ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಂಪುಟ ಸೇರಲಿರುವ ಸಂಸದರ ಪ್ರಾಥಮಿಕ ಪಟ್ಟಿ

|
Google Oneindia Kannada News

ನವದೆಹಲಿ, ಮೇ 30: ನರೇಂದ್ರ ಮೋದಿ ಅವರು ಇಂದು ಸಂಜೆ ಏಳು ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಅದಕ್ಕೆ ಮುನ್ನಾ ತಮ್ಮ ಸಂಪುಟ ಸೇರಲಿರುವ ಸಚಿವರೊಂದಿಗೆ ಚಹಾ ಕೂಟದಲ್ಲಿ ಅವರು ಭಾಗವಹಿಸಲಿದ್ದಾರೆ.

2019ರ ಮೋದಿ ಸರ್ಕಾರದ ಕೇಂದ್ರ ಸಚಿವ ಸಂಪುಟ ಸದಸ್ಯರು2019ರ ಮೋದಿ ಸರ್ಕಾರದ ಕೇಂದ್ರ ಸಚಿವ ಸಂಪುಟ ಸದಸ್ಯರು

ಸ್ಮೃತಿ ಇರಾನಿ, ರಾಮ್‌ವಿಲಾಸ್ ಪಾಸ್ವಾನ್, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್ ಸೇರಿ ಇನ್ನೂ ಹಲವರಿಗೆ ಸಚಿವ ಸಂಪುಟದಲ್ಲಿ ಇದ್ದಾರೆ. ರಾಜ್ಯದ ಮೂವರು ಸಂಸದರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಪಕ್ಕಾ ಆಗಿದೆ. ಅವರೂ ಸಹ ಇಂದು ಸಂಜೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕದಿಂದ ಮೋದಿ ಸಂಪುಟ ಸೇರುವ ಸಂಸದರ ಪಟ್ಟಿ ಅಂತಿಮಕರ್ನಾಟಕದಿಂದ ಮೋದಿ ಸಂಪುಟ ಸೇರುವ ಸಂಸದರ ಪಟ್ಟಿ ಅಂತಿಮ

ಹೊಸ ಸಚಿವರಿಗೆ ಸ್ವತಃ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರೇ ಕರೆ ಮಾಡಿ ವಿಷಯ ತಿಳಿಸುತ್ತಿದ್ದು, ಸಂಜೆ ಸಭೆಗೆ ಆಹ್ವಾನ ನೀಡುತ್ತಿದ್ದಾರೆ. ಮೋದಿ ಸಂಪುಟ ಸೇರುತ್ತಿರುವವರ ಪಟ್ಟಿ ಇಂತಿದೆ...

ಸಚಿವರಾಗಲಿರುವವರ ಪಟ್ಟಿ

ಸಚಿವರಾಗಲಿರುವವರ ಪಟ್ಟಿ

ಅಮಿತ್ ಶಾ, ಸ್ಮೃತಿ ಇರಾನಿ, ಸುಷ್ಮಾ ಸ್ವರಾಜ್, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಸದಾನಂದಗೌಡ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ಕಿರಣ್ ರಿಜುಜು, ಅರ್ಜುನ್ ಮೇಘವಾಲ್, ಪಿಯೂಶ್ ಘೋಯಲ್, ರವಿಶಂಕರ್ ಪ್ರಸಾದ್, ರಾಮದಾಸ್ ಅಠಾವಳೆ, ಪ್ರಕಾಶ್ ಜಾವಡೇಕರ್, ಬಾಬುಲ್ ಸುಪ್ರಿಯೋ, ಕೈಲಾಶ್ ಚೌಧರಿ, ಜಿ.ಕೃಷ್ಣ ರೆಡ್ಡಿ ಇವರುಗಳು ಈವರೆಗೂ ಅಮಿತ್ ಶಾ ಅವರಿಂದ ಕರೆ ಸ್ವೀಕರಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು, ಅಚ್ಚರಿಯ ಅಂಕಿಸಂಖ್ಯೆಗಳುಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು, ಅಚ್ಚರಿಯ ಅಂಕಿಸಂಖ್ಯೆಗಳು

