ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಂಪುಟ 2.0 LIVE : 58 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

|
Google Oneindia Kannada News

ನವದೆಹಲಿ, ಮೇ 30 : ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿಯಾಗಿ ಇಂದು(ಮೇ 30) ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ಬಾರಿ 8 ಸಾವಿರಕ್ಕೂ ಹೆಚ್ಚು ಆಹ್ವಾನಿತ ಅತಿಥಿಗಳು ಭಾಗವಹಿಸಿದ್ದಾರೆ. ಹಲವು ಮಂದಿ ಹಿರಿಯ ಮತ್ತು ಹೊಸ ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇಂದು ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೊದಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣ ವಚನ ಭೋಧಿಸಿದರು.

ಮೋದಿ ಸಂಪುಟ ಸೇರಲಿರುವ ಸಂಸದರ ಪ್ರಾಥಮಿಕ ಪಟ್ಟಿಮೋದಿ ಸಂಪುಟ ಸೇರಲಿರುವ ಸಂಸದರ ಪ್ರಾಥಮಿಕ ಪಟ್ಟಿ

Narendra Modis swearing-in ceremony Live updates

'ನವ ಭಾರತ' ನಿರ್ಮಾಣಕ್ಕೆ ಸಿದ್ಧವಾಗಿರುವ ಮೋದಿ ಅವರು ತಮ್ಮ ಹೊಸ ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವ ಸುಳಿವು ನೀಡಿದ್ದಾರೆ. ಜೊತೆಗೆ ನಿತೀಶ್ ಕುಮಾರ್ ಅವರ ಜೆಡಿಯು, ತಮಿಳುನಾಡಿನ ಎಐಎಡಿಎಂಕೆ, ಶಿವಸೇನೆ ಸದಸ್ಯರಿಗೆ ಸಚಿವ ಸ್ಥಾನ ಮೀಸಲಾಗಿರುತ್ತದೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು, ಅಚ್ಚರಿಯ ಅಂಕಿಸಂಖ್ಯೆಗಳು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು, ಅಚ್ಚರಿಯ ಅಂಕಿಸಂಖ್ಯೆಗಳು

ನರೇಂದ್ರ ಮೋದಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

Newest FirstOldest First
9:07 PM, 30 May

ರಾಜ್ಯದ ಶೋಭಾ ಕರಂದ್ಲಾಜೆ, ಬಿ.ವೈ.ರಾಘವೇಂದ್ರ, ಅನಂತ್‌ಕುಮಾರ್ ಹೆಗಡೆ, ಶ್ರೀನಿವಾಸ ಪ್ರಸಾದ್, ರಮೇಶ್ ಜಿಗಜಿಣಗಿ, ಬಸನಗೌಡ ಪಾಟೀಲ್ ಯಾತ್ನಾಳ್, ಪ್ರತಾಪ್ ಸಿಂಹ ಇವರಿಗೆಲ್ಲಾ ಮೊದಲ ಹಂತದಲ್ಲಿ ನಿರಾಸೆಯಾಗಿದೆ. ಮುಂದಿನ ಹಂತದಲ್ಲಿ ಯಾರಿಗಾದರೂ ಅವಕಾಶ ಸಿಗುತ್ತದೆಯೋ ನೋಡಬೇಕಿದೆ.
9:06 PM, 30 May

58 ಮಂದಿಯಲ್ಲಿ 25 ಮಂದಿ ಕ್ಯಾಬಿನೆಟ್ ದರ್ಜೆ ಸ್ಥಾನ, 24 ಮಂದಿಗೆ ರಾಜ್ಯ ಖಾತೆ ಹಾಗೂ ಉಳಿದವರಿಗೆ ಸ್ವತಂತ್ರ್ಯ ಖಾತೆ ನೀಡಲಾಗುತ್ತದೆ.
9:04 PM, 30 May

ಪ್ರಮಾಣ ವಚನ ಕಾರ್ಯಕ್ರಮವು ರಾಷ್ಟ್ರಪತಿಗಳ ಆದೇಶದಂತೆ ಮುಗಿದಿದೆ. ಒಟ್ಟು 58 ಮಂದಿ ಮೋದಿ ಅವರ ಸಂಪುಟ ಸೇರಿದ್ದಾರೆ. ಇದರಲ್ಲಿ ಐದು ಮಂದಿ ಮಹಿಳೆಯರಿದ್ದಾರೆ.
9:01 PM, 30 May

ದೇವಶ್ರೀ ಚೌಧರಿ ಅವರು 58ನೇವರಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಸಂಪುಟ ಸೇರಿದ ಐದನೇ ಮಹಿಳೆಯಾಗಿದ್ದಾರೆ. ಇವರು ಪಶ್ಚಿಮ ಬಂಗಾಳದವರಾಗಿದ್ದಾರೆ. ಇವರು ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.
9:00 PM, 30 May

