ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯನ್ನು ಆರಿಸಿ ಇಲ್ಲವೇ ಅರಾಜಕತೆ ಎದುರಿಸಿ: ಅರುಣ್ ಜೇಟ್ಲಿ

|
Google Oneindia Kannada News

Recommended Video

Lok Sabha Elections 2019 : ಮೋದಿಯನ್ನು ಆರಿಸಿ ಇಲ್ಲವೇ ಅರಾಜಕತೆ ಎದುರಿಸಿ: ಅರುಣ್ ಜೇಟ್ಲಿ | Oneindia Kannada

ನವದೆಹಲಿ, ಮಾರ್ಚ್‌ 12: ಮುಂದಿನ ಚುನಾವಣೆಯಲ್ಲಿ ಮತದಾರರ ಮುಂದೆ ಎರಡು ಆಯ್ಕೆಗಳಿವೆ ಮೋದಿ ಅಥವಾ ಅರಾಜಕತೆ ಎಂದು ಅರುಣ್ ಜೇಟ್ಲಿ ಅವರು ಹೇಳಿದ್ದಾರೆ.

ಪ್ರಸಕ್ತ ರಾಜಕಾರಣದ ಬಗ್ಗೆ ಬ್ಲಾಗ್ ಬರೆದಿರುವ ಅವರು, 'ಮಹಾಘಟಬಂಧನ್' ಎಂಬುದು ಪರಸ್ಪರ ಎದುರಾಳಿಗಳೇ ಮಾಡಿಕೊಂಡಿರುವ ಒಕ್ಕೂಟ, ಹಾಗಾಗಿ ಈ ಚುನಾವಣೆ ಮೋದಿ vs ಅರಾಜಕತೆ ಎಂದು ಜೇಟ್ಲಿ ಹೇಳಿದ್ದಾರೆ.

ನ್ಯೂಸ್ ನೇಷನ್ ಸಮೀಕ್ಷೆ: ಎನ್ಡಿಎ ಜನಪ್ರಿಯತೆ ಕುಸಿತ, ಮೋದಿ ಜನಪ್ರಿಯತೆ ಏರಿಕೆ!ನ್ಯೂಸ್ ನೇಷನ್ ಸಮೀಕ್ಷೆ: ಎನ್ಡಿಎ ಜನಪ್ರಿಯತೆ ಕುಸಿತ, ಮೋದಿ ಜನಪ್ರಿಯತೆ ಏರಿಕೆ!

ಮಹಾಘಟಬಂದನ್ ತನ್ನಲ್ಲೇ ತಾನು ಕಿತ್ತಾಡಿಕೊಂಡು ಹಾಳಾಗುತ್ತದೆಯೇ ಹೊರತು ದೇಶವನ್ನು ಅದು ಉಳಿಸಲಾರದು ಎಂದು ಅರುಣ್ ಜೇಟ್ಲಿ ಭವಿಷ್ಯ ನುಡಿದಿದ್ದಾರೆ.

Narendra Modi or chaos choice is clear: Arun Jailtley

ಮಹಾಘಟಬಂದನ್‌ಗೆ ನಾಯಕತ್ವದ ಪ್ರಶ್ನೆ ಎದುರಾಗಲಿದೆ ಆಗ ಅದರೊಳಗಿನ ಭಿನ್ನಮತ ಸ್ಫೋಟಗೊಳ್ಳಲಿದೆ ಎಂದಿರುವ ಜೇಟ್ಲಿ, ರಾಹುಲ್ ಗಾಂಧಿ ಒಬ್ಬರು ಅಪ್ರಬುದ್ಧ ರಾಜಕಾರಣಿ, ಮೋದಿ ಅವರೇ ಪ್ರಸ್ತುತ ಸರಿಯಾದ ರಾಜಕಾರಣಿ ಆಗಿದ್ದಾರೆ ಎಂದು ಜೇಟ್ಲಿ ಹೇಳಿದ್ದಾರೆ.

ರಾಹುಲ್ ಗಾಂಧಿ ಪ್ರಯತ್ನಿಸಿದರು, ಪರೀಕ್ಷಿಸಿದರು ಆದರೆ ಅವರ ಕೈಲಿ ಸಾಧ್ಯವಾಗಲಿಲ್ಲ, ಅವರು ಬಿಟ್ಟುಬಿಡುವುದು ಒಳ್ಳೆಯದು ಎಂದಿರುವ ಜೇಟ್ಲಿ, ರಾಹುಲ್ ಅವರು ವಿಷಯಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಬಹಳ ಹಿಂದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಫೇಲ್ ಆದವರಿಗೆ ಟಾಪರ್ ಮೇಲೆ ಮುನಿಸು ಸಹಜ: ರಾಹುಲ್ ಗೆ ಜೇಟ್ಲಿ ಟಾಂಗ್ ಫೇಲ್ ಆದವರಿಗೆ ಟಾಪರ್ ಮೇಲೆ ಮುನಿಸು ಸಹಜ: ರಾಹುಲ್ ಗೆ ಜೇಟ್ಲಿ ಟಾಂಗ್

ಎನ್‌ಡಿಎನಲ್ಲಿ ನಾಯಕತ್ವದ ಸಮಸ್ಯೆಗಳಿಲ್ಲ, ಎನ್‌ಡಿಯ ಮೋದಿ ಅವರ ಮುಂದಾಳತ್ವದಲ್ಲಿ ಚುನಾವಣೆ ಎದುರಿಸುತ್ತದೆ. ಹಾಗೂ ಅವರ ನಾಯಕತ್ವದ ಮೇಲೆ ದೇಶವೇ ನಂಬಿಕೆ ಇರಿಸಿದೆ ಎಂದು ಜೇಟ್ಲಿ ಹೇಳಿದರು.

English summary
Finance minister Arun Jaitley said that Narendra Modi or chaos choice is clear, Mahagatabandhan is destructive and failure experiment he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X