ಇವರುಗಳೂ ಸಚಿವರಾಗಲಿದ್ದಾರೆ

ಇವರುಗಳೂ ಸಚಿವರಾಗಲಿದ್ದಾರೆ

ರಾವ್ ಇಂದ್ರಜಿತ್ ಸಿಂಗ್, ಕ್ರಿಶನ್ ಪಾಲ್ ಗುರ್ಗಲ್, ಎಚ್.ಕೌರ್, ಜೀತೇಂದ್ರ ಸಿಂಗ್, ಪುರುಷೋತ್ತಮ ರೂಪಲ್, ತಾವರ್ ಚಂದ್ ಗೆಹ್ಲೋಟ್, ರತನ್ ಲಾಲ್ ಕಠಾರಿಯಾ, ರಮೇಶ್ ಪೋಕ್ರಿಯಾಲ್ ನಿಶಾಂಕ್, ಆರ್‌.ಸಿ.ಪಿ.ಸಿಂಗ್, ಕಿಶನ್ ರೆಡ್ಡಿ, ಎ.ರವೀಂದ್ರ ನಾಥ್, ಕೈಲಾಶ ಚೌಧರಿ, ಸೋಮ್ ಪ್ರಕಾಶ್, ರಾಮೇಶ್ವರ್ ಥೇಲಿ, ಸುಬ್ರಾತ್ ಪಾಠಕ್, ದೇಬಾಶ್ರೀ ಚೌಧರಿ, ಸುರೇಶ್ ಅಂಗಡಿ ಅವರುಗಳು ಸಚಿವರಾಗಲಿದ್ದಾರೆ.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವವರು

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವವರು

ಶ್ರೀಪಾದ್ ಯೆಸ್ಸೋ ನಾಯಕ್, ದೇಬಶ್ರೀ ಚೌಧರಿ, ರಮೇಶ್ ಪೋಕಿರಿಯಾಲ್, ಸಂತೋಶ್ ಗಂಗ್ವಾರ್, ವಿ.ಕೆ.ಸಿಂಗ್, ನಿರಂಜನ್ ಜ್ಯೋತಿ, ಅರ್ಜುನ್ ರಾಂ ಮೇಘಾವಲ್, ನಿತ್ಯಾನಂದ ರೈ, ಮಾನ್ಶುಕ್ ಲಾಲ್ ಮಾಂಡವಿಯಾ, ಗಿರಿರಾಜ್ ಸಿಂಗ್, ಭೂಪೇಂದ್ರ ಯಾದವ್, ಧರ್ಮೇಂದ್ರ ಪ್ರಧಾನ್, ಮುಕ್ತೇಂದ್ರ ಅಬ್ಬಾಸ್, ಹರ್‌ಸಿಮ್ರತ್ ಕೌರ್ ಬಾದಲ್, ಬಾಬುಲ್ ಸುಪ್ರಿಯೋ (ಎಸ್‌ಎಡಿ) ಇವರುಗಳೂ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸುಷ್ಮಾ ಸ್ವರಾಜ್‌ ಅವರಿಗೆ ಮತ್ತೆ ಅವಕಾಶ

ಸುಷ್ಮಾ ಸ್ವರಾಜ್‌ ಅವರಿಗೆ ಮತ್ತೆ ಅವಕಾಶ

ಸುಷ್ಮಾ ಸ್ವರಾಜ್ ಅವರು ತಾವು ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದರು ಆದರೆ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡುವ ಉಮೇದನ್ನು ಬಿಜೆಪಿ ಹೊಂದಿದೆ. ಆದರೆ ಸಚಿವ ಸ್ಥಾನವನ್ನು ಅವರು ಒಪ್ಪಿಕೊಳ್ಳುತ್ತಾರೆಯೇ ಇಲ್ಲವೇ ಎಂಬುದು ಪ್ರಶ್ನೆಯಾಗಿದೆ. ಅರುಣ್ ಜೇಟ್ಲಿ ಅವರು ಈಗಾಗಲೇ ಸಚಿವ ಸ್ಥಾನವನ್ನು ನಿರಾಕರಿಸಿದ್ದಾರೆ.

