ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್‌ನಲ್ಲಿ ಮೋದಿ ಭಾಷಣ: ಅಭಿವೃದ್ಧಿ ಮಂತ್ರದ ಜೊತೆ ಹಲವು ವಿಷಯ

|
Google Oneindia Kannada News

ನವದೆಹಲಿ, ಜೂನ್ 25: ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸಿ ಮಾತನಾಡಿದ ನರೇಂದ್ರ ಮೋದಿ, 2014 ರಲ್ಲಿ ಹಳೆಯ ಸರ್ಕಾರದಿಂದ ಮುಕ್ತಿ ಪಡೆಯಲು ನಮ್ಮನ್ನು ಗೆಲ್ಲಿಸಿದರು, ಈ ಬಾರಿ ನಮ್ಮನ್ನು ಅಳೆದು, ತೂಗಿ, ಪರೀಕ್ಷಿಸಿದ ನಂತರ ಮತ್ತೆ ನಮಗೆ ಅಧಿಕಾರ ನೀಡಿದ್ದಾರೆ ಎಂದು ಹೇಳಿದರು.

ಈ ಹಿಂದಿನ ಸರ್ಕಾರಗಳು ಯಾವ ಕೆಲಸವನ್ನೂ ಮಾಡಲಿಲ್ಲ ಎಂದು ನಾವು ಒಪ್ಪುವುದಿಲ್ಲ, ಎಲ್ಲ ಸರ್ಕಾರದ ಅವಧಿಯಲ್ಲೂ ಕೆಲಸಗಳಾಗಿವೆ, ಇನ್ನು ಮುಂದೆ ಪದೇ-ಪದೇ ಕಾಂಗ್ರೆಸ್‌ ಅವಧಿಯ ಸಾಧನೆಗಳನ್ನು ಸಂಸತ್‌ನಲ್ಲಿ ಹೇಳಬೇಡಿ ಎಂದು ಕಾಂಗ್ರೆಸ್ ಸಂಸದರಿಗೆ ಮನವಿ ಮಾಡಿದರು.

ಮೋದಿ ಬಳಸುವ ಫೋನ್ ಯಾವುದು? ಐಫೋನ್ ಮೇಲೆ ಸಚಿವರಿಗೆ ಮೋಹ! ಮೋದಿ ಬಳಸುವ ಫೋನ್ ಯಾವುದು? ಐಫೋನ್ ಮೇಲೆ ಸಚಿವರಿಗೆ ಮೋಹ!

ಕಾಂಗ್ರೆಸ್‌ನ ಸಂಸದರು ನಿನ್ನೆ ಕಾಂಗ್ರೆಸ್‌ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿದರು ಅಲ್ಲದೆ, ಇಂದಿರಾ ಗಾಂಧಿ ಅವರ ಅವಧಿಯ ಸಾಧನೆಗಳನ್ನು ಸಂಸತ್‌ನಲ್ಲಿ ಹೇಳಿದರು. ಇಂದು ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ಅವರು ಇಂದು ಜೂನ್ 25, ಇಂದೇ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರಿದರು ಎಂದು ಹೇಳಿದರು.

ಜವಾಹಾರ್ ಲಾಲ್, ಇಂದಿರಾ ಗಾಂಧಿ ಅವರುಗಳು ದೇಶಕ್ಕಾಗಿ ಜೀವನ ಸವೆಸಿದ್ದಾರೆ ಆದರೆ ಅವರ ಹೆಸರು ಸದನದಲ್ಲಿ ಕೇಳುವುದಿಲ್ಲ ಎಂದು ನಿನ್ನೆ ಕಾಂಗ್ರೆಸ್ ಸಂಸದರು ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ಮೋದಿ, ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಯುಪಿಎ ಆಡಳಿತದ ಹತ್ತು ವರ್ಷದಲ್ಲಿ ಒಮ್ಮೆಯೂ ಹೇಳಿಲ್ಲ, ಪಿ.ನರಸಿಂಹರಾವ್ ಅವರ ಹೆಸರು ಹೇಳಿಲ್ಲ, ಕನಿಷ್ಟ ಮನಮೋಹನ್ ಸಿಂಗ್ ಅವರ ಹೆಸರನ್ನೂ ನೀವು ಹೇಳಿಲ್ಲ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

