ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಆಡಳಿತಕ್ಕೆ ಜನತೆ ಕೊಟ್ಟ ಮಾರ್ಕ್ಸ್ ಎಷ್ಟು?

|
Google Oneindia Kannada News

ನವದೆಹಲಿ, ಜೂನ್.02: ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಜನರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ನೊವೆಲ್ ಕೊರೊನಾ ವೈರಸ್ ನಿಯಂತ್ರಣ ಹಾಗೂ ಭಾರತದಲ್ಲಿ ಲಾಕ್ ಡೌನ್ ನಿರ್ವಹಣೆ ಸೇರಿದಂತೆ ಒಟ್ಟಾರೆಯಾಗಿ ಕೇಂದ್ರ ಸರ್ಕಾರ ಆಡಳಿತ ವೈಖರಿಯನ್ನು ಮೆಚ್ಚಿಕೊಂಡಿದ್ದಾರೆ.

Recommended Video

Union Budget 2020-21: ಸರ್ಕಾರಿ ನೌಕರರಿಗೆ ನಿರಾಸೆ ಸಾಧ್ಯತೆ | Govt employees | DA | oneindia kannada

ಕಳೆದ ಮೇ ತಿಂಗಳಿನಲ್ಲಿ ಸಿ-ವೋಟರ್ ನಡೆಸಿದ 'ಸ್ಟೇಟ್ ಆಫ್ ದಿ ನೇಷನ್-2020' ಸ್ವಾತಂತ್ರ್ಯ ಸಮೀಕ್ಷೆಯಲ್ಲಿ ಶೇ.65ರಷ್ಟು ಜನರು ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತವು ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಸಿದ್ದಾರೆ.

ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರದ ಸಾರಾಂಶದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರದ ಸಾರಾಂಶ

ಭಾರತದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕನಿಷ್ಠ 3,000 ಜನರನ್ನು ಸಮೀಕ್ಷೆ ನಡೆಸುವುದಕ್ಕೆ ಬಳಸಿಕೊಳ್ಳಲಾಗಿತ್ತು. ಪ್ರತಿ ರಾಜ್ಯದಲ್ಲಿ 3,000 ಜನರಿಂದ ಅಭಿಪ್ರಾಯವನ್ನು ಸಂಗ್ರಹಿಸಿ ಸಿ-ವೋಟರ್ ವರದಿಯನ್ನು ನೀಡಿದೆ.

ಪ್ರಧಾನಿ ಆಡಳಿತಕ್ಕೆ ಶೇ.65.69ರಷ್ಟು ಜನರಿಂದ ಉತ್ತಮ ಪ್ರತಿಕ್ರಿಯೆ

ಪ್ರಧಾನಿ ಆಡಳಿತಕ್ಕೆ ಶೇ.65.69ರಷ್ಟು ಜನರಿಂದ ಉತ್ತಮ ಪ್ರತಿಕ್ರಿಯೆ

ಇತ್ತೀಚಿಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವು ಎರಡನೇ ಅವಧಿ ಆಡಳಿತ ಆರಂಭಿಸಿದ ವಾರ್ಷಿಕೋತ್ಸವನ್ನು ಆಚರಿಸಿತು. ಇದರ ನಡುವೆ ಸಿ-ವೋಟರ್ ನಡೆಸಿದ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಶೇ.65.69ರಷ್ಟು ಜನರು ಉತ್ತಮವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಪೈಕಿ ಒಡಿಶಾ ರಾಜ್ಯದಲ್ಲಿ ಮೋದಿ ಆಡಳಿತವನ್ನು ಶೇ.95.6ರಷ್ಟು ಜನರು ಮೆಚ್ಚಿಕೊಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಶೇ.93.95 ಹಾಗೂ ಛತ್ತೀಸ್ ಗಢದಲ್ಲಿ ಶೇ.92.73ರಷ್ಟು ಜನರು ಪ್ರಧಾನಿ ಆಡಳಿತಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಪ್ರಧಾನಿ ಮೋದಿ ಆಡಳಿತಕ್ಕೆ ಭೇಷ್ ಎಂದ ಟಾಪ್-10 ರಾಜ್ಯಗಳು

