ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಗುಡುಗು ಸಹಿತ ಮಳೆ: ಮುಂದಿನ 2 ಗಂಟೆಗಳ ಕಾಲ ತಂಪೆರೆಯಲಿರುವ ವರುಣ

|
Google Oneindia Kannada News

ನವದೆಹಲಿ ಜೂನ್ 17: ಶಾಖದ ಅಲೆಯಿಂದ ಹೈರಾಣಾಗಿದ್ದ ದೆಹಲಿ ಮೇಲೆ ವರುಣನ ಮುನಿಸು ಕಡಿಮೆಯಾದಂತೆ ತೋರುತ್ತಿದೆ. ಹೀಗಾಗಿ ಕಳೆದೆರಡು ದಿನಗಳಿಂದ ರಾಷ್ಟ್ರ ರಾಜಧಾನಿಗೆ ಮಳೆರಾಯ ತಂಪೆರೆಯುತ್ತಿದ್ದಾನೆ. ಶುಕ್ರವಾರ ಮುಂಜಾನೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ತೀವ್ರತೆಯ ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗಿದೆ. ಇದು ಮುಂದಿನ ಎರಡು ಗಂಟೆಗಳ ಕಾಲ ಮುಂದುವರಿಯುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಶುಕ್ರವಾರದಂದು ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರ (RWFC) ನವದೆಹಲಿಯ ಪ್ರಕಾರ, "ಇಡೀ ದೆಹಲಿ ಮತ್ತು NCR (ಲೋನಿ ದೇಹತ್, ಹಿಂಡನ್ ಎಎಫ್ ಸ್ಟೇಷನ್, ಬಹದ್ದೂರ್ಗಢ್, ಘಾಜಿಯಾಬಾದ್, ಇಂದಿರಾಪುರಂ, ಛಪ್ರೌಲಾ) ದ ಅನೇಕ ಸ್ಥಳಗಳಲ್ಲಿ ಮತ್ತು ಪಕ್ಕದ ಪ್ರದೇಶಗಳಲ್ಲಿ ಸಾಧಾರಣ ತೀವ್ರತೆಯ ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗುತ್ತದೆ. ಜೊತೆಗೆ ಮುಂದಿನ 2 ಗಂಟೆಗಳಲ್ಲಿ ನೋಯ್ಡಾ, ದಾದ್ರಿ, ಗ್ರೇಟರ್ ನೋಯ್ಡಾ, ಗುರುಗ್ರಾಮ್, ಫರಿದಾಬಾದ್, ಬಲ್ಲಭಗಢ ಮಳೆಯಾಗುವ ಮನ್ಸೂಚನೆಯನ್ನು ನೀಡಲಾಗಿದೆ. ಇದರೊಂದಿಗೆ ಎಲ್ಲೆಲ್ಲಿ ಮಳೆಯಾಗಲಿದೆ ಎನ್ನುವುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಮುಂದಿನ 2 ಗಂಟೆಗಳ ಕಾಲ ಮಳೆ

ಮುಂದಿನ 2 ಗಂಟೆಗಳ ಕಾಲ ಮಳೆ

ಜೊತೆಗೆ ಮುಂದಿನ 2 ಗಂಟೆಗಳಲ್ಲಿ ಯಮುನಾನಗರ, ಕುರುಕ್ಷೇತ್ರ, ಕರ್ನಾಲ್, ಅಸ್ಸಂದ್, ಸಫಿಡಾನ್, ಜಿಂದ್, ಪಾಣಿಪತ್, ಗೊಹಾನಾ, ಗನ್ನೌರ್, ಮೆಹಮ್, ಸೋನಿಪತ್, ರೋಹ್ಟಕ್, ಖಾರ್ಖೋಡಾ, ಭಿವಾನಿ, ಚರ್ಖಿ ದಾದ್ರಿ, ಮಟ್ಟಾನ್, ಯಮುನಾನಗರ, ಕುರುಕ್ಷೇತ್ರ, ಜಿಂದ್, ಪಾಣಿಪತ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಗುಡುಗು ಸಹಿತ ಮಳೆಯಾಗಬಹುದು. ಝಜ್ಜರ್, ಫರುಖ್‌ನಗರ, ಕೊಸಾಲಿ, ಸೊಹಾನಾ, ರೇವಾರಿ, ಪಲ್ವಾಲ್, ಬವಾಲ್, ನುಹ್, ಔರಂಗಾಬಾದ್, ಹೊಡಾಲ್ (ಹರಿಯಾಣ) ಸಹರಾನ್‌ಪುರ್, ಗಂಗೋಹ್, ದಿಯೋಬಂದ್, ನಾಜಿಬಾಬಾದ್, ಶಾಮ್ಲಿ, ಮುಜಾಫರ್‌ನಗರ, ಕಂಧ್ಲಾ, ಬಿಜ್ನೌರ್, ಖತೌಲಿ, ಸಕೋಟಿ ತಾಂಡಾ, ಹಸ್ತಿನಾಪುರ, ಚಂದಾ ದಪುರುತ್ , ಬಾಗ್ಪತ್, ಮೀರತ್, ಖೇಕ್ರಾ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ.