'ಕಾಂಗ್ರೆಸ್‌ ಎತ್ತರಕ್ಕೆ ಏರಿದೆ ಅದಕ್ಕೆ ಜನರು ಕಾಣುತ್ತಿಲ್ಲ'

'ಕಾಂಗ್ರೆಸ್‌ ಎತ್ತರಕ್ಕೆ ಏರಿದೆ ಅದಕ್ಕೆ ಜನರು ಕಾಣುತ್ತಿಲ್ಲ'

ದೇಶ ಸೇವೆಯಲ್ಲಿ ಕಾಂಗ್ರೆಸ್‌ ಎತ್ತರದಲ್ಲಿದೆ ಎಂದು ನಿನ್ನೆ ಕಾಂಗ್ರೆಸ್ ಸಂಸದರು ಹೇಳಿದ್ದರು, ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ಅವರು, ನೀವು ಎತ್ತರಕ್ಕೇರಿರುವುದಕ್ಕೆ ಅಭಿನಂದನೆಗಳು, ನೀವು ಎಷ್ಟು ಎತ್ತರಕ್ಕೆ ಏರಿದ್ದೀರೆಂದರೆ ನಿಮಗೆ ನೆಲದಲ್ಲಿರುವವರು ಕಾಣುತ್ತಿಲ್ಲ, ನೀವು ನೆಲದೊಂದಿಗೆ ಸಂಬಂಧವನ್ನೇ ಕಡಿದುಕೊಂಡಿದ್ದೀರಿ, ನೆಲದ ಮೇಲಿರುವವರನ್ನು ತುಚ್ಛವಾಗಿ ಕಾಣುತ್ತಿದ್ದೀರಿ ಎಂದು ಮೋದಿ ಹೇಳಿದರು.

'ಗಾಂಧಿ ಕುಟುಂಬದ ಹೊರಗಿನರಿಗೆ ಭಾರತ ರತ್ನ ಸಿಗಲಿಲ್ಲ'

'ಗಾಂಧಿ ಕುಟುಂಬದ ಹೊರಗಿನರಿಗೆ ಭಾರತ ರತ್ನ ಸಿಗಲಿಲ್ಲ'

ಕಾಂಗ್ರೆಸ್‌ ಪಕ್ಷದ ನೆಹರೂ ಕುಟುಂಬದ ಹೊರಗಿನವರಿಗೆ ಭಾರತ ರತ್ನ ಸಿಗಲೇ ಇಲ್ಲ, ಆದರೆ ನಾವು ಹಾಗೆ ಮಾಡಲಿಲ್ಲ, ಪ್ರಣವ್ ಮುಖರ್ಜಿ ಅವರು ಜೀವನಪರ್ಯಂತ ಒಂದು ಪಕ್ಷವಾಗಿಯೇ ಇದ್ದರು, ಆದರೆ ನಾವು ಅವರ ಸೇವೆಯನ್ನು ಮಾತ್ರವೇ ಪರಿಗಣಿಸಿ ನಾವು ಅವರಿಗೆ ಭಾರತ ರತ್ನ ನೀಡಿದೆವು, ಇದು ನಮ್ಮ ಯೋಚನೆಯ ರೀತಿ ಎಂದು ಮೋದಿ ಹೇಳಿದರು.

ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನವ ವಿವಾಹಿತೆ!ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನವ ವಿವಾಹಿತೆ!

'ಕಾಂಗ್ರೆಸ್‌ಗೆ ಸಿಕ್ಕಿದ್ದ ಅವಕಾಶಗಳನ್ನು ಅದು ಕಳೆದುಕೊಂಡಿತು'

'ಕಾಂಗ್ರೆಸ್‌ಗೆ ಸಿಕ್ಕಿದ್ದ ಅವಕಾಶಗಳನ್ನು ಅದು ಕಳೆದುಕೊಂಡಿತು'

