ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಹೊತ್ತಲ್ಲಿ ರಾಹುಲ್ ಗಾಂಧಿ, ಕುಮಾರಸ್ವಾಮಿಗೆ ಮೋದಿ ಮಾಡಿದ ಮನವಿ ಏನು?

|
Google Oneindia Kannada News

Recommended Video

Lok Sabha Elections 2019 : ಎಚ್ ಡಿ ಕುಮಾರಸ್ವಾಮಿ ಹಾಗು ರಾಹುಲ್ ಗಾಂಧಿಗೆ ಮನವಿ ಮಾಡಿದ ನರೇಂದ್ರ ಮೋದಿ

ನವದೆಹಲಿ, ಮಾರ್ಚ್ 13: ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ರಾಜಕೀಯ ಬದ್ಧ ವೈರಿಗಳಾದ ರಾಹುಲ್ ಗಾಂಧಿ ಮತ್ತು ಎಚ್ ಡಿ ಕುಮಾರಸ್ವಾಮಿ ಮುಂತಾದ ವಿಪಕ್ಷ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ.

ಬೇರೆ ಬೇರೆ ಕ್ಷೇತ್ರಗಳ ಸೆಲೆಬ್ರಿಟಿಗಳೂ ಸೇರಿದಂತೆ ತಮ್ಮ ರಾಜಕೀಯ ವೈರಿಗಳನ್ನೂ ಟ್ಯಾಗ್ ಮಾಡಿರುವ ಮೋದಿ,ಮತದಾನದ ಮಹತ್ವದ ಕುರಿತು ಅರಿವು ಮೂಡಿಸಲು ಮನವಿ ಮಾಡಿದ್ದಾರೆ.

ಮತದಾನದ ಅರಿವು ಮೂಡಿಸಲು ಸೆಲೆಬ್ರಿಟಿಗಳಿಗೆ ಮೋದಿ ಮನವಿಮತದಾನದ ಅರಿವು ಮೂಡಿಸಲು ಸೆಲೆಬ್ರಿಟಿಗಳಿಗೆ ಮೋದಿ ಮನವಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಸಿ. ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸೇರಿದಂತೆ ಹಲವರಿಗೆ ಮೋದಿ ಟ್ವೀಟ್ ಮಾಡಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಹೆಚ್ಚಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ. 2014 ರ ಲೋಕಸಭಾ ಚುನಾವಣೆಯ ಮತದಾನದ ಪ್ರಮಾಣಕ್ಕಿಂತಲೂ ಈ ಬಾರಿ ಹೆಚ್ಚಾಗಬೇಕು ಎಂಬುದು ಬಿಜೆಪಿ ಇಂಗಿತ. 2014ರಲ್ಲಿ ದಾಖಲೆಯ ಮತದಾನವಾಗಿ ಶೇ.66.38ರಷ್ಟು ದಾಖಲಾಗಿತ್ತು.

ರಾಹುಲ್ ಗಾಂಧಿ, ಮಮತಾ ದೀದಿ ಗೂ ಮನವಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯುವಂತೆ ನಾನು ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಶರದ್ ಪವಾರ್, ಮಾಯಾವತಿ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಎಂಕೆ ಸ್ಟಾಲಿನ್ ಅವರಲ್ಲಿ ಮನವಿ ಮಾಡುತ್ತೇನೆ -ನರೇಂದ್ರ ಮೋದಿ, ಪ್ರಧಾನಿ

ಎಚ್ ಡಿ ಕುಮಾರಸ್ವಾಮಿಗೂ ಮನವಿ

ಈ ಚುನಾವಣೆಯಲ್ಲಿ ಗರಿಷ್ಠ ಭಾರತೀಯರು ಮತಗಟ್ಟೆಗೆ ಬಂದು ಮತಚಲಾಯಿಸಿ ಭಾರತವನ್ನು ಮತ್ತಶಃ್ಟು ಬಲಗೊಳಿಸುವಂತೆ ಮಾಡಲಿ ಎಂದು ಕೆ.ಚಂದ್ರಶೇಖರ್ ರಾವ್, ನವೀನ್ ಪಟ್ನಾಯಕ್, ಎಚ್ ಡಿ ಕುಮಾರಸ್ವಾಮಿ, ಎಚ್ ಚಂದ್ರಬಾಬು ನಾಯ್ಡು ಅವರಿಗೂ ನಾನು ಮನವಿ ಮಾಡುತ್ತೇನೆ- ನರೇಂದ್ರ ಮೋದಿ, ಪ್ರಧಾನಿ

ಬಿಜೆಪಿ ಗೆದ್ದರೂ ನರೇಂದ್ರ ಮೋದಿ ಪ್ರಧಾನಿಯಾಗಲ್ಲ: ಶರದ್ ಪವಾರ್ಬಿಜೆಪಿ ಗೆದ್ದರೂ ನರೇಂದ್ರ ಮೋದಿ ಪ್ರಧಾನಿಯಾಗಲ್ಲ: ಶರದ್ ಪವಾರ್

ನಿತೀಶ್ ಕುಮಾರ್

ನಿತೀಶ್ ಕುಮಾರ್ , ರಾಮ್ ವಿಲಾಸ್ ಪಾಸ್ವಾನ್, ಪವನ್ ಚಾಮ್ಲಿಂಗ್ ಅವರೇ ಮತದಾನದಲ್ಲಿ ಹೆಚ್ಚಿನ ಜನ ಪಾಲ್ಗೊಳ್ಳುವಂತೆ ಮಾಡಲು ನಿಮ್ಮೆಲ್ಲರ ಬೆಂಬಲವನ್ನು ನಾನು ಅಪೇಕ್ಷಿಸುತ್ತೇನೆ. ಗರಿಷ್ಠ ಮತದಾನ ಪ್ರಮಾಣ ಸಾಧಿಸಲು ಪ್ರಯತ್ನಿಸೋಣ-ನರೇಂದ್ರ ಮೋದಿ, ಪ್ರಧಾನಿ

ಪ್ರಣಬ್ ಮುಖರ್ಜಿ

ಗೌರವಾನ್ಮಿತ ರಾಜಕಾರಣಿಯಾಗಿ ದಶಕಗಳಿದ ರಾಜಕೀಯ ರಂಗದಲ್ಲಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೂ ಮತದಾನದ ಕುರಿತ ಜಾಗೃತಿಯಲ್ಲಿ ಕೈಜೋಡಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಈ ಮೂಲಕ ಪ್ರಜಾಪ್ರಭುತ್ವ ಹಬ್ಬವನ್ನು ಚೆಂದಗಾಣಿಸಿಕೊಡಬೇಕಾಗಿ ವಿನಂತಿಸುತ್ತೇನೆ -ನರೇಂದ್ರ ಮೋದಿ, ಪ್ರಧಾನಿ

English summary
Prime minister Narendra Modi on twitter requested HD Kumaraswamy and Rahul Gandhi to create awareness about importance of voting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X