ಪ್ರಧಾನಿ ಮೋದಿ ಆಡಳಿತಕ್ಕೆ ಭೇಷ್ ಎಂದ ಟಾಪ್-10 ರಾಜ್ಯಗಳು

ರಾಜ್ಯ ಶೇಕಡಾವಾರು ಮಾರ್ಕ್ಸ್ (ಸಿ-ವೋಟರ್ ಸಮೀಕ್ಷೆ)

ಒಡಿಶಾ 95.6%

ಹಿಮಾಚಲ ಪ್ರದೇಶ 93.95%

ಛತ್ತೀಸ್ ಗಢ್ 92.73%

ಆಂಧ್ರ ಪ್ರದೇಶ 83.6%

ಜಾರ್ಖಂಡ್ 82.97%

ಕರ್ನಾಟಕ 82.56%

ಗುಜರಾತ್ 76.46%

ಅಸ್ಸಾಂ 74.59%

ತೆಲಂಗಾಣ 71.51%

ಮಹಾರಾಷ್ಟ್ರ 71.48%

ಪ್ರಧಾನಮಂತ್ರಿ ವರ್ಚಸ್ಸು ದಕ್ಷಿಣ ಭಾರತದಲ್ಲಿ ಅಷ್ಟಕಷ್ಟೇ

ಪ್ರಧಾನಮಂತ್ರಿ ವರ್ಚಸ್ಸು ದಕ್ಷಿಣ ಭಾರತದಲ್ಲಿ ಅಷ್ಟಕಷ್ಟೇ

ಪ್ರಧಾನಿಮಂತ್ರಿ ನರೇಂದ್ರ ಮೋದಿ ಆಡಳಿತಕ್ಕೆ ದಕ್ಷಿಣ ಭಾರತದಲ್ಲಿ ಜನರು ಅಷ್ಟಾಗಿ ಮೆಚ್ಚಿಕೊಂಡಿಲ್ಲ. ಬಿಜೆಪಿಯ ವರ್ಚಸ್ಸು ದಕ್ಷಿಣ ಭಾರತದಲ್ಲಿ ಅಷ್ಟಕಷ್ಟೇ ಎನ್ನುವುದು ಸಿ-ವೋಟರ್ ಸಮೀಕ್ಷೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಬಿಜೆಪಿ ಸರ್ಕಾರದ ಆಡಳಿತವು ತೃಪ್ತಿದಾಯಕವಾಗಿಲ್ಲ ಎಂದ ರಾಜ್ಯಗಳಲ್ಲಿ ದಕ್ಷಿಣದ ರಾಜ್ಯಗಳೇ ಹೆಚ್ಚಾಗಿವೆ. ಈ ಪೈಕಿ ತಮಿಳುನಾಡು ಅಗ್ರಸ್ಥಾನದಲ್ಲಿದೆ.

ಬಿಜೆಪಿ ಆಡಳಿತ ತೃಪ್ತಿದಾಯವಾಗಿಲ್ಲ ಎಂದ ರಾಜ್ಯಗಳು

ಬಿಜೆಪಿ ಆಡಳಿತ ತೃಪ್ತಿದಾಯವಾಗಿಲ್ಲ ಎಂದ ರಾಜ್ಯಗಳು

ರಾಜ್ಯ ಶೇಕಡಾವಾರು ಮಾರ್ಕ್ಸ್ (ಸಿ-ವೋಟರ್ ಸಮೀಕ್ಷೆ)

ತಮಿಳುನಾಡು 32.15%

ಕೇರಳ 32.89%

ಜಮ್ಮು-ಕಾಶ್ಮೀರ 50.23%

ಹರಿಯಾಣ 51.25%

ಗೋವಾ 52.54%

ಉತ್ತರಾಖಂಡ್ 53.53%

ಬಿಹಾರ 58.48%

ದೆಹಲಿ 60.35%

ಉತ್ತರ ಪ್ರದೇಶ 60.68%

ಪಶ್ಚಿಮ ಬಂಗಾಳ 64.06%

English summary
Narendra Modi still Leading in most popular PM race; C Voter Survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X