ಕಾಂಗ್ರೆಸ್‌ಗೆ ಸಾಕಷ್ಟು ಅವಕಾಶಗಳಿದ್ದವು ಆದರೆ ಅವರು ಕೆಲಸ ಮಾಡಲಿಲ್ಲ, 1950 ರಲ್ಲಿಯೇ ಏಕರೀತಿಯ ಕಾನೂನಿನ ಅವಕಾಶ ಇತ್ತು ಆದರೆ ಹಿಂದೂ ಕೋಡ್ ಮಾಡಿ ಕೈತೊಳೆದುಕೊಂಡಿತು. ಆ ನಂತರವೂ ಹಲವು ಭಾರಿ ಅವಕಾಶ ಸಿಕ್ಕಿತ್ತು ಆಗಲೂ ಮಾಡಲಿಲ್ಲ, ಈಗ ನಾವು ಬಿಲ್‌ ತೆಗೆದುಕೊಂಡು ಬಂದಿದ್ದೇವೆ, ಈಗ ಬಿಲ್‌ಗೆ ಒಪ್ಪಿಗೆ ಸೂಚಿಸಲಿ ಎಂದು ಮೋದಿ ಕಾಂಗ್ರೆಸ್‌ಗೆ ತಿವಿದರು.

'ದೇಶದ ಅಭಿವೃದ್ಧಿಯ ಹಾದಿಯ ಮೇಲೆ ಇದ್ದೇವೆ'

'ದೇಶದ ಅಭಿವೃದ್ಧಿಯ ಹಾದಿಯ ಮೇಲೆ ಇದ್ದೇವೆ'

ದೇಶದ ಅಭಿವೃದ್ಧಿಗೆ ನಾವು ಈಗಾಗಲೇ ನಮ್ಮ ದಾರಿಯನ್ನು ಕಂಡುಕೊಂಡಿದ್ದೇವೆ, ಅದೇ ಹಾದಿಯನ್ನು ಸಾಗುತ್ತೇವೆ, 'ನೋ ಡೈಲ್ಯೂಟ್, ನೋ ಡೈವರ್ಶನ್‌' ಎಂದ ಮೋದಿ, ಬಡವರ ಕಲ್ಯಾಣದ ಜೊತೆ ಜೊತೆಗೆ ಆಧುನಿಕ ಭಾರತವನ್ನು ಮುನ್ನಡೆಸಬೇಕಿದೆ, ವಿಪಕ್ಷಗಳೂ ತಮ್ಮೊಂದಿಗೆ ಕೈ ಜೋಡಿಸಲಿ ಎಂದು ಮೋದಿ ಹೇಳಿದರು.

ಅಭಿನಂದನ್ ಮೀಸೆಯನ್ನು 'ರಾಷ್ಟ್ರೀಯ ಮೀಸೆ'ಯನ್ನಾಗಿ ಘೋಷಿಸಿ: ಚೌಧರಿಅಭಿನಂದನ್ ಮೀಸೆಯನ್ನು 'ರಾಷ್ಟ್ರೀಯ ಮೀಸೆ'ಯನ್ನಾಗಿ ಘೋಷಿಸಿ: ಚೌಧರಿ

ನೆಹರೂ ಅವರ ಕನಸು ನನಸು ಮಾಡೋಣ: ಮೋದಿ

ನೆಹರೂ ಅವರ ಕನಸು ನನಸು ಮಾಡೋಣ: ಮೋದಿ

ವಿಶೇಷವಾಗಿ ನೆಹರೂ ಅವರನ್ನು ಹೊಗಳಿದ ಮೋದಿ, ಪಂಡಿತ್ ನೆಹರೂ ಅವರು 1951 ರಲ್ಲಿ ನೆಹರು ಅವರು ಕಂಡಿದ್ದ ಕನಸನ್ನು ನಾವು ನನಸು ಮಾಡಬೇಕಿದೆ ಎಂದರು. ನೆಹರು ಅವರು ಬರೆದಿದ್ದ ಎಲ್ಲರೂ ಒಟ್ಟಾಗಿ ಭಾರತದ ನಿರ್ಮಾಣ ಮಾಡೋಣ ಎಂಬ ವಾಕ್ಯವನ್ನು ಸಂಸತ್‌ನಲ್ಲಿ ಓದಿದ ಮೋದಿ ಅವರು, ಬನ್ನಿ ಎಲ್ಲರೂ ಸೇರಿ ದೇಶವನ್ನು ಬದಲಾಯಿಸೋಣ ಎಂದು ಹೇಳಿದರು.

ಕೊನೆಗೂ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಗೆ ಅಂಗೀಕಾರಕೊನೆಗೂ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಗೆ ಅಂಗೀಕಾರ

English summary
Prime minister Narendra Modi reply motion of thanks on the president's address in parliament. He said Congress got many opportunity to do good but it does not.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X