ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಿಗೆ ಯಾವ ಕೊರೊನಾ ಲಸಿಕೆ ಸೂಕ್ತ; ಏಮ್ಸ್ ನಿರ್ದೇಶಕರ ಸಲಹೆ

|
Google Oneindia Kannada News

ನವದೆಹಲಿ, ಜನವರಿ 20: ಮೂಗಿನ ಮೂಲಕ ನೀಡಲಾಗುವ "ನಾಸಲ್ ಲಸಿಕೆ"ಯು ಮಕ್ಕಳಿಗೆ ಸೂಕ್ತವೆನಿಸಬಹುದು ಎಂದು ದೆಹಲಿಯ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.

ಬುಧವಾರ 16ನೇ ಆವೃತ್ತಿಯ ರೈಸಿಂಗ್ ಡೇ ಸಮಾರಂಭದಲ್ಲಿ ಭಾಗವಹಿಸಿ, ಎನ್ ಡಿಆರ್ ಎಫ್ ಸಿಬ್ಬಂದಿ ಜೊತೆ ಸಂವಾದ ನಡೆಸಿದ ಅವರು, "ಶಾಲಾ ಮಕ್ಕಳಿಗೆ ಈ ನಾಸಲ್ ಲಸಿಕೆ ನೀಡಲು ಸುಲಭವಾಗಿರುತ್ತದೆ. ಅವರಲ್ಲಿ ಸೋಂಕು ತೀವ್ರತರದಲ್ಲಿ ಕಾಣಿಸಿಕೊಳ್ಳದಿರುವುದರಿಂದ ಈ ಲಸಿಕೆ ಬಳಸಬಹುದು" ಎಂದು ಹೇಳಿದ್ದಾರೆ.

ದೇಶದಲ್ಲಿ ಶೀಘ್ರದಲ್ಲಿಯೇ ಬರಲಿದೆ ಮೂಗಿನ ಮೂಲಕ ನೀಡುವ ಕೋವಿಡ್-19 ಲಸಿಕೆದೇಶದಲ್ಲಿ ಶೀಘ್ರದಲ್ಲಿಯೇ ಬರಲಿದೆ ಮೂಗಿನ ಮೂಲಕ ನೀಡುವ ಕೋವಿಡ್-19 ಲಸಿಕೆ

ಭಾರತದಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಎರಡು ಲಸಿಕೆಗಳನ್ನು ಮಕ್ಕಳಿಗೆ ಬಳಸಲು ಅನುಮತಿ ನೀಡಲಾಗಿಲ್ಲ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಿದೆ. ಆನಂತರ ಮಕ್ಕಳಿಗಾಗಿಯೇ ಪ್ರತ್ಯೇಕ ಲಸಿಕೆಗಳು ರೂಪುಗೊಳ್ಳಬಹುದು. ಸದ್ಯಕ್ಕೆ ಭಾರತ್ ಬಯೋಟೆಕ್ ಈ ನಾಸಲ್ ಲಸಿಕೆಗಳ ಬಗ್ಗೆ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಿದೆ. ನಾಗಪುರದ ಗಿಲ್ಲುರ್ಕರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಂದು ಮತ್ತು ಎರಡನೆಯ ಹಂತದ ಪ್ರಯೋಗ ಆರಂಭಿಸಲು ಸನ್ನದ್ಧಗೊಂಡಿದೆ ಎಂದು ಮಾಹಿತಿ ನೀಡಿದರು.

Nasal Vaccines Against Corona Can Be Suggested To Children Said AIIMS Director

ನಾಸಲ್ ಲಸಿಕೆಯು ಚುಚ್ಚುಮದ್ದಲ್ಲದೇ ಸ್ಪ್ರೇ ಆಗಿರುವುದರಿಂದ ಮಕ್ಕಳಿಗೆ ಸುಲಭವಾಗಿ ನೀಡಬಹುದು. ಮೂಗಿನ ಮೂಲಕ ನೀಡುವುದರಿಂದ ಹೆಚ್ಚು ಸಮಯವೂ ಹಿಡಿಯುವುದಿಲ್ಲ. ಶೀಘ್ರವಾಗಿ ಲಸಿಕಾ ಕಾರ್ಯಕ್ರಮ ನಡೆಸಬಹುದು. ಆದರೆ ಈ ಬಗ್ಗೆ ಇನ್ನೂ ಅನುಮೋದನೆ ದೊರೆಯಬೇಕಿದೆ ಎಂದು ಹೇಳಿದರು.

English summary
Nasal coronavirus vaccine can be suggested to school-going children who bear a "very mild" load of the disease said AIIMS Director Randeep Guleria
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X