ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಕ್ಸ್ ಶೃಂಗಸಭೆ : ಬ್ರೆಜಿಲ್‌ಗೆ ತೆರಳಿದ ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಜು.13 : ಬ್ರೆಜಿಲ್‌ ನಲ್ಲಿ ಜು.14 ಮತ್ತು 15ರಂದು ನಡೆಯುವ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಬ್ರೆಜಿಲ್‌ ಗೆ ತೆರಳಿದರು. ದೇಶದ ಆರ್ಥಿಕತೆ ಮತ್ತು ಭದ್ರತೆ ಕುರಿತಾಗಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ಬ್ರೆಜಿಲ್‌ಗೆ ತೆರಳುವ ಮುನ್ನ ನವದೆಹಲಿಯ ಇಂದಿರಾ ಗಾಂದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮೋದಿ, ಪ್ರಾದೇಶಿಕವಾಗಿ ಭದ್ರತೆಗೆ ಉಂಟಾಗಿರುವ ಧಕ್ಕೆ ಹಾಗೂ ಬಿಕ್ಕಟ್ಟುಗಳನ್ನು ಕುರಿತಂತೆ ಚರ್ಚಿಸುವ ಜೊತೆಗೆ ಶಾಂತಿ ಸ್ಥಾಪನೆ ಹಾಗೂ ಜಾಗತಿಕ ಆರ್ಥಿಕ ಸ್ಥಿರತೆಗಳ ಬಗ್ಗೆಯೂ ಶೃಂಗದಲ್ಲಿ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.

Narendra Modi

ಫಿಫಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸುವಂತೆ ಬ್ರೆಜಿಲ್ ಸರ್ಕಾರ ಪ್ರಧಾನಿ ಮೋದಿಗೆ ಆಹ್ವಾನ ನೀಡಿದೆ. ಆದರೆ, ಮೋದಿ ಅವರು ಫೈನಲ್ ಪಂದ್ಯ ವೀಕ್ಷಿಸುವುದಿಲ್ಲ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್ ಮತ್ತು ಮೋದಿ ಭೇಟಿಯೂ ಫೈನಲ್ ಪಂದ್ಯದ ಕಾರಣದಿಂದಾಗಿ ರದ್ದಾಗಿದೆ. [ಫೀಫಾ ವಿಶ್ವಕಪ್ ಫೈನಲ್: ಮೋದಿಗೆ ಆಹ್ವಾನ]

ತಮ್ಮ ಪ್ರವಾಸದ ವೇಳೆ ನರೇಂದ್ರ ಮೋದಿ ಅವರು, ದಕ್ಷಿಣ ಅಮೆರಿಕ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅರ್ಜೆಂಟೀನಾ, ಬೊಲಿವಿಯಾ, ಚಿಲಿ, ಕೊಲಂಬಿಯಾ, ಈಕ್ವೆಡಾರ್, ಗಯಾನಾ, ಪೆರು, ಉರುಗ್ವೆ ಮತ್ತಿತರ ಲ್ಯಾಟಿನ್ ಅಮೆರಿಕ ಪ್ರದೇಶದ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಭಾನುವಾರ ರಾತ್ರಿ ಬರ್ಲಿನ್‌ ನಲ್ಲಿ ವಾಸ್ತವ್ಯ ಹೂಡಲಿರುವ ಪ್ರಧಾನಿ ಮೋದಿ, ನಂತರ ಅಲ್ಲಿಂದ ಬ್ರೆಜಿಲ್‌ ಈಶಾನ್ಯ ಕರಾವಳಿಯ ನಗರವಾದ ಫೋರ್ಟಲೇಜಾಗೆ ಪ್ರಯಾಣ ಬೆಳೆಸಲಿದ್ದಾರೆ. ಸೋಮವಾರ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಯಾರು ಜೊತೆಗಿದ್ದಾರೆ : ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ವಿತ್ತ ಖಾತೆ ಸಹಾಯಕ ಸಚಿವೆ ನಿರ್ಮಲಾ ಸೀತಾರಾಮನ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಎ.ಕೆ. ದೋವಲ್, ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, ಹಣಕಾಸು ಕಾರ್ಯದರ್ಶಿ ಅರವಿಂದ್ ಮಾಯಾರಾಂ ಮುಂತಾದವರು ತೆರಳಿದ್ದಾರೆ. [ಪಿಟಿಐ ಚಿತ್ರ]

English summary
Prime Minister Narendra Modi heads Sunday to attend the five-nation BRICS summit in Brazil, his first multilateral summit meeting since taking over office May 26, where he would also meet for the first time with the other heads of the bloc which include Brazil Russia, China and South Africa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X