ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಿಯಂತ್ರಣಕ್ಕೆ 25 ಸಾವಿರ ನೀಡಿದ ಮೋದಿ ತಾಯಿ

|
Google Oneindia Kannada News

ನವದೆಹಲಿ, ಮಾರ್ಚ್ 31: ಕೊರೊನಾ ನಿಯಂತ್ರಣಕ್ಕೆ ದೇಶದ ಅನೇಕರು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಕೂಡ ಸಹಾಯ ಹಸ್ತ ಚಾಚಿದ್ದಾರೆ.

ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹೀರಾಬೆನ್ 25 ಸಾವಿರ ಹಣ ನೀಡಿದ್ದಾರೆ. ತಾವು ಉಳಿತಾಯ ಮಾಡಿದ ಹಣವನ್ನು ಕೊರೊನಾ ತಡೆಗೆ ನೀಡಿದ್ದಾರೆ. ಈ ಮೂಲಕ ತಾವು ಕೂಡ ಕೊರೊನಾ ನಿಯಂತ್ರಣಕ್ಕೆ ಕೈ ಜೋಡಿಸಿದ್ದಾರೆ.

ಕೊರೊನಾ ತಡೆಗೆ 5 ಲಕ್ಷ ಹಣವನ್ನು ದಾನ ಮಾಡಿದ ವೃದ್ದೆಕೊರೊನಾ ತಡೆಗೆ 5 ಲಕ್ಷ ಹಣವನ್ನು ದಾನ ಮಾಡಿದ ವೃದ್ದೆ

ಕೊರೊನಾ ಭೀತಿ ಮತ್ತು ಲಾಕ್ ಡೌನ್ ಪರಿಸ್ಥಿತಿಯನ್ನು ಎದುರಿಸಲು ದೇಶದ ಜನತೆ ದೇಣಿಗೆ ನೀಡಬಹುದು ಎಂದು ಪ್ರಧಾನಿ ಮೋದಿ ತಿಳಿಸಿದ್ದರು. ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿಯನ್ನು ಕೇಂದ್ರ ಸರ್ಕಾರವು ಶನಿವಾರ ರಚಿಸಿತ್ತು.

Narendra Modi Mother Heeraben Donates 25 Thousand

ಕ್ರಿಕೆಟ್ ಆಟಗಾರರು, ಸಿನಿಮಾ ತಾರೆಯರು, ಇನ್ಫೋಸಿಸ್, ರಿಲಯನ್ಸ್, ಟಾಟಾ ಸಂಸ್ಥೆಗಳು ಸೇರಿದಂತೆ ದೇಶದ ಅನೇಕರು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. ಕನ್ನಡ ನಟ ಪುನೀತ್ ರಾಜ್ ಕುಮಾರ್ ಸಹ ಇಂದು 50 ಲಕ್ಷ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಟ್ಟಿದ್ದಾರೆ.

ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ನೀಡಿದ ದೀಪಿಕಾ ದಾಸ್ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ನೀಡಿದ ದೀಪಿಕಾ ದಾಸ್

ಅಂದಹಾಗೆ, ಜಮ್ಮು ಕಾಶ್ಮೀರದಲ್ಲಿ ಖಲೀದಾ ಬೇಗಂ ಎಂಬ 87 ವರ್ಷದ ವೃದ್ದೆಯೊಬ್ಬರು 5 ಲಕ್ಷ ಹಣವನ್ನು ನೀಡಿದ್ದಾರೆ. ಹಜ್ ಯಾತ್ರೆಗೆ ಅಂತ ಕೂಡಿ ಇಟ್ಟ ಹಣವನ್ನು ಕೊರೊನಾ ತಡೆಗೆ ನೀಡಿದ್ದಾರೆ.

English summary
Coronavirus in India: Narendra Modi's mother Heeraben donates 25 thousand to pm relief fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X