ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರೋಲಿಗರಿಗೆ 'ಎಂಜಾಯ್‌' ಎಂದು ಆಹ್ವಾನ ನೀಡಿದ ಪ್ರಧಾನಿ ಮೋದಿ

|
Google Oneindia Kannada News

Recommended Video

ಟ್ರೋಲಿಗರಿಗೆ 'ಎಂಜಾಯ್‌' ಎಂದು ಆಹ್ವಾನ ನೀಡಿದ ಪ್ರಧಾನಿ ಮೋದಿ | MODI | TWEET | TROLL | ONEINDIA KANNADA

ನವದೆಹಲಿ, ಡಿಸೆಂಬರ್ 26: ಕಂಕಣ ಸೂರ್ಯ ಗ್ರಹಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಸುದ್ದಿಯಾಗುತ್ತಿದ್ದಾರೆ. ಗ್ರಹಣ ವೀಕ್ಷಣೆಯ ಅವರ ಚಿತ್ರ ಮೆಮೆ ಹಾಗೂ ಟ್ರೋಲ್ ಆಗಿರುವುದನ್ನು ತಿಳಿದ ಮೋದಿ ಟ್ರೋಲ್ ಮಾಡಲು ಮುಕ್ತ ಆಹ್ವಾನ ನೀಡಿದ್ದಾರೆ.

ಕಳೆದ ಒಂದು ತಾಸಿನ ಹಿಂದಷ್ಟೇ ಮೋದಿ 'ನಾನು ಸೂರ್ಯ ಗ್ರಹಣ ನೋಡಲು ಕಾತುರನಾಗಿದ್ದೇನೆ' ಆದರೆ ಮೋಡವಿರುವುದರಿಂದ ಸೂರ್ಯಗ್ರಹಣ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

ಕಂಕಣ ಸೂರ್ಯ ಗ್ರಹಣ: ಮನೆಯಿಂದ ಹೊರ ಬರದ ಯಡಿಯೂರಪ್ಪ ಕಂಕಣ ಸೂರ್ಯ ಗ್ರಹಣ: ಮನೆಯಿಂದ ಹೊರ ಬರದ ಯಡಿಯೂರಪ್ಪ

ಮೋಡದಲ್ಲೂ ಸೂರ್ಯನನ್ನು ಮೋದಿ ಹುಡುಕುತ್ತಿದ್ದಾರೆ ಎನ್ನುವುದು ಟ್ರೋಲ್ ಆಗಿತ್ತು.ಅದನ್ನು ತಿಳಿದ ಮೋದಿ ಟ್ರೋಲ್ ಮಾಡಿ ಎಂಜಾಯ್ ಮಾಡಿ ಎಂದು ಟ್ರೋಲ್ ಮಾಡುವವರಿಗೆ ಆಹ್ವಾನ ನೀಡಿದ್ದಾರೆ.

Narendra Modi Tweets Most Welcome Enjoy For Trollers

ಇಂದು ಸೂರ್ಯ ಗ್ರಹಣವು ಮೂಲಾನಕ್ಷತ್ರ , ಧನುರಾಶಿಯಲ್ಲಿ ಸೂರ್ಯನಿಗೆ ಕಂಕಣಾಕೃತಿಯಲ್ಲಿ ಕೇತುಗ್ರಸ್ತ ಗ್ರಹಣವು ಕಾಣಿಸಿಕೊಂಡಿದೆ. 11.3ಕ್ಕೆ ಗ್ರಹಣ ಮೋಕ್ಷ ಕಂಡಿದೆ.ಮೋಕ್ಷ ಕಾಲದಲ್ಲಿ ಬೆಂಗಳೂರಿನಲ್ಲೂ ಗ್ರಹಣ ಗೋಚರಿಸಿದೆ.

ಬೆಂಗಳೂರಿನಲ್ಲಿ ಕಂಕಣ ಸೂರ್ಯ ಗ್ರಹಣ ಗೋಚರವಾಗಿದೆ. ಲಾಲ್​​ಬಾಗ್​​​​ನಲ್ಲಿ ವಾದ್ಯ ಬಾರಿಸುವ ಮೂಲಕ ಸೂರ್ಯಗ್ರಹಣ ವೀಕ್ಷಣೆಗೆ ಚಾಲನೆ ನೀಡಲಾಗಿದೆ. ಜನರು ಖುಷಿಯಿಂದ ಗ್ರಹಣವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಸೋಲಾರ್ ಫಿಲ್ಟರ್ ಗ್ಲಾಸ್ ಮೂಲಕ ಗ್ರಹಣ ವೀಕ್ಷಣೆ ಮಾಡಿದ್ದಾರೆ.

ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಹಾಗೂ ನಡಿಗೆದಾರರ ಒಕ್ಕೂಟದಿಂದ ಸೂರ್ಯಗ್ರಹಣ ವೀಕ್ಷಣೆಯನ್ನು ಆಯೋಜನೆ ಮಾಡಲಾಗಿತ್ತು. ಸೂರ್ಯಗ್ರಹಣದ ಕೌತುಕ ಕಣ್ತುಂಬಿಕೊಳ್ಳುವ ಕಾತರ ಹೆಚ್ಚಾಗಿತ್ತು. ಲಾಲ್ ಬಾಗ್​​ಗೆ ಅನೇಕ ಜನರು ಆಗಮಿಸಿದ್ದರು.

English summary
Prime Minister Narendra Modi saw Solar Eclipse and Tweets Most Welcome Enjoy For Trollers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X