• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಕಿಯುಂಡೆಯಂತಹ ಕಾರ್ಮಿಕ ನಾಯಕ: ಜಾರ್ಜ್ ಅವರನ್ನು ನೆನೆದ ಮೋದಿ

|

ನವದೆಹಲಿ, ಜನವರಿ 29: ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲಿ ರಕ್ಷಣಾ ಸಚಿವ, ವಿ.ಪಿ. ಸಿಂಗ್ ಸರ್ಕಾರದ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಎಲ್ಲೆಡೆ ಶೋಕ ವ್ಯಕ್ತವಾಗಿದೆ.

ಸುದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಅವರು ಮಂಗಳವಾರ ದೆಹಲಿಯಲ್ಲಿ ನಿಧನರಾದರು.

Breaking News: ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ

ಮಂಗಳೂರು ಮೂಲದವರಾದ ಅವರು ತಮ್ಮ ಧೀಮಂತ ಹೋರಾಟದ ವ್ಯಕ್ತಿತ್ವದಿಂದ ಹೆಸರಾಗಿದ್ದವರು. ಅದರಲ್ಲಿಯೂ ಕಾರ್ಮಿಕ ಚಳವಳಿಯ ಹೋರಾಟಗಳಲ್ಲಿ ಜಾರ್ಜ್ ಮುಂಚೂಣಿಯಲ್ಲಿದ್ದರು.

ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜಾರ್ಜ್ ಅವರ ಸೇವೆಯನ್ನು ಸ್ಮರಿಸಿ ಮೋದಿ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ನ್ಯಾಯದ ಪರ ಹೋರಾಟಗಾರನಾಗಿ, ತುರ್ತು ಪರಿಸ್ಥಿತಿಗೆ ಬೆದರದೆ ಎದೆಗೊಟ್ಟ ಧೈರ್ಯಶಾಲಿಯಾಗಿ ಅವರನ್ನು ಮೋದಿ ಸ್ಮರಿಸಿದ್ದಾರೆ.

ಪರಿಣಾಮಕಾರಿ ಧ್ವನಿಯಾಗಿದ್ದರು

ಭಾರತದ ರಾಜಕೀಯ ನಾಯಕತ್ವದ ಅತ್ಯುತ್ತಮ ಜವಾಬ್ದಾರಿಯನ್ನು ಜಾರ್ಜ್ ಸಾಹೇಬರು ಪ್ರತಿನಿಧಿಸಿದ್ದರು. ಪ್ರಾಮಾಣಿಕ ಹಾಗೂ ಭಯರಹಿತ, ನೇರ ಮತ್ತು ದೂರದೃಷ್ಟಿಯ ಅವರು ನಮ್ಮ ದೇಶಕ್ಕೆ ಮೌಲ್ಯಯುತ ಕಾಣಿಕೆಗಳನ್ನು ನೀಡಿದ್ದಾರೆ. ಬಡವರ ಪರಿಣಾಮಕಾರಿ ಧ್ವನಿಯಾಗಿದ್ದರು ಎಂದು ಮೋದಿ ನೆನಪಿಸಿಕೊಂಡಿದ್ದಾರೆ.

ಬೆಂಕಿಯ ಉಂಡೆಯಂತಹ ನಾಯಕ

ಜಾರ್ಜ್ ಫರ್ನಾಂಡಿಸ್ ಅವರ ಹೆಸರು ಬಂದೊಡನೆ ನಮಗೆ ನೆನಪಾಗುವುದು ನ್ಯಾಯಕ್ಕಾಗಿ ಹೋರಾಡಿದ ಬೆಂಕಿಯ ಉಂಡೆಯಂತಹ ಕಾರ್ಮಿಕ ನಾಯಕ. ದೃಷ್ಟಿಕೋನವುಳ್ಳ ರೈಲ್ವೆ ಸಚಿವ ಮತ್ತು ಭಾರತವನ್ನು ಸುರಕ್ಷಿತ ಮತ್ತು ಪ್ರಬಲಗೊಳಿಸಿದ ಮಹಾನ್ ರಕ್ಷಣಾ ಸಚಿವ ಎಂದು ಮತ್ತೊಂದು ಟ್ವೀಟ್‌ನಲ್ಲಿ ಶ್ಲಾಘಿಸಿದ್ದಾರೆ.

ಸಿದ್ಧಾಂತಗಳನ್ನು ಬದಲಿಸಲಿಲ್ಲ

ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಜಾರ್ಜ್ ಸಾಹೇಬರು ಎಂದಿಗೂ ತಮ್ಮ ರಾಜಕೀಯ ಸಿದ್ಧಾಂತಗಳನ್ನು ಬದಲಿಸಿದವರಲ್ಲ. ಅವರು ತುರ್ತು ಪರಿಸ್ಥಿತಿಗೆ ತೀಕ್ಷ್ಣವಾಗಿ ಪ್ರತಿರೋಧ ನೀಡಿದವರು. ಅವರ ಸರಳತೆ ಮತ್ತು ಮಾನವೀಯ ಗುಣ ಎಂದಿಗೂ ಅನುಕರಣೀಯ ಎಂದು ಮೋದಿ ಕೊಂಡಾಡಿದ್ದಾರೆ.

ಸಮಾಜವಾದಿ ಚಳವಳಿಯ ನಾಯಕ

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಭಾರತದ ಸಮಾಜವಾದಿ ಚಳವಳಿಯ ಅಗ್ರಮಾನ್ಯ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಬಡವರು ಮತ್ತು ಕೆಳವರ್ಗದ ಜನರ ಏಳಿಗೆ ಹಾಗೂ ಕಲ್ಯಾಣಕ್ಕಾಗಿ ಅವರು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಸಚಿವ ರಾಜನಾಥ್ ಸಿಂಗ್ ಸ್ಮರಿಸಿದ್ದಾರೆ.

English summary
Prime Minister Narendra Modi expressed his condolence on the death of former Union Minister George Fernandes in series of tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X