ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ಲಿ ಗುಪ್ಕರ್ ಗ್ಯಾಂಗ್, ಇಲ್ಲಿ ಮಿತ್ರಪಕ್ಷ: ಇದು ಬಿಜೆಪಿ ಅಧಿಕಾರದ ಆಟ!

|
Google Oneindia Kannada News

ನವದೆಹಲಿ, ನವೆಂಬರ್.20: ಜಮ್ಮು-ಕಾಶ್ಮೀರದಲ್ಲಿ ರಚಿಸಲಾದ ಪೀಪಲ್ಸ್ ಆಲಿಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್(PAGD) ಮೈತ್ರಿಕೂಟವನ್ನು ಬಿಜೆಪಿಯು ಗ್ಯಾಂಗ್ ಎಂದು ದೂಷಿಸಿದೆ. ಈ ಗ್ಯಾಂಗ್ ಜಮ್ಮು ಕಾಶ್ಮೀರದಲ್ಲಿ ವಿದೇಶಿ ಪಡೆಗಳು ಪ್ರವೇಶಿಸುವುದನ್ನು ಬೆಂಬಲಿಸುತ್ತವೆ ಎಂದು ಬಿಜೆಪಿ ಆರೋಪಿಸಿತ್ತು.

ಆದರೆ ಅದೇ ಬಿಜೆಪಿಯು ಕಾರ್ಗಿಲ್ ನಲ್ಲಿರುವ ಲಡಾಖ್ ಸ್ವಾಯತ್ತ ಪರ್ವತಗಳ ಅಭಿವೃದ್ಧಿ ಮಂಡಳಿ(LAHDCK)ಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಜೊತೆಗೆ ಅಧಿಕಾರ ಹಂಚಿಕೊಂಡಿದೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಈ ಮೈತ್ರಿಕೂಟದ ನೇತೃತ್ವ ವಹಿಸಿಕೊಂಡಿದ್ದು, ಇದೇ ಪಕ್ಷದ ಜೊತೆಗೆ ಬಿಜೆಪಿ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದೆ.

"ಜಮ್ಮುಕಾಶ್ಮೀರದಲ್ಲಿ ಬಿಜೆಪಿಯೇತರ ಅಭ್ಯರ್ಥಿಗಳು ಪ್ರಚಾರ ಮಾಡುವಂತಿಲ್ಲ"

ಎಲ್ಎಹೆಚ್ ಡಿಸಿಕೆ ಮಂಡಳಿಯು 30 ಸದಸ್ಯರನ್ನು ಒಳಗೊಂಡಿದ್ದು, ಅದರಲ್ಲಿ 26 ಮಂದಿ ಚುನಾಯಿತ ಸದಸ್ಯರಾಗಿರುತ್ತಾರೆ. ಈ 26 ಸದಸ್ಯರ ಪೈಕಿ ನ್ಯಾಷನಲ್ ಕಾನ್ಫರೆನ್ಸ್ 10, ಕಾಂಗ್ರೆಸ್ಸಿನ 8 ಹಾಗೂ ಬಿಜೆಪಿಯ ಮೂವರು ಸದಸ್ಯರು ಹಾಗೂ ಪಕ್ಷೇತರವಾಗಿ ಆಯ್ಕೆಯಾದ ಐವರು ಸದಸ್ಯರಿದ್ದಾರೆ. ಇನ್ನು, ನಾಲ್ವರು ಸದಸ್ಯರನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ಆಡಳಿತ ಮಂಡಳಿಯು ನಾಮನಿರ್ದೇಶನ ಮಾಡಿದೆ.

