ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದ 5 ದಿನ ಕಾಡಿನಲ್ಲಿರುತ್ತಿದ್ದೆ: ಸಂದರ್ಶನದಲ್ಲಿ ಪ್ರಧಾನಿ ಹೇಳಿದ ಹೊಸ ಸಂಗತಿ!

|
Google Oneindia Kannada News

Recommended Video

ನಿಮಗೆ ಅಚ್ಚರಿಯಾಗುವಂತಹ ಸಂಗತಿಗಳನ್ನ ಬಿಚ್ಚಿಟ್ಟಿದ್ದಾರೆ ನರೇಂದ್ರ ಮೋದಿ | Oneindia Kannada

ನವದೆಹಲಿ, ಡಿಸೆಂಬರ್ 23: "ದೀಪಾವಳಿಯ ಸಮಯದಲ್ಲಿ ಐದು ದಿನ ನರೇಂದ್ರ ಮೋದಿ ಅವರು ಕಾಡಿಗೆ ತೆರಳಿ, ಹೊರಜಗತ್ತಿನ ಯಾವುದೇ ಸಂಪರ್ಕವಿಲ್ಲದೆ ಕಳೆಯುತ್ತಿದ್ದರು!" ಹಾಗೆಂದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

'ಹ್ಯುಮನ್ಸ್ ಬಾಂಬೆ' ಎಂದ ಪ್ರಸಿದ್ಧ ಫೇಸ್ ಬುಕ್ ಪೇಜ್ ಮೋದಿ ಅವರ ಸಂದರ್ಶನ ಮಾಡಿದ್ದು, ಅದರ ಕೆಲವು ಭಾಗಗಳನ್ನು ಬಿಡುಗಡೆ ಮಾಡಿದೆ. ಈ ಸಂದರ್ಶನದಲ್ಲಿ ಪ್ರಧಾನಿಯವರು ತಮ್ಮ ಬದುಕಿನ ಹಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಟೀ ವ್ಯಾಪಾರಿಯಾಗಿ ಬಾಲ್ಯ ಕಳೆದಿದ್ದು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದು, ಪ್ರಚಾರಕರಾಗಿದ್ದು, ಹಿಮಾಲಯದಲ್ಲಿ ಕಾಲ ಕಳೆದಿದ್ದು... ಇತ್ಯಾದಿ ಅನುಭವಗಳನ್ನು ಅವರು ಹಂಚಿಕೊಂಡಿದ್ದಾರೆ.

ಮೋದಿ ಎಂದೂ ಟೀ ಮಾರಿಲ್ಲ, ಅದು ಚುನಾವಣೆ ಗಿಮಿಕ್ ಅಷ್ಟೆ: ತೊಗಾಡಿಯಾ ಮೋದಿ ಎಂದೂ ಟೀ ಮಾರಿಲ್ಲ, ಅದು ಚುನಾವಣೆ ಗಿಮಿಕ್ ಅಷ್ಟೆ: ತೊಗಾಡಿಯಾ

ಹಿಮಾಲಯದಲ್ಲಿ ಕೆಲಕಾಲ ಕಳೆಯುತ್ತಿದ್ದಂತೆಯೇ ಸೇವೆಗೇ ನಮ್ಮ ಬದುಕನ್ನು ಮುಡಿಪಾಗಿಡಬೇಕೆಂಬ ಇಚ್ಛೆ ದೃಢವಾಯಿತು ಎಂದು ಮೋದಿ ಹೇಳಿಕೊಂಡಿದ್ದಾರೆ. ಸಂದರ್ಶನದಲ್ಲಿ ಮೋದಿ ಹಂಚಿಕೊಂಡ ಬದುಕಿನ ಅನುಭವಗಳ ಪ್ರಮುಖ ಅಂಶಗಳು ಇಲ್ಲಿವೆ...

ದೀಪಾವಳಿ ಸಮಯದಲ್ಲಿ ಅರಣ್ಯವಾಸ!

