ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಜೊತೆ ವಿಶ್ವದ ಟಾಪ್ 50 ಸಿಇಒಗಳ ಡಿನ್ನರ್

By Mahesh
|
Google Oneindia Kannada News

ನವದೆಹಲಿ, ಸೆ. 21: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಯುಎಸ್ ಪ್ರವಾಸದ ವೇಳೆಯಲ್ಲಿ ಫಾರ್ಚ್ಯೂನ್ 500 ಕಂಪನಿ ಪಟ್ಟಿಗೆ ಸೇರಿರುವ ವಿಶ್ವದ ಟಾಪ್ 50 ಕಂಪನಿಗಳ ಸಿಇಒಗಳ ಜೊತೆ ಡಿನ್ನರ್ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಸೆ.23 ರಿಂದ 29 ರ ತನಕ ಐರ್ಲೆಂಡ್ ಹಾಗೂ ಯುಎಸ್ ಪ್ರವಾಸ ನಿರತರಾಗಿರುತ್ತಾರೆ.
ಸುಮಾರು 60 ವರ್ಷಗಳ ನಂತರ ಐರ್ಲೆಂಡ್ ಗೆ ಭೇಟಿ ನೀಡುತ್ತಿರುವ ಸೆ.23ರಂದು ಅಲ್ಲಿನ ಪ್ರಧಾನಿ ಎಂಡಾ ಕೆನ್ನಿ ಅವರೊಡನೆ ಮಾತುಕತೆ ನಡೆಸಲಿದ್ದಾರೆ.

ಸೆ.24ರಂದು ನ್ಯೂಯಾರ್ಕ್ ನಲ್ಲಿ ಮೋದಿ ಅವರು ನೀಡಲಿರುವ ಔತಣ ಕೂಟದಲ್ಲಿ ವಿಶ್ವದ ಟಾಪ್ 50 ಸಿಇಒಗಳು ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದಾರೆ.

50 top CEOs of Fortune 500 Companies to dine with Narendra Modi New York

ಇದರ ಬೆನ್ನಲ್ಲೇ ಸೆ. 26 ಹಾಗೂ 27ರಂದು ಸಿಲಿಕಾನ್ ವ್ಯಾಲಿಯ ಮತ್ತಷ್ಟು ಕಂಪನಿಗಳ ಮುಖ್ಯ ನಿರ್ವಹಣಾಧಿಕಾರಿಗಳಿಗೆ ಮೋದಿ ಅವರು ಆಹ್ವಾನ ಕಳಿಸುವ ನಿರೀಕ್ಷೆ ಇದೆ.

ಹೊಸ ಕಂಪನಿಗಳಿಗೆ ಆದ್ಯತೆ: ಸುಮಾರು 30 ಭಾರತೀಯ ಸ್ಟಾರ್ ಅಪ್ ಕಂಪನಿ ಹಾಗೂ 17 ಸಿಲಿಕಾನ್ ವ್ಯಾಲಿಯ ಸ್ಟಾರ್ ಅಪ್ ಕಂಪನಿಗಳ ಜೊತೆ ಸಂವಾದಕ್ಕೆ ಮೋದಿ ಅವರು ಓಕೆ ಎಂದಿದ್ದಾರೆ.

On 23rd September 2015 I will visit Ireland. It is after almost 60 years that an Indian Prime Minister will visit...

Posted by Narendra Modi on20 September 2015

ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜೊತೆ ಮಾತುಕತೆ, ಗೂಗಲ್ ಹಾಗೂ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ ಅಧಿಕಾರಿಗಳ ಜೊತೆ ಮಾತುಕತೆ, ವಿಶ್ವಸಂಸ್ಥೆಯ 70ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಮೋದಿ ಅವರ ಕಾರ್ಯಕ್ರಮ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಇದಲ್ಲದೆ, ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯ, ಯುಎಸ್ ಡಿಒ ಸಿಯಲ್ಲಿ ಪುನರ್ ಬಳಕೆ ಇಂಧನದ ಬಗ್ಗೆ ಮೋದಿ ಅವರು ಭಾಷಣ ಮಾಡಲಿದ್ದಾರೆ.

In San Jose, I will interact with the Indian community on the 27th September. The Indian diaspora has left no stone...

Posted by Narendra Modi on20 September 2015

ನ್ಯೂಯಾರ್ಕಿನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಈ ಹಿಂದೆ ಮೋದಿ ಭಾಷಣಕ್ಕೆ ಸಿಕ್ಕ 'ರಾಕ್ ಸ್ಟಾರ್ ಶೈಲಿ ಸ್ವಾಗತ' ಸೆ.27ರಂದು ಎಸ್ಎ ಪಿ ಸೆಂಟರ್ ಅರೀನಾ, ಸ್ಯಾನ್ ಹೊಸೆಯ ಕಾರ್ಯಕ್ರಮಕ್ಕೂ ಸಿಗುವ ನಿರೀಕ್ಷೆ ಇದೆ.

ಅಂದು ಮನರಂಜನೆಯ ಭಾಗವಾಗಿ ನೃತ್ಯೋದಯ ಕಥಕ್ ಅಕಾಡೆಮಿ, ಲಾಸ್ ಏಂಜಲೀಸ್, ಉತ್ತರ ಕರೋಲಿನಾದ ಮೋನಾ ಖಾನ್ ಕಂಪನಿ ಸೇರಿದಂತೆ ಹಲವಾರು ಸ್ಥಳೀಯರು ಸಾಂಸ್ಕೃತಿಕ ಪ್ರದರ್ಶನ ನೀಡಲಿದೆ.

On 24th September 2015, I will commence my visit to USA. This visit seeks to build on the substantial ground covered...

Posted by Narendra Modi on20 September 2015

ಮೋದಿ ಅವರು ತಮ್ಮ ಪ್ರವಾಸದ ಬಗ್ಗೆ ಫೇಸ್ ಬುಕ್ ನಲ್ಲಿ ಸರಣಿ ಪೋಸ್ಟ್ ಮೂಲಕ ವಿವರ ನೀಡಿದ್ದಾರೆ. ಹೆಚ್ಚಿನ ವಿವರಗಳು ಪ್ರಧಾನಿ ಸಚಿವಾಲಯದ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ.

English summary
Narendra Modi’s U.S. Itinerary 2015: PM Modi to tour Irleand and US fromn 23-29 September, 2015. 50 top CEOs of Fortune 500 Companies to dine with Narendra Modi New York. On Sept. 27, Mr. Modi will address a stadium in a rock-star style extravaganza planned at the SAP Centerarena in San Jose. Modi will be touring Ireland and USA from September 23-28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X