ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2024ರಲ್ಲಿ ಚಂದ್ರನ ಮೇಲೆ ಮಹಿಳೆಯನ್ನು ಇಳಿಸಲಿರುವ ನಾಸಾ

|
Google Oneindia Kannada News

ನವದೆಹಲಿ, ಜುಲೈ 23: ಐವತ್ತು ವರ್ಷಗಳ ಬಳಿಕ ಅಂದರೆ ಅಪೊಲೊ ಯೋಜನೆ ಬಳಿಕ ಮತ್ತೊಂದು ಮೈಲಿಗಲ್ಲು ಸಾಧಿಸಲು ಆರ್ಟಿಮಿಸ್‌ಗೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಸಿದ್ಧವಾಗುತ್ತಿದೆ.

2024ರ ಜುಲೈ ವೇಳೆಗೆ ಚಂದ್ರನ ಮೇಲೆ ಮೊದಲ ಬಾರಿಗೆ ಮಹಿಳೆ ಹಾಗೂ ಮತ್ತೊಬ್ಬ ಪುರುಷನನ್ನು ಇಳಿಸುವ ಆರ್ಟಿಮಿಸ್ ಲೂನಾರ್ ಯೋಜನೆ ಸಂಬಂಧ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ತನ್ನ ಸಿದ್ಧತೆಗಳನ್ನು ಆರಂಭಿಸಿದೆ.

ಕೆಲವೇ ತಿಂಗಳ ಹಿಂದೆ ಮುಂದಿನ ಬಾರಿ ಚಂದ್ರನೆಡೆಗೆ ಮಹಿಳಾ ಗಗನಯಾತ್ರಿಯನ್ನು ಕಳುಹಿಸುವುದಾಗಿ ಹೇಳಿದ್ದರೆ ನಾಸಾ, ಇದೀಗ ಈ ಮಾತನ್ನು ನಿಜಗೊಳಿಸಲು ಅಡಿಗಾಲಿಟ್ಟಿದೆ. ಚಂದ್ರನ ಮೇಲ್ಮೈ ಗೆ ಮಹಿಳೆಯರನ್ನು ಕಳುಹಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ನಾಸಾ ಪಾತ್ರತ್ರವಾಗಲಿದೆ.

Nasa will put woman on Moon

ಅಪೋಲೊ ಮೂಲಕ ವಿಶ್ವದಲ್ಲೇ ಮೊದಲ ಬಾರಿಗೆ ಚಂದ್ರನಲ್ಲಿಗೆ ಹೆಜ್ಜೆ ಇಟ್ಟಿದ್ದ ಯೋಜನೆಯ ಬಳಿಕ ಇದೀಗ ಆರ್ಟಿಮಿಸ್ ಯೋಜನೆಗೆ ನಾಸಾ ಸಿದ್ಧತೆ ನಡೆಸಿದೆ. ಈ ಯೋಜನೆ ಮಹಿಳಾ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸಲು ಸಿದ್ಧತೆ ನಡೆಸುತ್ತಿದೆ.

ಎರಡನೇ ಬಾರಿಗೆ ಚಂದ್ರನ ಕಡೆಗೆ ಓರ್ವ ಪುರುಷ ಗಗನಯಾತ್ರಿ ಹಾಗೂ ಚಂದ್ರನಲ್ಲಿ ಕಾಲಿಡುತ್ತಿರುವ ಮೊದಲ ಮಹಿಳಾ ಇರಲಿದ್ದಾರೆ. ಇಬ್ಬರನ್ನು ಚಂದ್ರನಲ್ಲಿ ಯೋಜನೆ ರೂಪಿಸಲಾಗಿದೆ. ಇದೊಂದು ಹೆಮ್ಮೆಯ ಸಂಗತಿ ಎಂದು ನಾಸಾ ಆಡಳಿತಗಾರರು ಹೇಳಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿಗಳು ಇದನ್ನು ಅಕ್ಟೋಬರ್‌ 2008ರಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಿದರು. ಇದು ಆಗಸ್ಟ್‌ 2009ರ ತನಕ ಕಾರ್ಯನಿರ್ವಹಿಸಿತ್ತು.

ಈ ಯಾತ್ರೆಯಲ್ಲಿ ಚಂದ್ರನ ಉಪಗ್ರಹ ಮತ್ತು ಒಂದು ಇಂಪ್ಯಾಕ್ಟರ್ ಸಹ ಸೇರಿದ್ದವು. PSLVಯ ನವೀಕೃತ ಆವೃತ್ತಿಯಾದ PSLV C11 ಮೂಲಕ ಗಗನನೌಕೆಯನ್ನು 22 ಅಕ್ಟೋಬರ್‌ 2008ರಂದು ಚೆನ್ನೈನಿಂದ 80 ಕಿಮೀ ಉತ್ತರದಲ್ಲಿರುವ, ಆಂಧ್ರ ಪ್ರದೇಶದನೆಲ್ಲೂರು ಜಿಲ್ಲೆಯ ಶ್ರೀಹರಿಕೋಟಾ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಈ ಗಗನನೌಕೆಯನ್ನು ಉಡಾಯಿಸಲಾಯಿತು.

ಚಂದ್ರನ ನೆಲವನ್ನು ಶೋಧಿಸಲು ಭಾರತವು ತನ್ನದೇ ಆದ ತಂತ್ರಜ್ಞಾನ ಸಂಶೋಧಿಸಿ ಅಭಿವೃದ್ಧಿಗೊಳಿಸಿದ್ದರಿಂದ ಚಂದ್ರಯಾನ ಯೋಜನೆಯಿಂದ ಭಾರತದ ಬಾಹ್ಯಾಕಾಶ ಯೋಜನೆಗೆ ಮಹತ್ವದ ಉತ್ತೇಜನ ಲಭಿಸಿತು. 8 ನವೆಂಬರ್‌ 2008ರಂದು ಚಂದ್ರಯಾನಕ್ಕೆ ತೆರಳಿದ ವಾಹನವನ್ನು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಅಳವಡಿಸಲಾಯಿತು.

English summary
We're all still over the moon from the 50th anniversary celebrations for the Apollo 11 mission, but NASA is looking forward to its next moon landing. On Saturday, the space agency and Vice President Mike Pence announced the completion of the Orion crew capsule for the Artemis program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X