ಮೋದಿನಗರ, ಕಿಥೋರ್, ಅಮ್ರೋಹಾ, ಮೊರಾದಾಬಾದ್, ಗರ್ಮುಕ್ತೇಶ್ವರ್, ಪಿಲಾಖುವಾ, ಹಾಪುರ್, ಗುಲಾವೋಟಿ, ಸಿಯಾನಾ, ಸಂಭಾಲ್, ಬಿಲ್ಲಾರಿ, ಸಿಕಂದರಾಬಾದ್, ಚಂದೌಸಿ, ಬುಲಂದ್‌ಶಹರ್, ಜಹಾಂಗೀರಾಬಾದ್, ಅನುಪ್‌ಶಹರ್, ಬಹಜೋಯ್, ಶಿಕರ್‌ಪುರ್, ಖುರ್ಜಾ, ಪಹಾಸು, ದೇಬಾಯಿ, ನರೋ, ನರೋ ಗಬ್ಹಾನಾ, , ಅತ್ರೌಲಿ ಮತ್ತು ಖೈರ್, ಅಲಿಗಢ, ನಂದಗಾಂವ್, ಇಗ್ಲಾಸ್, ಸಿಕಂದರಾ ರಾವ್, ಬರ್ಸಾನಾ, ರಾಯಾ, ಹತ್ರಾಸ್, ಮಥುರಾ, ಸದಾಬಾದ್ (ಯು.ಪಿ.) ಭಿವಾರಿ, ತಿಜಾರಾ (ರಾಜಸ್ಥಾನ)ದಲ್ಲೂ ಮಳೆಯಾಗುವ ನಿರೀಕ್ಷೆ ಇದೆ.

ರಾಷ್ಟ್ರ ರಾಜಧಾನಿಯ ಜನ ಹೇಳುವುದೇನು?

ರಾಷ್ಟ್ರ ರಾಜಧಾನಿಯ ಜನ ಹೇಳುವುದೇನು?

ಒಂದು ವಾರದ ಹಿಂದೆ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಳೆಗಾಲದಲ್ಲಿ ರಸ್ತೆಗಳು ಮತ್ತು ಫುಟ್‌ಪಾತ್‌ಗಳಲ್ಲಿ ಜಲಾವೃತವಾಗುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು, ಅವರು ಹೇಳಿಕೆಯಂತೆ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದು ದೆಹಲಿಗರು ಹೇಳಿಕೊಂಡಿದ್ದಾರೆ.

ಕಾಂಕ್ರೀಟ್ ಸಿಮೆಂಟ್ ರಸ್ತೆ ನಿರ್ಮಿಸಲು ಸೂಚನೆ

ಕಾಂಕ್ರೀಟ್ ಸಿಮೆಂಟ್ ರಸ್ತೆ ನಿರ್ಮಿಸಲು ಸೂಚನೆ

ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿದ್ದ ಉನ್ನತ ಮಟ್ಟದ ಸಭೆಯಲ್ಲಿ, ಸಕ್ಸೇನಾ ಮತ್ತು ಕೇಜ್ರಿವಾಲ್ ಅವರು ಜಲಾವೃತ ಮತ್ತು ಪ್ರವಾಹಕ್ಕೆ ಒಳಗಾಗುವ ಸ್ಥಳಗಳಲ್ಲಿ ಬಿಟುಮೆನ್ ಬದಲಿಗೆ ಕಾಂಕ್ರೀಟ್ ಸಿಮೆಂಟ್ ರಸ್ತೆಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಎಲ್ಜಿ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಒಳಚರಂಡಿ ಮಾಸ್ಟರ್ ಪ್ಲಾನ್ ಅಂತಿಮಗೊಳಿಸಲು ಸೂಚನೆ

ಒಳಚರಂಡಿ ಮಾಸ್ಟರ್ ಪ್ಲಾನ್ ಅಂತಿಮಗೊಳಿಸಲು ಸೂಚನೆ

ಸಭೆಯಲ್ಲಿ ಚರಂಡಿಯ ಹೂಳು ನಾಲೆಗೆ ಸೇರದಂತೆ ಕೂಡಲೇ ಎತ್ತುವಳಿ ಮಾಡಲು ತೀರ್ಮಾನಿಸಲಾಯಿತು. ತಜ್ಞರು ಮತ್ತು ಡೊಮೇನ್-ನಿರ್ದಿಷ್ಟ ಏಜೆನ್ಸಿಗಳ ಸಹಾಯದಿಂದ ವರ್ಷಗಳಿಂದ ಬಾಕಿ ಉಳಿದಿರುವ ಒಳಚರಂಡಿ ಮಾಸ್ಟರ್ ಪ್ಲಾನ್ ಅನ್ನು ಅಂತಿಮಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಯಿತು.

Recommended Video

ದುಬೈನಲ್ಲಿ ಬಿಎಸ್ವೈ ಫ್ಯಾಮಿಲಿ ಆಸ್ತಿ ಹೊಂದಿರೋದು ನಿಜಾನಾ!! *Politics | OneIndia Kannada

English summary
Thunderstorms with moderate intensity rain hit Delhi and its adjoining areas in the early hours of Friday. It will continue for the next two hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X