ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಫೇಲ್ ಲಗ್ನಪತ್ರಿಕೆ'ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ

|
Google Oneindia Kannada News

ನವದೆಹಲಿ, ಜನವರಿ 22: ರಫೇಲ್ ಒಪ್ಪಂದದ ಥೀಮ್ ಆಧರಿಸಿ ಗುಜರಾತ್‌ನ ಜೋಡಿಯೊಂದು ಸಿದ್ಧಪಡಿಸಿದ ಮದುವೆ ಆಹ್ವಾನ ಪತ್ರಿಕೆಯ ಚಿತ್ರ ವೈರಲ್ ಆಗಿತ್ತು. ಆ ಲಗ್ನಪತ್ರಿಕೆ ಪ್ರಧಾನಿ ನರೇಂದ್ರ ಮೋದಿ ಕೈ ಸೇರಿದ್ದು, ಅವರ ಮೆಚ್ಚುಗೆಗೆ ಪಾತ್ರವಾಗಿದೆ.

ಸೂರತ್ ಮೂಲದ ಯುವರಾಜ್ ಪೊಖರ್ನಾ ಮತ್ತು ಸಾಕ್ಷಿ ಅಗರವಾಲ್ ಜೋಡಿಗೆ ಪತ್ರ ಬರೆದಿರುವ ಮೋದಿ, ಆಹ್ವಾನ ಪತ್ರಿಕೆಯಲ್ಲಿರುವ ಅಂಶಗಳನ್ನು ಜಾಣ್ಮೆಯಿಂದ ಬರೆಯಲಾಗಿದೆ. ಈ ಪತ್ರಿಕೆ ದೇಶಕ್ಕಾಗಿ ಇನ್ನಷ್ಟು ಕಠಿಣ ಶ್ರಮ ವಹಿಸಿ ಕೆಲಸ ಮಾಡುವಂತೆ ಪ್ರೇರಣೆ ನೀಡಿದೆ ಎಂದು ಹೇಳಿದ್ದಾರೆ.

ಮದುವೆ ಆಮಂತ್ರಣದಲ್ಲಿ ರಫೇಲ್ ಡೀಲ್ ಲೆಕ್ಕಾಚಾರ! ಮದುವೆ ಆಮಂತ್ರಣದಲ್ಲಿ ರಫೇಲ್ ಡೀಲ್ ಲೆಕ್ಕಾಚಾರ!

ಈ ಜೋಡಿಯ ಮದುವೆ ಇಂದು (ಜನವರಿ 22) ನಡೆಯಿತು.

narendra modi praised rafale deal content wedding card from surat based couple

'ಯುವರಾಜ್ ಮತ್ತು ಸಾಕ್ಷಿ ಅವರ ಮದುವೆಯ ಸಂಭ್ರಮದ ಸಮಾರಂಭದಲ್ಲಿ ಪೊಖರ್ನಾ ಕುಟುಂಬಕ್ಕೆ ಹೃತ್ಪೂರ್ವಕ ಶುಭಾಶಯಗಳು. ಅತಿಥಿಗಳಿಗೆ ಕಳುಹಿಸಿದ ವಿಶಿಷ್ಟ ಲಗ್ನಪತ್ರಿಕೆಯನ್ನು ಗಮನಿಸಿದ್ದೆ. ದೇಶದ ಕುರಿತಾದ ನಿಮ್ಮ ಕಾಳಜಿ ಮತ್ತು ಪ್ರೀತಿಯನ್ನು ಅದರಲ್ಲಿನ ಜಾಣ್ಮೆಯ ಅಂಶಗಳು ಪ್ರತಿಫಲಿಸುತ್ತವೆ. ಇದು ನಮ್ಮ ದೇಶಕ್ಕಾಗಿ ಇನ್ನಷ್ಟು ಶ್ರಮವಹಿಸಿ ದುಡಿಯಲು ನನಗೆ ಸ್ಫೂರ್ತಿ ನೀಡಿದೆ' ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.

ವೈರಲ್ ಆಯ್ತು ಹಿಂದೂ ಯುವತಿ‌, ಮುಸ್ಲಿಂ ಯುವಕನ ಪ್ರೇಮ ವಿವಾಹದ ಲಗ್ನ ಪತ್ರಿಕೆ ವೈರಲ್ ಆಯ್ತು ಹಿಂದೂ ಯುವತಿ‌, ಮುಸ್ಲಿಂ ಯುವಕನ ಪ್ರೇಮ ವಿವಾಹದ ಲಗ್ನ ಪತ್ರಿಕೆ

'ಶಾಂತಿ ಕಾಪಾಡಿ ನಮೋರನ್ನು ನಂಬಿ' ಎಂಬ ಶೀರ್ಷಿಕೆಯಡಿ ಈ ಜೋಡಿ ಆಹ್ವಾನ ಪತ್ರಿಕೆಯಲ್ಲಿ ರಫೇಲ್ ಒಪ್ಪಂದದ ಬಗ್ಗೆ ಕೆಲವು ವಾಸ್ತವಗಳು ಎಂದು ಒಂಬತ್ತು ಅಂಶಗಳನ್ನು ಪಟ್ಟಿಮಾಡಿ ನೀಡಿತ್ತು.

narendra modi praised rafale deal content wedding card from surat based couple

ಅಲ್ಲದೆ, ಮದುವೆಗೆ ಬರುವ ಅತಿಥಿಗಳಿಂದ ನಿರೀಕ್ಷಿಸುವ ಏಕೈಕ ಉಡುಗೊರೆಯೆಂದರೆ ಮುಂದಿನ ಚುನಾವಣೆಯಲ್ಲಿ ಮೋದಿಗೆ ಮತಚಲಾಯಿಸಿ ಮತ್ತು ಪಕ್ಷದ ಆಪ್ ಮೂಲಕ ಪಕ್ಷಕ್ಕೆ ಆರ್ಥಿಕ ದೇಣಿಗೆ ನೀಡಿ ಎಂದು ಮನವಿ ಮಾಡಿದ್ದರು.

ಈ ವೆಡ್ಡಿಂಗ್ ಕಾರ್ಡ್ ದೇಶದಾದ್ಯಂತ ವೈರಲ್ ಆಗಿತ್ತು.

English summary
Prime Minister Narendra Modi write a letter to Surat based couple praising their wedding card designed in Rafale deal theme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X