ಕಾರ್ಯ ನಿರ್ವಹಣಾ ತಂಡದಲ್ಲಿ ಐವರು ಸದಸ್ಯರು

ಕಾರ್ಯ ನಿರ್ವಹಣಾ ತಂಡದಲ್ಲಿ ಐವರು ಸದಸ್ಯರು

ಕಾರ್ಗಿಲ್ ನಲ್ಲಿರುವ ಲಡಾಖ್ ಸ್ವಾಯತ್ತ ಪರ್ವತಗಳ ಅಭಿವೃದ್ಧಿ ಮಂಡಳಿಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಫೆರೋಜ್ ಖಾನ್ ಮುಖ್ಯ ಕಾರ್ಯ ನಿರ್ವಹಣಾ ಕೌನ್ಸಿಲರ್ ಆಗಿದ್ದಾರೆ. ಉಳಿದಂತೆ ನಾಲ್ವರು ಕೌನ್ಸಿಲರ್ ಗಳಲ್ಲಿ ಬಿಜೆಪಿಯ ಮೊಹಮ್ಮದ್ ಅಲಿ ಚೌವ್ಹಾಣ್ ಕೂಡಾ ಒಬ್ಬರಾಗಿದ್ದಾರೆ. ಆರೋಗ್ಯ, ಕಂದಾಯ, ಕೃಷಿ, ಅರಣ್ಯ, ವನ್ಯಜೀವಿ, ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಮಣ್ಣಿನ ಸಂರಕ್ಷಣಾ ಖಾತೆಗಳಿಗೆ ಕೌನ್ಸಿಲರ್ ಗಳನ್ನು ನೇಮಿಸಲಾಗಿದೆ.

2018ರಲ್ಲಿ ಕಾರ್ಗಿಲ್ ಹಿಲ್ ಕೌನ್ಸಿಲ್ ಚುನಾವಣೆ

2018ರಲ್ಲಿ ಕಾರ್ಗಿಲ್ ಹಿಲ್ ಕೌನ್ಸಿಲ್ ಚುನಾವಣೆ

ಕಳೆದ 2018ರ ಕಾರ್ಗಿಲ್ ಹಿಲ್ ಕೌನ್ಸಿಲ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಸ್ಪರ್ಧಿಸಿದ್ದವು ಎಂದು ಬಿಜೆಪಿಯ ಕಾರ್ಯ ನಿರ್ವಹಣಾ ಕೌನ್ಸಿಲರ್ ಆಗಿರುವ ಶಾರ್ಗೊಲ್ ಕ್ಷೇತ್ರದ ಜನಪ್ರತಿನಿಧಿಯೊಬ್ಬರು ಒಪ್ಪಿಕೊಂಡಿದ್ದಾರೆ.

ಜಮ್ಮುಕಾಶ್ಮೀರದಲ್ಲಿ ಕಳೆದ ತಿಂಗಳು ಗುಪ್ಕರ್ ಮೈತ್ರಿಕೂಟ

ಜಮ್ಮುಕಾಶ್ಮೀರದಲ್ಲಿ ಕಳೆದ ತಿಂಗಳು ಗುಪ್ಕರ್ ಮೈತ್ರಿಕೂಟ

ಕಳೆದ ತಿಂಗಳು ಜಮ್ಮು ಕಾಶ್ಮೀರದ ಏಳು ಪ್ರಾದೇಶಿಕ ಪಕ್ಷಗಳು ಒಟ್ಟಗೂಡಿ ಪೀಪಲ್ಸ್ ಆಲಿಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್(PAGD) ಮೈತ್ರಿಕೂಟವನ್ನು ರಚಿಸಲಾಗಿತ್ತು. 2019ರ ಆಗಸ್ಟ್.05ರಂದು ಜಮ್ಮು ಕಾಶ್ಮೀರಕ್ಕೆ ಮೊದಲಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಗಿತ್ತು. ಈ ಹಿನ್ನೆಲೆ ವಿಶೇಷ ಸ್ಥಾನಮಾನವನ್ನು ಪುನರ್-ಸ್ಥಾಪಿಸಿವುದಕ್ಕೆ ಈ ಮೈತ್ರಿಕೂಟವು ಆಗ್ರಹಿಸಿತ್ತು. ಇದರ ಜೊತೆಗೆ ಜಮ್ಮು ಕಾಶ್ಮೀರದಲ್ಲಿ ನವೆಂಬರ್.28ರಂದು ನಡೆಯುವ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಈ ಮೈತ್ರಿಕೂಟವು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿತ್ತು.