ಕೈಲಾಶ್ ಚೌಧರಿ ಅವರು 57 ನೇ ಸಚಿವರಾಗಿ ಮೋದಿ ಸಂಪುಟ ಸೇರಿದರು. ಇವರು ಹಿಂದೂ ವಿಚಾರಗಳಿಗೆ ಪ್ರಸಿದ್ಧರು.
8:57 PM, 30 May

ಪ್ರತಾಪ್ ಚಂದ್ರ ಸಾರಂಗಿ ಅವರು ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ತಮ್ಮ ಸರಳ ಜೀವನಕ್ಕೆ ಖ್ಯಾತರು. ಇವರು ಗುಡಿಸಿಲಿನಲ್ಲಿ ವಾಸಿಸುತ್ತಿರುವವರು, ಇವರ ಬಳಿ ಇರುವುದು ಕೇವಲ ಒಂದು ಸೈಕಲ್ ಅಷ್ಟೆ. ಇವರು ಮೊದಲ ಬಾರಿಗೆ ಚುನಾವಣೆ ಗೆದ್ದಿದ್ದಾರೆ.
8:52 PM, 30 May

ಸೋಮ್ ಪ್ರಕಾಶ್ ಅವರು ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರು 54ನೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
Advertisement
8:50 PM, 30 May

ರೇಣುಕಾ ಸಿಂಗ್ ಸರೂತಾ ಅವರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಸಂಪುಟ ಸೇರಿದ ನಾಲ್ಕನೇ ಮಹಿಳೆ ಆಗಿದ್ದಾರೆ. ಇವರು ಮೊದಲ ಬಾರಿಗೆ ಸಂಪುಟ ಸೇರಿದ್ದಾರೆ. ಛತ್ತೀಸ್‌ಘಡದ ಬಿಜೆಪಿ ಮುಖಂಡರಾಗಿದ್ದಾರೆ.
8:49 PM, 30 May

ವಿ.ಮುರಳಿಧರನ್ ಅವರು ಕೇರಳದ ಬಿಜೆಪಿ ಮುಖಂಡರಾಗಿದ್ದರು. ಇವರು 52ನೇ ಯವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
8:44 PM, 30 May

ನಿತ್ಯಾನಂದ ರೈ ಅವರು 50 ನೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರು ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.
8:42 PM, 30 May

ಕರ್ನಾಟಕದ ಸುರೇಶ್ ಅಂಗಡಿ ಅವರು ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಇವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿದ್ದಾರೆ. ಇವರು ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.
8:39 PM, 30 May

ಯುವ ಸಂಸದ ಅನುರಾಗ್ ಸಿಂಗ್ ಠಾಕೂರ್ ಅವರು ಎರಡನೇ ಅವಧಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಸಿಸಿಐ ಅಧ್ಯಕ್ಷರೂ ಆಗಿದ್ದರು. ಆದರೆ ಇವರನ್ನು ಸುಪ್ರಿಂಕೋರ್ಟ್‌ ಅಮಾನತುಗೊಳಿಸಿತು.
Advertisement
8:39 PM, 30 May

ಧೋತ್ರೆ ಸಂಜಯ್ ಶಾಮರಾವ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಮಹಾರಾಷ್ಟ್ರದ ಕೋಲಾ ಲೋಕಸಭೆ ಕ್ಷೇತ್ರದಿಂದ ಆಯ್ಕೆ ಆಗಿದ್ದರು. ಇವರು ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.
8:37 PM, 30 May

ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸೇರಿರುವ ಜನಸ್ತೋಮ
8:35 PM, 30 May

ಶಿರೋಮಣಿ ಅಖಾಲಿ ದಳದ ಬಾಬುಲ್ ಸುಪ್ರಿಯೋ ಅವರು ಎರಡನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಪಂಜಾಬ್‌ನವರಾಗಿದ್ದಾರೆ. ಇವರು ಹಿನ್ನೆಲೆ ಗಾಯಕರಾಗಿದ್ದಾರೆ.
8:32 PM, 30 May

ರಾಮ್‌ದಾಸ್ ಅಠಾವಳೆ ಅವರು ಮತ್ತೊಮ್ಮೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಸಂಸತ್‌ನಲ್ಲಿ ಮಾಡುವ ಭಾಷಣಗಳು ಆಕರ್ಷಕವಾಗಿರುತ್ತವೆ.
8:31 PM, 30 May

ಸಾದ್ವಿ ನಿರಂಜನ ಜ್ಯೋತಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಸಂಪುಟ ಸೇರಿದ ಮೂರನೇ ಮಹಿಳಾ ಸಚಿವೆ ಆಗಿದ್ದಾರೆ.
8:26 PM, 30 May