ಮೋದಿ-ಅಮಿತ್ ಶಾ ನೇತೃತ್ವದಲ್ಲಿ ಹಲವು ಸಭೆ

ಮೋದಿ-ಅಮಿತ್ ಶಾ ನೇತೃತ್ವದಲ್ಲಿ ಹಲವು ಸಭೆ

ಮೋದಿ-ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿಯ ಪ್ರಮುಖ ಮುಖಂಡರು ಹಲವು ಸಭೆಗಳನ್ನು ನಡೆಸಿದ ನಂತರ ಈ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಇನ್ನೂ ಹಲವು ಮಂದಿ ಸಂಸದರನ್ನು ಸಚಿವರನ್ನಾಗಿ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಇಂದು ಮೋದಿ ಅವರ ಜೊತೆಗೆ ಕನಿಷ್ಟ 50 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮೋದಿ ಪ್ರಧಾನಿಯಾಗಿ ಇಂದೇ ಪ್ರಮಾಣವಚನ ಸ್ವೀಕರಿಸೋದು ಯಾಕೆ ಗೊತ್ತಾ? ಮೋದಿ ಪ್ರಧಾನಿಯಾಗಿ ಇಂದೇ ಪ್ರಮಾಣವಚನ ಸ್ವೀಕರಿಸೋದು ಯಾಕೆ ಗೊತ್ತಾ?

ಸದಾನಂದಗೌಡ, ಅಂಗಡಿ, ಜೋಶಿಗೆ ಸಚಿವ ಸ್ಥಾನ

ಸದಾನಂದಗೌಡ, ಅಂಗಡಿ, ಜೋಶಿಗೆ ಸಚಿವ ಸ್ಥಾನ

ರಾಜ್ಯದ ಮೂವರು ಬಿಜೆಪಿ ಸಂಸದರಿಗೆ ಸಚಿವ ಸ್ಥಾನ ದೊರೆತಿದೆ. ಸದಾನಂದಗೌಡ ಅವರು ಎರಡನೇಯ ಬಾರಿ ಕೇಂದ್ರ ಮಂತ್ರಿ ಆಗುವವರಿದ್ದಾರೆ. ಅವರು ಕಳೆದ ಅವಧಿಯಲ್ಲೂ ಮಂತ್ರಿ ಆಗಿದ್ದರು. ಪ್ರಹ್ಲಾದ್ ಜೋಶಿ ಮತ್ತು ಸುರೇಶ್ ಅಂಗಡಿ ಅವರಿಗೆ ಮೊದಲ ಬಾರಿ ಕೇಂದ್ರದ ಮಂತ್ರಿ ಸ್ಥಾನ ದೊರೆತಿದೆ.

ಮಿತ್ರಪಕ್ಷಗಳಿಗೆ ಕೇವಲ ಒಂದು ಸ್ಥಾನ

ಮಿತ್ರಪಕ್ಷಗಳಿಗೆ ಕೇವಲ ಒಂದು ಸ್ಥಾನ

ಮಿತ್ರ ಪಕ್ಷಗಳಲ್ಲಿ ರಾಮ್‌ವಿಲಾಸ್ ಪಾಸ್ವಾನ್ ಅವರಿಗೆ ಮಾತ್ರವೇ ಪ್ರಾರಂಭಿಕವಾಗಿ ಸಚಿವ ಸ್ಥಾನ ನೀಡಲಾಗಿದೆ. ಶಿವಸೇನೆಗೂ ಒಂದು ಸ್ಥಾನ ನೀಡುವ ಸಾಧ್ಯತೆ ಇದೆ. ಇದು ಪ್ರಾರಂಭಿಕ ಹಂತದ ಸಂಪುಟ ರಚನೆ ಆಗಿದ್ದು, ರಾಜ್ಯ ಖಾತೆಗಳು ಮತ್ತಿತರ ಉಳಿಕೆ ಖಾತೆಗಳನ್ನು ಕೆಲವೇ ದಿನಗಳಲ್ಲಿ ತುಂಬಲಾಗುತ್ತದೆ.

English summary
Narendra Modi will have meeting with new ministers today evening, Smriti Irani, Sushma Swaraj many other tall leaders of BJP will be ministers, Karnataka's three MP's were going to swear in as ministers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X