ಜಮ್ಮು ಕಾಶ್ಮೀರದ ಗುಪ್ಕರ್ ಮೈತ್ರಿಕೂಟದ ಬಗ್ಗೆ ಟೀಕೆ

ಜಮ್ಮು ಕಾಶ್ಮೀರದ ಗುಪ್ಕರ್ ಮೈತ್ರಿಕೂಟದ ಬಗ್ಗೆ ಟೀಕೆ

ಜಮ್ಮು-ಕಾಶ್ಮೀರದಲ್ಲಿ ನೂತನವಾಗಿ "ಪೀಪಲ್ಸ್ ಆಲಿಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್" (PAGD)ಮೈತ್ರಿಕೂಟ ರಚಿಸಲಾಗಿತ್ತು. ಈ ಮೈತ್ರಿಕೂಟವನ್ನು 'ಗುಪ್ಕರ್ ಗ್ಯಾಂಗ್' ಎಂದು ಕರೆಯುವ ಮೂಲಕ ಅಪಹಾಸ್ಯ ಮಾಡಿದ್ದ ಕೇಂದ್ರ ಸಚಿವ ಅಮಿತ್ ಶಾ, ಈ ಮೈತ್ರಿ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಸರಣಿ ಟ್ವೀಟ್‌ಗಳಲ್ಲಿ ದೂಷಿಸಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ವಿದೇಶಿ ಪಡೆಗಳು ಮಧ್ಯಪ್ರವೇಶಿಸಬೇಕು ಎಂದು ಈ ತಂಡವು ಬಯಸುತ್ತದೆ. ಕಾಂಗ್ರೆಸ್ಸಿನ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರೇ ಇಂಥ ಮೈತ್ರಿಕೂಟದ ಜೊತೆಗೆ ನೀವೂ ಕೈ ಜೋಡಿಸುತ್ತಿರಾ ಎಂದು ಅಮಿತ್ ಶಾ ಪ್ರಶ್ನೆ ಮಾಡಿದ್ದರು. ಅಲ್ಲದೇ ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಸರಣಿ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು.

"ಕಾರ್ಗಿಲ್ ಎನ್ ಸಿ ಬೇರೆ, ಕಾಶ್ಮೀರ ಎನ್ ಸಿ ಬೇರೆ"

ಪೀಪಲ್ಸ್ ಆಲಿಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ ಮೈತ್ರಿಕೂಟವನ್ನು ವಿರೋಧಿಸುವ ಬಿಜೆಪಿಯು ಇದೇ ತಂಡದಲ್ಲಿರುವ ನ್ಯಾಶನಲ್ ಕಾನ್ಫರೆನ್ಸ್ ಜೊತೆಗೆ ಎಲ್ಎಹೆಚ್ ಡಿಸಿಕೆ ಮಂಡಳಿಯಲ್ಲಿ ಮೈತ್ರಿ ಮಾಡಿಕೊಂಡಿದೆ. ಈ ಬಗ್ಗೆ ಪ್ರಶ್ನಿಸಿದಾಗ ಲಡಾಖ್ ಸಂಸದ ಹಾಗೂ ಲಡಾಖ್ ಬಿಜೆಪಿಯ ಅಧ್ಯಕ್ಷ ಜಮಿಯಾಂಗ್ ಸೆರಿಂಗ್ ನಮ್ಗಾಲ್, ಎಲ್ಎಹೆಚ್ ಡಿಸಿಕೆ ಮಂಡಳಿಯಲ್ಲಿ ಬಿಜೆಪಿ ಮತ್ತು ಎನ್ ಸಿ ಮೈತ್ರಿ ಮುಂದುವರಿಸುವುದಾಗಿ ಹೇಳಿದ್ದಾರೆ.

