ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದರಿಗೆ 4 ರೂಪಾಯಿಗೆ ಭರ್ಜರಿ ಊಟ!

By Mahesh
|
Google Oneindia Kannada News

ನವದೆಹಲಿ, ಜೂ.24: ಸಂಸತ್ತಿನ ಕ್ಯಾಂಟೀನ್ ನಲ್ಲಿ ಸಬ್ಸಿಡಿ ದರದಲ್ಲಿ ಸಂಸದರು ಪಡೆಯುವ ಊಟ, ತಿಂಡಿ, ಸ್ನಾಕ್ಸ್ ಲೆಕ್ಕಾಚಾರ ಆರ್ ಟಿಐ ಅರ್ಜಿ ಮೂಲಕ ಹೊರ ಬಂದಿದೆ. ಕಳೆದ ಐದು ವರ್ಷಗಳಲ್ಲಿ ಸಂಸದರಿಗೆ 60.7 ಕೋಟಿ ರು ಸಬ್ಸಿಡಿ ಸಿಕ್ಕಿದೆ.

ಸಂಸತ್ ಭವನದ ಕ್ಯಾಂಟೀನ್‌ನಲ್ಲಿ ಬೇಯಿಸಿದ ಮೊಟ್ಟೆಯಿಂದ ಹಿಡಿದು, ಕೋಳಿ, ಕುರಿಮಾಂಸ, ತರಕಾರಿಯ 76ಕ್ಕೂ ಮಿಕ್ಕಿ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿದೆ. ಇವುಗಳ ದರಕ್ಕೆ ಶೇ.63ರಿಂದ ಶೇ.150ರಷ್ಟು ಸಬ್ಸಿಡಿ ಲಭಿಸುತ್ತಿದೆ ಎಂದು ಆರ್‌ಟಿಐ ಕಾರ್ಯಕರ್ತ ಸುಭಾಶ್ ಅಗರ್‌ವಾಲ್ ಮಾಹಿತಿ ಪಡೆದುಕೊಂಡಿದ್ದಾರೆ. [ಲೋಕಸಭೆ ಕ್ಯಾಂಟೀನ್ ಊಟ ಮಾಡಿದ ಮೋದಿ]

ನಮ್ಮ ಸಂಸದರು ತಿಂಗಳಿಗೆ 1.4 ಲಕ್ಷ ರೂಪಾಯಿ ಮೊತ್ತದ ವೇತನ, ಭತ್ತೆಗಳನ್ನು ಪಡೆದುಕೊಳ್ಳುತ್ತಾರೆ. 2010ರ ಡಿಸೆಂಬರ್‌ನಿಂದ ಕ್ಯಾಂಟೀನ್‌ನ ದರಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿಲ್ಲ.

Nation pays Rs 60 crore for MPs’ lunches

ಸಂಸದರ ಕ್ಯಾಂಟೀನ್‌ನಲ್ಲಿ ಪೂರಿ-ಸಬ್ಜಿಯಂಥ ತಿಂಡಿಗಳನ್ನು ಶೇ.88ರಷ್ಟು ಸಬ್ಸಿಡಿಯೊಂದಿಗೆ ಒದಗಿಸಲಾಗುತ್ತಿದೆ. ಇಲ್ಲಿ ಲಭ್ಯವಿರುವ ಕೆಲವು ಆಹಾರಗಳು ಮತ್ತು ಅವುಗಳ ದರ ಪಟ್ಟಿ ಹೀಗಿದೆ: [ಅಪ್ಪೆಮಿಡಿ ಉಪ್ಪಿನಕಾಯಿ ಬೇಕಾ?]
* ಚಿಪ್ಸ್‌ನೊಂದಿಗೆ ಫಿಶ್ ಫ್ರೈ (25 ರೂ.)
* ಮಟನ್ ಕಟ್ಲೇಟ್ (18 ರೂ.)
* ಎಣ್ಣೆಯಲ್ಲಿ ಬಾಡಿಸಿದ ತರಕಾರಿ (5 ರೂ.),
* ಮಟನ್ ಕರಿ (20 ರೂ.),
* ಮಸಾಲ ದೋಸೆ (6 ರೂ.)

ಒಂದು ಪ್ಲೇಟ್ ತರಕಾರಿ ಊಟಕ್ಕೆ 41.25 ರೂಪಾಯಿ ವೆಚ್ಚವಾದರೆ, ಸಂಸದರಿಗೆ ಅದನ್ನು 4 ರೂಪಾಯಿಗೆ ಒದಗಿಸಲಾಗುತ್ತಿದೆ.ಇದಕ್ಕೆ ಶೇ.90ರಷ್ಟು ಸಬ್ಸಿಡಿ ಸಿಕ್ಕಿದೆ. ಮಾಂಸಾಹಾರಿ ಊಟಕ್ಕೆ 90.05 ರೂಪಾಯಿ ಖರ್ಚು ಬಂದರೆ, ಅದನ್ನು 33 ರೂಪಾಯಿಗೆ ಒದಗಿಸಲಾಗುತ್ತಿದೆ. ಅಂದರೆ, ಶೇ.66ರಷ್ಟು ಸಹಾಯಧನ ಲಭಿಸಿದಂತಾಗಿದೆ. [ಇನ್ಫಿ ವಿಪ್ರೋ ನೌಕರರಿಗೆ ಸಾವಯವ ಭೋಜನ]

ಒಂದು ಹಪ್ಪಳಕ್ಕೆ 1.98 ರೂಪಾಯಿ ವೆಚ್ಚವಾಗುತ್ತದೆ. ಅದನ್ನು ಒಂದು ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ರೋಟಿ ವೆಚ್ಚ ಮಾತ್ರ ಅಧಿಕವಾಗಿದೆ. ಪ್ರತಿ ರೋಟಿ 77 ಪೈಸೆಯಾಗಿದ್ದರೆ, ಅದನ್ನು 1 ರೂ.ಗೆ ಮಾರಲಾಗುತ್ತಿದೆ.

ಉತ್ತರ ರೈಲ್ವೆ ಈ ಕ್ಯಾಂಟೀನ್‌ನ ನಿರ್ವಹಣೆ ಮಾಡುತ್ತದೆ. ಕೇಂದ್ರೀಯ ಭಂಡಾರ, ಮದರ್‌ಡೈರಿ ಮತ್ತು ಡಿಎಂಎಸ್ ಸಂಸ್ಥೆಗಳಿಂದ ಆಹಾರ ಧಾನ್ಯಗಳು ಮತ್ತು ಇತರ ಕಚ್ಚಾ ಆಹಾರ ಪದಾರ್ಥಗಳನ್ನು ಅದು ಖರೀದಿಸುತ್ತದೆ ಎಂದ್ ಉತಿಳಿದು ಬಂದಿಲ್ಲ. (ಪಿಟಿಐ)

English summary
Parliament canteens serving to MPs got a total subsidy of Rs 60.7 crore during last five years with items like puri sabji being sold at 88 per cent subsidised rates, an RTI reply shows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X