ದೀಪಾವಳಿ ಸಮಯದಲ್ಲಿ ಅರಣ್ಯವಾಸ!

"ನಾವು ದೀಪಾವಳಿಯ ಸಮಯದಲ್ಲಿ ಐದು ದಿನಗಳ ಕಾಲ ಕಾಡಿಗೆ ತೆರಳುತ್ತಿದ್ದೆ. ರೇಡಿಯೋ, ಪತ್ರಿಕೆ, ಟಿವಿ, ಅಂತರ್ಜಾಲ ಯಾವುದನ್ನೂ ಬಳಸದೆ, ಯಾವ ಜನರ ಸಂಪರ್ಕವೂ ಇಲ್ಲದೆ ಐದು ದಿನ ಒಂಟಿಯಾಗಿ ಇರುತ್ತಿದ್ದೆ. ಐದು ದಿನಕ್ಕಾಗುವಷ್ಟು ಆಹಾರ ಹೊಂದಿಸಿಕೊಂಡು ಹೋಗುತ್ತಿದ್ದೆ. ಈಗ ಒಟಿಯಾಗಿ, ಯಾರ ಸಂಪರ್ಕಕ್ಕೂ ಬಾರದಂತೆ ಇರುವಾಗ ನನಗೆ ನನ್ನ ಬದುಕನ್ನೇ ಅವಲೋಕಿಸುವುದಕ್ಕೆ, ನನ್ನ ಪ್ರತಿಬಿಂಬವನ್ನು ಕಾಣುವುದಕ್ಕೆ ಸಹಾಯವಾಗುತ್ತಿತ್ತು" -ನರೇಂದ್ರ ಮೋದಿ, ಪ್ರಧಾನಿ

ಮೋದಿಯನ್ನು ಇಳಿಸುವುದೇ ವಿರೋಧಿಗಳ ಅಜೆಂಡಾ : ಆರ್‌ಎಸ್‌ಪಿ ವ್ಯಂಗ್ಯಮೋದಿಯನ್ನು ಇಳಿಸುವುದೇ ವಿರೋಧಿಗಳ ಅಜೆಂಡಾ : ಆರ್‌ಎಸ್‌ಪಿ ವ್ಯಂಗ್ಯ

ಹಿಮಾಲಯದಿಂದ ಬಂದು ಟೀ ಮಾರಿದೆ!

ಹಿಮಾಲಯದಿಂದ ಬಂದು ಟೀ ಮಾರಿದೆ!

ನಾನು ಹಿಮಾಲಯದಲ್ಲಿ ಕೆಲಕಾಲ ಇದ್ದೆ. ಆ ಪರ್ವತಗಳ ಸೆಳೆತ ನನ್ನಲ್ಲಿ ಸ್ವಾರ್ಥವನ್ನು ಬದಿಗೊತ್ತಿ, ಸೇವೆಗಾಗಿಯೇ ಬದುಕನ್ನು ಮುಡಿಪಾಗಿಡುವ ಉತ್ಕಟ ಬಯಕೆಯನ್ನು ಹುಟ್ಟಿಸಿತ್ತು. ಅಲ್ಲಿಂದ ವಾಪಸ್ಸಾಗುತ್ತಿದ್ದಂತೆಯೇ ಸೇವೆಯ ಉದ್ದೇಶವನ್ನಿಟ್ಟುಕೊಂಡು ಅಹ್ಮದಾಬಾದಿಗೆ ಬಂದೆ. ಆದರೆ ಬದುಕಿನ ಅನಿವಾರ್ಯತೆಯಿಂದಾಗಿ ಟೀ ಮಾಡುವ ಕೆಲಸಕ್ಕೆ ತೊಡಗಿದೆ. ನಮ್ಮ ಚಿಕ್ಕಪ್ಪ ಟೀ ವ್ಯಾಪಾರಿಯಾಗಿದ್ದರು. ಅವರೊಂದಿಗೆ ನಾನೂ ಕೈಜೋಡಿಸಿದೆ- ನರೇಂದ್ರ ಮೋದಿ, ಪ್ರಧಾನಿ

ವೈರಲ್ ವಿಡಿಯೋ: ಅಹ್ಮದಾಬಾದಿನಲ್ಲಿ ಶಾಪಿಂಗ್ ಮಾಡಿದ ಪ್ರಧಾನಿ ಮೋದಿ!ವೈರಲ್ ವಿಡಿಯೋ: ಅಹ್ಮದಾಬಾದಿನಲ್ಲಿ ಶಾಪಿಂಗ್ ಮಾಡಿದ ಪ್ರಧಾನಿ ಮೋದಿ!