ಕಾರ್ಗಿಲ್ ಮಂಡಳಿಯಲ್ಲಿ ಬಿಜೆಪಿ ಮತ್ತು ಎನ್ ಸಿ ಮೈತ್ರಿಕೂಟವು ಮೊದಲಿನಂತೆ ಮುಂದುವರಿಯಲಿದೆ. ಉಭಯ ಪಕ್ಷಗಳ ಮೈತ್ರಿಕೂಟದಲ್ಲಿ ಯಾವುದೇ ರೀತಿ ವ್ಯತ್ಯಾಸ ಆಗುವುದಿಲ್ಲ. ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನಿಂದ ಕಾರ್ಗಿಲ್ ನಲ್ಲಿರುವ ಎನ್ ಸಿ ಪಕ್ಷಕ್ಕೆ ಯಾವುದೇ ಪ್ರಯೋಜನಗಳೂ ಆಗಿಲ್ಲ. ಮುಂದಿನ ದಿನಗಳಲ್ಲಿ ಕಾರ್ಗಿಲ್ ನಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ ಸದಸ್ಯರೆಲ್ಲ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಲಡಾಖ್ ಬಿಜೆಪಿಯ ಅಧ್ಯಕ್ಷ ಜಮಿಯಾಂಗ್ ಸೆರಿಂಗ್ ನಮ್ಗಾಲ್ ಹೇಳಿದ್ದಾರೆ.

ಕಾರ್ಗಿಲ್ ಮಂಡಳಿಯಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿದ್ದು ಹೇಗೆ?

ಕಾರ್ಗಿಲ್ ಮಂಡಳಿಯಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿದ್ದು ಹೇಗೆ?

2018ರಲ್ಲಿ ನಡೆದ ಕಾರ್ಗಿಲ್ ಹಿಲ್ ಮಂಡಳಿ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಆರಂಭದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಕಾಂಗ್ರೆಸ್ ಜೊತೆಗೆ ಸೇರಿಕೊಂಡು ಅಧಿಕಾರವನ್ನು ಪಡೆದುಕೊಂಡಿತು. ಅಂದು ಪಿಡಿಪಿಯ ಇಬ್ಬರು, ನಾಲ್ವರು ಪಕ್ಷೇತರ ಮತ್ತು ಬಿಜೆಪಿಯ ಒಬ್ಬ ಕೌನ್ಸಿಲರ್ ಗಳು ಆಯ್ಕೆಯಾಗಿದ್ದರು. 2019ರ ಲೋಕಸಭಾ ಚುನಾವಣೆ ಬಳಿಕ ಎನ್ ಸಿ ಮತ್ತು ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯ ಮೂಡಿತು. ಈ ವೇಳೆ ಪಿಡಿಪಿಯ ಇಬ್ಬರು ಹಾಗೂ ನಾಲ್ವರು ಪಕ್ಷೇತರ ಸದಸ್ಯರು ಜೊತೆಗೆ ಸೇರಿಕೊಂಡು ಎನ್ ಸಿ ಅಧಿಕಾರವನ್ನು ಪಡೆದುಕೊಂಡಿತು. ಕೆಲವು ತಿಂಗಳಲ್ಲೇ ಪಿಡಿಪಿಯ ಇಬ್ಬರು ಸದಸ್ಯರು ಬಿಜೆಪಿಗೆ ಸೇರ್ಪಡೆಯಾದರು. ಅಂತಿಮವಾಗಿ ನ್ಯಾಷನಲ್ ಕಾನ್ಫರೆನ್ಸ್ ಬಿಜೆಪಿ ಜೊತೆಗೆ ಸೇರಿಕೊಂಡು ಕಾರ್ಗಿಲ್ ಹಿಲ್ ಮಂಡಳಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು.

English summary
National Conference Is BJP’s Ally, But Elsewhere It Is Part Of ‘Gupkar Gang’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X