ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿಯವರ 'ಮನ್‌ ಕಿ ಬಾತ್‌'ನಿಂದ ಕೇಂದ್ರಕ್ಕೆ ಬಂದ ಆದಾಯವೆಷ್ಟು?

|
Google Oneindia Kannada News

ನವದೆಹಲಿ, ಜುಲೈ 20: ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ಡಿಎ ಮೈತ್ರಿಕೂಟ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಿಕ್ಕೆ ಬಂದಿದೆ. ಅದೇ ವರ್ಷ ಶುರುವಾದ ಪ್ರಧಾನಿ ನರೇಂದ್ರ ಮೋದಿಯವರ 'ಮನ್​ ಕಿ ಬಾತ್' ರೇಡಿಯೋ ಕಾರ್ಯಕ್ರಮ, ಇಲ್ಲಿಯವರೆಗೆ ಸುಮಾರು 31 ಕೋಟಿ ರೂಪಾಯಿ (30,80,91,225) ಆದಾಯ ಗಳಿಸಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಮಳೆಗಾಲದ ಸಂಸತ್ ಅಧಿವೇಶನ ನಡೆಯುತ್ತಿರುವ ವೇಳೆ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್​, "ಪ್ರಧಾನಿ ನರೇಂದ್ರ ಮೋದಿಯವರ 'ಮನ್​ ಕೀ ಬಾತ್'​ ದೂರದರ್ಶನ​ ಮತ್ತು ಆಲ್​ ಇಂಡಿಯಾ ರೇಡಿಯೋದ ಹಲವು ಚಾನಲ್​ಗಳಲ್ಲಿ ಪ್ರಸಾರವಾಗುತ್ತದೆ. 2014ರಿಂದ ಇಲ್ಲಿಯವರೆಗೆ ಪ್ರಸಾರ ಭಾರತಿ ತನ್ನ ಆಲ್​ ಇಂಡಿಯಾ ರೇಡಿಯೋ, ದೂರದರ್ಶನ ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳ ಮೂಲಕ ಒಟ್ಟು 78 ಆವೃತ್ತಿಗಳನ್ನು ಪ್ರಸಾರ ಮಾಡಿದೆ. ಈಗ 23 ಭಾಷೆ, 29 ಉಪ ಭಾಷೆಗಳಲ್ಲೂ 'ಮನ್​ ಕೀ ಬಾತ್'​ ಪ್ರಸಾರವಾಗುತ್ತಿದೆ,'' ಎಂದು ತಿಳಿಸಿದರು.

"ಪ್ರಸಾರ ಭಾರತಿ ತನ್ನ ಹಿಂದಿ ಮತ್ತು ವಿವಿಧ ಭಾಷೆಗಳ ದೂರದರ್ಶನ ಚಾನೆಲ್​ಗಳ ಮೂಲಕ 'ಮನ್​ ಕೀ ಬಾತ್'​ನ ದೃಶ್ಯೀಕೃತ ಆವೃತ್ತಿಗಳನ್ನೂ ಪ್ರಸಾರ ಮಾಡುತ್ತಿದೆ. ಆಲ್​ ಇಂಡಿಯಾ ರೇಡಿಯೋ ಮತ್ತು ದೂರದರ್ಶನಗಳ ಹೊರತಾಗಿಯೂ ಈ ಕಾರ್ಯಕ್ರಮವನ್ನು ದೇಶದಲ್ಲಿ ಸುಮಾರು 91 ಖಾಸಗಿ ಸ್ಯಾಟಲೈಟ್​ ಟಿವಿ ಚಾನಲ್​ಗಳು, ಕೇಬಲ್​, ಡಿಟಿಎಚ್​ ಪ್ಲ್ಯಾಟ್​ಫಾರಂಗಳು ಪ್ರಸಾರ ಮಾಡುತ್ತಿವೆ.''

Narendra Modi’s Mann Ki Baat Fetched Over Rs 30.80 Crore As Revenue Since It Began In 2014

"ಅದರೊಂದಿಗೆ iOS, ಆ್ಯಂಡ್ರಾಯ್ಡ್ ಮೊಬೈಲ್​ ಬಳಕೆದಾರರು ನ್ಯೂಸ್ ಆನ್​ ಏರ್​ ಮೂಲಕ ಅಥವಾ ಪ್ರಸಾರ ಭಾರತಿಯ ಯೂಟ್ಯೂಬ್​ ಚಾನಲ್​ಗಳ ಮೂಲಕ ಮನ್​ ಕೀ ಬಾತ್ ಕೇಳುತ್ತಿದ್ದಾರೆ,'' ಎಂದು ಅನುರಾಗ್​ ಠಾಕೂರ್​ ಮಾಹಿತಿ ನೀಡಿದರು.

ಟಿವಿ ಚಾನೆಲ್​ಗಳ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (BARC-ಬಾರ್ಕ್)ಯ ಡಾಟಾ ಅನ್ವಯ, ಮನ್​ ಕೀ ಬಾತ್​ ಕಾರ್ಯಕ್ರಮದ ವೀಕ್ಷಕರ ಸಂಖ್ಯೆ 2018-2020ರ ಅವಧಿಯಲ್ಲಿ ಅಂದಾಜು 6 ಕೋಟಿಯಿಂದ 14.35 ಕೋಟಿಗೆ ಏರಿಕೆಯಾಗಿದೆ.

ಈ ಕುರಿತು ಪ್ರತಿವರ್ಷದ ಅಂಕಿ- ಅಂಶ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್​, "2014-15ರಲ್ಲಿ 1.16 ಕೋಟಿ, 2015-16ರಲ್ಲಿ 2.18 ಕೋಟಿ, 2016-17ರಲ್ಲಿ 5.14, 2017-18ರಲ್ಲಿ 10.64 ಕೋಟಿ, 2018-19ರಲ್ಲಿ 7.47 ಕೋಟಿ, 2019-20ರಲ್ಲಿ 1.56 ಕೋಟಿ, 2020-21ರಲ್ಲಿ 1.02 ಕೋಟಿ ಆದಾಯ ಸೇರಿ ಒಟ್ಟು 30.80 ಕೋಟಿ ರೂಪಾಯಿ ಆದಾಯ ಬಂದಿದೆ,'' ಎಂದು ಹೇಳಿದ್ದಾರೆ.

"ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಪ್ರಕಾರ 2018ರಲ್ಲಿ ಆರು ಕೋಟಿಯಿದ್ದ ಪ್ರೇಕ್ಷಕರ ಸಂಖ್ಯೆ, 2020ರ ವೇಳೆಗೆ 14.35 ಕೋಟಿಗೆ ಹೆಚ್ಚಾಗಿದೆ,'' ಎಂದು ತಿಳಿಸಿದ್ದಾರೆ.

English summary
Prime Minister Narendra Modi's "Mann Ki Baat' radio program, which began in 2014, has generated revenue of about Rs 31 crore (Rs 30,80,91,225) so far, the central government has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X