ಆರೆಸ್ಸೆಸ್ ಶಾಖೆಯಲ್ಲಿ ಪಾತ್ರೆಯನ್ನೂ ತೊಳೆಯುತ್ತಿದ್ದೆ!

ಆರೆಸ್ಸೆಸ್ ಶಾಖೆಯಲ್ಲಿ ಪಾತ್ರೆಯನ್ನೂ ತೊಳೆಯುತ್ತಿದ್ದೆ!

ನಂತರ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣಾವಧಿ ಪ್ರಚಾರಕನಾದೆ. ಆ ಸಮಯದಲ್ಲಿ ನನಗೆ ಬೇರೆ ಬೇರೆ ಕ್ಷೇತ್ರದ, ಮನೋಭಾವದ ಜನರೊಂದಿಗೆ ಮಾತುಕತೆ ನಡೆಸುವ ಸೌಭಾಗ್ಯ ಒದಗಿಬಂತು. ಆರೆಸ್ಸೆಸ್ ಶಾಖೆಗಳಲ್ಲಿ ನಾವು ಎಲ್ಲರೂ ಸೇರಿ ಕಚೇರಿಯನ್ನು ಸ್ವಚ್ಛಗೊಳಿಸುತ್ತಿದ್ದೇವು, ಆಹಾರ ತಯಾರಿಸುತ್ತಿದ್ದೆವು, ಪಾತ್ರಯನ್ನೂ ತೊಳೆಯುತ್ತಿದ್ದೆವು. ಸರಳತೆ ಮತ್ತು ಬದುಕಿನ ಪಾಠವನ್ನು ಕಲಿಸಿದ್ದು ಆರೆಸ್ಸೆಸ್- ನರೇಂದ್ರ ಮೋದಿ, ಪ್ರಧಾನಿ

ನಿಮ್ಮ ಅಂತರಂಗವನ್ನು ಅರಿಯಲು ಸಮಯ ನೀಡಿ

ನಿಮ್ಮ ಅಂತರಂಗವನ್ನು ಅರಿಯಲು ಸಮಯ ನೀಡಿ

ಪ್ರತಿಯೊಬ್ಬರೂ ಏಕಾಂತದಲ್ಲಿ ತಮಗೆ ತಾವೇ ಒಂದಷ್ಟು ಸಮಯ ನೀಡಬೇಕು. ಮನಸ್ಸನ್ನು ಮಥಿಸಬೇಕು. ನಮ್ಮನ್ನೇ ನಾವು ಅವಲೋಕಿಸಿಕೊಳ್ಳಬೇಕು, ನಮ್ಮನ್ನೇ ನಾವು ಭೇಟಿಯಾಗಬೇಕು. ಆಗ ನಮ್ಮ ಅಂತರಂಗವನ್ನು ನಾವು ಅರಿಯಲು ಸಾಧ್ಯ. ಇಂದಿನ ಆಧುನಿಕ ಬದುಕಿನ ಅವಸರಗಳ ನಡುವೆ ಯುವಕರು ತಮ್ಮನ್ನರಿಯುವಲ್ಲಿಯೂ ಸಮಯ ನೀಡಬೇಕು- ನರೇಂದ್ರ ಮೋದಿ, ಪ್ರಧಾನಿ

English summary
Prime Minister Narendra Modi has said in an interview that would go to jungle for a five-day to rest during Diwali holidays every year to reflect on his life
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X