್ ನೀಡಿದೆ, ಆದರೆ ಈ ಹಿಂದೆ ಕಾಶ್ಮೀರದ ವಿಶೇಷ ಮಾನ್ಯತೆ ನೀಡುವ 370 ವಿಧೇಯಕ ರದ್ದು, ತ್ರಿವಳಿ ತಲಾಖ್ ಕಾಯ್ದೆಗೆ ಸಂಬಂಧಿಸಿದಂತೆ ಬಿಜೆಪಿಗೆ ಬಿಜೆಡಿ ಬೆಂಬಲ ನೀಡಿತ್ತು.

English summary
The Biju Janata Dal (BJD), led by Odisha Chief Minister Naveen Patnaik, took many by surprise when it opposed the two farm bills the Farmers Produce Trade and Commerce (Promotion and Felicitation) Bill, 2020, and the Farmers’ (Empowerment and Protection) Agreement on Price Assurance and Farm Services Bill, 2020 in the Upper House of Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X