ಗಂಗಾಪುರಂ ಕಿಶನ್ ರೆಡ್ಡಿ ಅವರಿಗೆ 41 ನೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ತೆಲಂಗಾಣ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ.
8:25 PM, 30 May

ಮೋದಿ ಅವರ ಕಳೆದ ಬಾರಿಯ ಸಂಪುಟಕ್ಕೂ ಈ ಬಾರಿಯ ಸಂಪುಟಕ್ಕೂ ಹೆಚ್ಚು ವ್ಯತ್ಯಾಸವಿಲ್ಲವೆಂದು ತೋರುತ್ತಿದೆ.
8:20 PM, 30 May

ನಿವೃತ್ತ ಕಮಾಂಡೆರ್ ಜನರಲ್ ವಿಕೆ ಸಿಂಗ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇವರು ಕಳೆದ ಬಾರಿ ಮೋದಿ ಸಂಪುಟದಲ್ಲಿ ಕಾರ್ಯನಿರ್ವಹಿಸಿದ್ದರು. ಕಳೆದ ಬಾರಿ ವಿದೇಶಾಂಗ ಖಾತೆ ರಾಜ್ಯ ಸಚಿವರಾಗಿದ್ದರು.
8:18 PM, 30 May

ಅರ್ಜುನ್ ರಾಂ ಮೇಘವಾಲ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಇವರು 37 ನೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ರಾಜ್ಯ ಸಚಿವರಾಗಿದ್ದರು.
8:12 PM, 30 May

ಲಕ್ಷ್ಮಣ್ ಮಾಂಡವಿಯಾ ಅವರು ಪ್ರಮಾಣ ವಚನ ಸ್ವೀಕರಿಸಿದರು. ಇವರು 34 ನೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರು ಸೈಕಲ್ ಏರಿ ಸಂಸತ್ತಿಗೆ ಬಂದು ಜನಪ್ರಿಯರಾಗಿದ್ದರು.
8:11 PM, 30 May

ಹಿರಿಯರಾದ ಹರ್ದಿಪ್ ಸಿಂಗ್ ಪುರಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ನಿವೃತ್ತ ಐಎಫ್‌ಎಸ್‌ ಅಧಿಕಾರಿಯಾಗಿದ್ದಾರೆ. ಇವರು ಕಳೆದ ಬಾರಿಯೂ ಮೋದಿ ಸಂಪುಟದಲ್ಲಿದ್ದರು.
8:06 PM, 30 May

ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಮಧ್ಯ ಪ್ರದೇಶದ ದೋಮಾ ಕ್ಷೇತ್ರದ ಸಂಸದರಾಗಿದ್ದರು. ಇವರು ಇಂಧನ ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
8:04 PM, 30 May

ಕಳೆದ ಬಾರಿ ಸಚಿವರಾಗಿದ್ದ ಕಿರಣ್ ರಿಜುಜು ಅವರು ಕೇಂದ್ರ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರೂ ಸಹ ಕಳೆದ ಬಾರಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರು ಅರುಣಾಚಲ ಪ್ರದೇಶದವರಾಗಿದ್ದಾರೆ.
8:03 PM, 30 May

ಡಾ.ಜಿತೇಂದ್ರ ಸಿಂಗ್ ಅವರು ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಹಿಂದೆ ಇವರು ರಾಜ್ಯ ಖಾತೆ ಸಚಿವರಾಗಿದ್ದರು.
7:46 PM, 30 May

ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಅವರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಇದೇ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ. 21ನೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
7:44 PM, 30 May

ಮುಕ್ತಾರ್‌ ಅಬ್ಬಾಸ್ ಲಖ್ವಿ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರು ಬಿಜೆಪಿಯ ಅಲ್ಪ ಸಂಖ್ಯಾತ ಮುಖಂಡರಾಗಿದ್ದಾರೆ. ಸಚಿವರಾಗುವ ಏಕೈಕ ಮುಸ್ಲಿಂ ಸಂಸದರು ಇವರಾಗಿದ್ದಾರೆ.
7:42 PM, 30 May

ಧರ್ಮೇಂದರ್ ಪ್ರಧಾನ್ ಅವರು 19ನೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಸಹ ಕಳೆದ ಅವಧಿಯಲ್ಲಿ ಸಚಿವರಾಗಿದ್ದರು. ಇವರು ಪೆಟ್ರೋಲಿಯಂ, ಇಂಧನ ಸಚಿವರಾಗಿದ್ದರು.
7:40 PM, 30 May

ಪಿಯೂಷ್ ಘೋಯಲ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರೂ ಸಹ ಕಳೆದ ಅವಧಿಯಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
READ MORE

English summary
Narendra Modi's Swearing-in Ceremony Live Updates in Kannada. BJP's Narendra Modi will be taking oath as 15th prime minister of India today(May 30) at 7 pm in Rashtrapati Bhavan, New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X