ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಮೋದಿ ಸಂಪುಟ ವಿಸ್ತರಣೆ, ಯಾರು ಸೇರ್ತಾರೆ?

|
Google Oneindia Kannada News

ನವದೆಹಲಿ, ನ.9 : ಮೇ ತಿಂಗಳಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಸಂಪುಟ ವಿಸ್ತರಣೆ ನಡೆಸುತ್ತಿದ್ದಾರೆ. ಇಂದು ಸಂಪುಟ ವಿಸ್ತರಣೆ ನಡೆಯಲಿದ್ದು, ಯಾರಿಗೆ ಯಾವ ಖಾತೆ? ಎನ್ನುವ ಲೆಕ್ಕಾಚಾರಗಳು ಆರಂಭವಾಗಿವೆ.

ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ಬಿಜೆಪಿ ಉಪಾಧ್ಯಕ್ಷ ಮುಖ್ತರ್ ಅಬ್ಬಾಸ್ ನಕ್ವಿ ಸೇರಿದಂತೆ 15 ಮಂದಿ ಸಂಪುಟ ಸೇರುವ ಸಾಧ್ಯತೆ ಇದೆ. ಕೆಲವು ಸಚಿವ ಖಾತೆ ಬದಲಾವಣೆಯಾಗುವ ಸಾಧ್ಯತೆ ಇದ್ದು, ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಅವರ ಖಾತೆಯೂ ಬದಲಾವಣೆಯಾಗಲಿದೆ ಎಂದು ತಿಳಿದುಬಂದಿದೆ.

Narendra Modi

ರಾಷ್ಟ್ರಪತಿ ಭವನದ ದರ್ಬಾರ್‌ ಹಾಲ್‌ನಲ್ಲಿ ಮಧ್ಯಾಹ್ನ 1 ಗಂಟೆಗೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ಜೊತೆಗಿನ ಅಸಮಾಧಾನವನ್ನು ಶಿವಸೇನೆ ಬದಿಗಿಟ್ಟಿದ್ದು, ಶಿವಸೇನೆಗೆ ಸೇರಿದ ರಾಜ್ಯಸಭೆ ಸದಸ್ಯ ಅನಿಲ್ ದೇಸಾಯಿ ಅವರು ಮೋದಿ ಸಂಪುಟ ಸೇರಲಿದ್ದಾರೆ. [ಮೋದಿ ಸಂಪುಟ ವಿಸ್ತರಣೆ: ಡಿವಿಎಸ್ ಭವಿಷ್ಯ ತೂಗುಯ್ಯಾಲೆ?]

ಅಂದಹಾಗೆ ಪ್ರಸ್ತುತ ಕೇಂದ್ರ ಸಂಪುಟದಲ್ಲಿ ಪ್ರಧಾನಿ, 23 ಸಂಪುಟ ದರ್ಜೆಯ ಸಚಿವರೂ ಸೇರಿದಂತೆ 45 ಮಂದಿ ಇದ್ದಾರೆ. ಅಲ್ಲದೇ 22 ರಾಜ್ಯ ಸಚಿವರಿದ್ದು, ಇವರಲ್ಲಿ 10 ಮಂದಿ ಸ್ವತಂತ್ರ ನಿರ್ವಹಣೆ ಹೊಂದಿದ್ದಾರೆ.

ಇಂದು ಯಾರು ಸಂಟುಟ ಸೇರುತ್ತಾರೆ?

* ಮನೋಹರ್ ಪರಿಕ್ಕರ್ - ಗೋವಾ ಮಾಜಿ ಸಿಎಂ
* ಜಯಂತ್ ಸಿನ್ಹಾ - ಹಜಾರಿಬಾಗ್ ಸಂಸದ
* ಅನುರಾಗ್ ಠಾಕೂರ್ - ಹಮೀರ್​ಪುರ್ ಸಂಸದ
* ಹನ್ಸರಾಜ್‌ ಅಹಿರ್ - ಚಂದ್ರಾಪುರ ಸಂಸದ
* ಬೀರೇಂದ್ರ ಸಿಂಗ್ - ರಾಜ್ಯಸಭಾ ಸದಸ್ಯ
* ಗಿರಿರಾಜ್ ಸಿಂಗ್ - ನಾವ್ಡಾ ಸಂಸದ
* ಜೆ.ಪಿ. ನಡ್ಡಾ
* ರಾಮ್ ಕೃಪಾಲ್ ಯಾದವ್ - ಪಾಟಲಿಪುತ್ರ ಸಂಸದ
* ಬಂಡಾರು ದತ್ತಾತ್ರೇಯಾ - ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ
* ಸುಜನ ಚೌಧರಿ - ರಾಜ್ಯಸಭಾ ಸದಸ್ಯ
* ರಾಜೀವ್ ಪ್ರತಾಪ್ ರೂಢಿ - ಸರಾನ್ ಕ್ಷೇತ್ರದ ಸಂಸದ
* ಸವರ್ಮಾಲ್ ಜಾಟ್ - ಅಜ್ಮೀರ್ ಸಂಸದ
* ವಿಜಯ್ ಸನ್ ಪಲ - ಹೋಶಿಯಾರ್ ಪುರ್ ಸಂಸದ
* ನಿರಂಜನ್ ಜ್ಯೋತಿ - ಫತೇಪುರ್ ಸಂಸದ
* ಸುರೇಶ್ ಪ್ರಭು - ಶಿವಸೇನೆ ಮುಖಂಡ

English summary
Prime Minister Narendra Modi to reshuffle and expand his cabinet on Sunday to inject fresh talent, give wider representation to states and ease pressure on some ministers. The event is scheduled to take place at the Durbar hall of Rashtrapati Bhavan at 1 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X