ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಉರುಳಿನಿಂದ ಸೋನಿಯಾ, ರಾಹುಲ್ ಗಾಂಧಿಗೆ ತಾತ್ಕಾಲಿಕ ನೆಮ್ಮದಿ

|
Google Oneindia Kannada News

ನವದೆಹಲಿ, ಡಿಸೆಂಬರ್ 4: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿವಾದಕ್ಕೆ ಸಂಬಂಧಿಸಿದಂತೆ ತೆರಿಗೆ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರಗತಿಯ ಕ್ರಮಕ್ಕೆ ಮುಂದಾಗದಂತೆ ಸುಪ್ರೀಂಕೋರ್ಟ್ ಆದಾಯ ತೆರಿಗೆ ಇಲಾಖೆಗೆ ಸೂಚಿಸಿದೆ.

ನ್ಯಾಷನಲ್ ಹೆರಾಲ್ಡ್ ವಿವಾದ: ತಡೆಯಾಜ್ಞೆ ನೀಡದ ಕೋರ್ಟ್, ಕಾಂಗ್ರೆಸ್‌ಗೆ ಹಿನ್ನಡೆನ್ಯಾಷನಲ್ ಹೆರಾಲ್ಡ್ ವಿವಾದ: ತಡೆಯಾಜ್ಞೆ ನೀಡದ ಕೋರ್ಟ್, ಕಾಂಗ್ರೆಸ್‌ಗೆ ಹಿನ್ನಡೆ

ಐಟಿ ಇಲಾಖೆ ವಿರುದ್ಧ ತಡೆ ನೀಡಿ ಆದೇಶ ಹೊರಡಿಸಿದ ನ್ಯಾಯಮೂರ್ತಿ ಎಕೆ ಸಿಕ್ರಿ ನೇತೃತ್ವದ ನ್ಯಾಯಪೀಠ, ವಿವಾದದ ಮುಂದಿನ ವಿಚಾರಣೆಯನ್ನು ಜನವರಿ 8ಕ್ಕೆ ನಿಗದಿಪಡಿಸಿತು.

ನ್ಯಾಷನಲ್ ಹೆರಾಲ್ಡ್: ಕಾಂಗ್ರೆಸ್ ನಾಯಕರಿಗೀಗ ಚಂದಾದಾರರ ಚಿಂತೆ ನ್ಯಾಷನಲ್ ಹೆರಾಲ್ಡ್: ಕಾಂಗ್ರೆಸ್ ನಾಯಕರಿಗೀಗ ಚಂದಾದಾರರ ಚಿಂತೆ

2011-12ರ ಆರ್ಥಿಕ ವರ್ಷದಲ್ಲಿ ಗಾಂಧಿ ಕುಟುಂಬದ ಆದಾಯದ ಅಂದಾಜು ಮಾಡುವ ಕಾರ್ಯದಲ್ಲಿ ಇಲಾಖೆ ಮುಂದುವರಿಯಬಹುದು. ಅಂತಿಮ ಆದೇಶವನ್ನೂ ನೀಡಬಹುದು. ಆದರೆ, ಅದನ್ನು ಜಾರಿ ಮಾಡುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.

national herald case sonia gandhi rahul gandhi tax department supreme court interim

ಸೋನಿಯಾ ಮತ್ತು ರಾಹುಲ್ ಅವರ ಆಸ್ತಿ ಮೊತ್ತವನ್ನು ಮರು ಮೌಲ್ಯಮಾಪನ ಮಾಡುವ ಪ್ರಕ್ರಿಯೆಗೆ ಎಲ್ಲ ನ್ಯಾಯಾಲಯಗಳೂ ಅನುಮತಿ ನೀಡಿದ್ದವು. ಆದರೆ, ಅಂತಿಮ ಆದೇಶ ಹೊರಡಿಸಲು ಅವಕಾಶ ನೀಡಿರಲಿಲ್ಲ.

ಕಾಂಗ್ರೆಸ್ಸಿನ ನ್ಯಾಷನಲ್ ಹೆರಾಲ್ಡ್ ವಿರುದ್ಧ 5,000 ಕೋಟಿ ಮೊಕದ್ದಮೆ ಕಾಂಗ್ರೆಸ್ಸಿನ ನ್ಯಾಷನಲ್ ಹೆರಾಲ್ಡ್ ವಿರುದ್ಧ 5,000 ಕೋಟಿ ಮೊಕದ್ದಮೆ

ನ್ಯಾಯಾಲಯದ ಆದೇಶಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಪ್ರಕರಣವು ವಿಚಾರಣೆಗೂ ಒಪ್ಪಿಕೊಳ್ಳಲು ಅರ್ಹವಾಗಿರಲಿಲ್ಲ. ಮಧ್ಯಂತರ ಆದೇಶವು ಐಟಿ ಇಲಾಖೆಗೆ ಹಿನ್ನಡೆಯುಂಟು ಮಾಡಲಿದೆ ಎಂದು ವಾದಿಸಿದರು.

ಆದರೆ, ಅದನ್ನು ಒಪ್ಪದ ನ್ಯಾಯಪೀಠ, ಎರಡೂ ಕಡೆಗಳಿಗೆ ಸಮಾನವಾಗಿರುವ ಆದೇಶವನ್ನು ನೀಡಲಾಗಿದೆ. ಪ್ರಕರಣದ ಸುದೀರ್ಘ ವಿಚಾರಣೆಯನ್ನು ಇಂದು ನಡೆಸಲು ಸಾಧ್ಯವಾಗದ ಸಲುವಾಗಿ ಮಧ್ಯಂತರ ಆದೇಶ ನೀಡುವುದು ಸೂಕ್ತ ಎಂದು ಹೇಳಿತು.

English summary
Supreme Court restrained Tax Department from taking coercive action against Sonia Gandhi and Rahul Gandhi in tax re-assessment case related to national herald controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X