ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರ ಬಗ್ಗೆ ನರೇಂದ್ರ ಮೋದಿ ಟ್ವೀಟ್‌

|
Google Oneindia Kannada News

Recommended Video

Narendra Modi express his happines through twitter..!

ನವದೆಹಲಿ, ಅಕ್ಟೋಬರ್ 07: ಜೆಡಿಎಸ್ ವರಿಷ್ಠ ದೇವೇಗೌಡ ಅವರ ಬಗ್ಗೆ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ದೇವೇಗೌಡ ಅವರು ಏಕತಾ ಪ್ರತಿಮೆಗೆ ಭೇಟಿ ಕೊಟ್ಟದ್ದಕ್ಕೆ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ ಅವರು ಅಕ್ಟೋಬರ್ 5 ರಂದು ಗುಜರಾತ್‌ನ ಕೆವೆಡಿಯಾದಲ್ಲಿರುವ ಏಕತಾ ಪ್ರತಿಮೆಗೆ ಭೇಟಿ ನೀಡಿದ್ದರು. ಸರ್ಕಾರ ಸರೋವರ, ಸರ್ಕಾರ ಏಕತಾ ಪ್ರತಿಮೆಯನ್ನು ದೇವೇಗೌಡ ಅವರು ಕಣ್ಣುತುಂಬಿಕೊಂಡಿದ್ದರು.

'ಚಕ್ರವರ್ತಿ ಸೂಲಿಬೆಲೆಗೆ ಸಂಸದರಾಗೋ ಹುಚ್ಚಿಲ್ಲ!' ಬೆಂಬಲಕ್ಕೆ ನಿಂತ ದೇವೇಗೌಡ್ರು'ಚಕ್ರವರ್ತಿ ಸೂಲಿಬೆಲೆಗೆ ಸಂಸದರಾಗೋ ಹುಚ್ಚಿಲ್ಲ!' ಬೆಂಬಲಕ್ಕೆ ನಿಂತ ದೇವೇಗೌಡ್ರು

ಈ ಬಗ್ಗೆ ನಿನ್ನೆ ಟ್ವೀಟ್‌ ಮಾಡಿರುವ ನರೇಂದ್ರ ಮೋದಿ, 'ಮಾಜಿ ಪ್ರಧಾನಿ ದೇವೇಗೌಡ ಅವರು ಏಕತಾ ಪ್ರತಿಮೆಗೆ ಭೇಟಿ ನೀಡಿರುವುದು ಹರ್ಷ ತಂದಿದೆ' ಎಂದು ಹೇಳಿದ್ದಾರೆ. ದೇವೇಗೌಡ ಅವರು ಏಕತಾ ಪ್ರತಿಮೆ ಬಳಿ ತೆಗೆಸಿಕೊಂಡಿರುವ ಚಿತ್ರಗಳನ್ನು ಮೋದಿ ಅವರು ತಮ್ಮ ಟ್ವಿಟ್ಟರ್ ಖಾತೆಯಿಂದ ಶೇರ್ ಸಹ ಮಾಡಿದ್ದಾರೆ.

Narendra Modi Tweeted About Deve Gowda

ಈ ಹಿಂದೆ ರಾಜ್ಯದ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಪ್ರಚಾರ ಭಾಷಣದಲ್ಲಿ ಮೋದಿ ಅವರು ದೇವೇಗೌಡ ಅವರನ್ನು ಭಾರಿ ಹೊಗಳಿದ್ದರು. 'ದೇವೇಗೌಡ ಅವರು ಮನೆಗೆ ಬಂದರೆ ನಾನೇ ಖುದ್ದಾಗಿ ಅವರ ಕಾರಿನ ಬಾಗಿಲು ತೆಗೆಯುತ್ತೇನೆ' ಎಂದು ಹೇಳಿದ್ದರು.

ಪ್ರವಾಹ ಪರಿಹಾರಕ್ಕಾಗಿ ಹೋರಾಟಕ್ಕಿಳಿದ ಎಚ್. ಡಿ. ದೇವೇಗೌಡಪ್ರವಾಹ ಪರಿಹಾರಕ್ಕಾಗಿ ಹೋರಾಟಕ್ಕಿಳಿದ ಎಚ್. ಡಿ. ದೇವೇಗೌಡ

ಏಕತಾ ಪ್ರತಿಮೆಗೆ ಭೇಟಿ ನೀಡಿದ್ದ ದೇವೇಗೌಡ ಅವರು, ಗಣ್ಯರ ಡೈರಿಯಲ್ಲಿ ಏಕತಾ ಪ್ರತಿಮೆಯ ವಿನ್ಯಾಸ ಅಲ್ಲಿನ ವಾತಾವರಣ, ಸ್ವಚ್ಛತೆಯ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆದಿದ್ದರು.

Narendra Modi Tweeted About Deve Gowda

ಮೈತ್ರಿ ಸರ್ಕಾರ ಉರುಳಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದುಕೊಂಡ ಬಳಿಕ ದೇವೇಗೌಡ ಅವರು ಮೋದಿ ಅವರನ್ನು ಹೊಗಳಲು ಪ್ರಾರಂಭಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆಯೂ ಟೀಕೆಗಳು ಮಾಡದೆ, ಕೆಲವು ಉತ್ತಮ ಮಾತುಗಳನ್ನೇ ಇತ್ತೀಚೆಗೆ ಆಡಿದ್ದಿದು ಗಮನಾರ್ಹ.

ಮಧ್ಯಂತರ ಚುನಾವಣೆ ಸೂಚನೆ ಕೊಟ್ಟ ದೇವೇಗೌಡ: ಮೈತ್ರಿ ಇಲ್ಲವಂತೆಮಧ್ಯಂತರ ಚುನಾವಣೆ ಸೂಚನೆ ಕೊಟ್ಟ ದೇವೇಗೌಡ: ಮೈತ್ರಿ ಇಲ್ಲವಂತೆ

ದೇವೇಗೌಡ ಅವರು ಏಕತಾ ಪ್ರತಿಮೆಗೆ ಭೇಟಿ ನೀಡಿದ್ದರ ಬಗ್ಗೆ ಟ್ವಿಟ್ಟರ್‌ನಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆ ಸಿಬಿಐ ಮಾಡುತ್ತಿದ್ದು, ಅದರಿಂದ ಕುಮಾರಸ್ವಾಮಿ ಅವರನ್ನು ರಕ್ಷಿಸಲು ದೇವೇಗೌಡ ಅವರು ಹೊಸ ದಾಳ ಹೂಡುತ್ತಿದ್ದಾರೆ ಎಂಬರ್ಥದ ಪ್ರತಿಕ್ರಿಯೆಗಳು ಬಂದಿವೆ.

English summary
JDS leader, former PM Deve Gowda visited statue of unity in Gujrat, Narendra Modi express his happines through twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X