ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದ 'ನಿರ್ಯಾತ್‌' ಪೋರ್ಟಲ್‌ ಬಿಡುಗಡೆಗೊಳಿಸಿದ ಮೋದಿ

|
Google Oneindia Kannada News

ನವದೆಹಲಿ, ಜೂ. 23: ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಯಾತ್‌ ಪೋರ್ಟಲ್ ಅನ್ನು ಬಿಡುಗಡೆಗೊಳಿಸಿದರು. ಇದು ಭಾರತದ ಆಮದು ಮತ್ತು ರಫ್ತು ವಿಶ್ಲೇಷಣೆಯನ್ನು ಮಾಡುತ್ತದೆ. ನಿರ್ಯಾತ್‌ ವ್ಯಾಪಾರದ ವಾರ್ಷಿಕ ವಿಶ್ಲೇಷಣೆಗಾಗಿ ರಾಷ್ಟ್ರೀಯ ಆಮದು- ರಫ್ತು ದಾಖಲೆಯನ್ನು ಎಲ್ಲಾ ಪಾಲುದಾರರಿಗೆ ಪ್ರಮುಖ ನೈಜ- ಸಮಯದ ದತ್ತಾಂಶವನ್ನು ಒದಗಿಸಲು ಸರ್ಕಾರವು ಪ್ರಾರಂಭಿಸಿದೆ ಎಂದು ಪೋರ್ಟಲ್ ಅನ್ನು ಬಿಡುಗಡೆಗೊಳಿಸಿ ಪ್ರಧಾನಿ ಮೋದಿ ಹೇಳಿದರು.

ಕೇಂದ್ರದಿಂದ ಭಾರತದ ವಿದೇಶಿ ವ್ಯಾಪಾರಕ್ಕೆ ಸಂಬಂಧಿಸಿದ ನಿರ್ಣಾಯಕ ಮಾಹಿತಿಯನ್ನು ಸುಲಭವಾಗಿ ಪ್ರವೇಶಿಸಲು ಮಧ್ಯಸ್ಥಗಾರರಿಗೆ ನಿರ್ಯಾತ್‌ ಒಂದು ಪ್ರಮುಖ ವೇದಿಕೆಯಾಗಿದೆ.

ಬ್ರಿಕ್ಸ್ ವೇದಿಕೆ 2022: ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಬ್ರಿಕ್ಸ್ ವೇದಿಕೆ 2022: ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶ

ಆಪ್‌ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿಗದಿತ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಿದಾಗ ತೆರಿಗೆದಾರರನ್ನು ಗೌರವಿಸದಂತಾಗುತ್ತದೆ ಎಂದು ಗುರುವಾರ ವಾಣಿಜ್ಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.

ಸರ್ಕಾರಿ ಯೋಜನೆಗಳು ಸಕಾಲದಲ್ಲಿ ಪೂರ್ಣಗೊಂಡಾಗ ಹಾಗೂ ಯೋಜನೆಗಳು ಗುರಿಯನ್ನು ತಲುಪಿದಾಗ ಅವು ದೇಶದ ತೆರಿಗೆದಾರರಿಗೆ ಗೌರವವನ್ನು ನೀಡುತ್ತವೆಯೇ ಹೊರತು ಬೇರೇನೂ ಅಲ್ಲ. ನವ ಭಾರತದ ಆಶಯಗಳನ್ನು ಪರಿಗಣಿಸಿ ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಯೋಜನೆ ಅಡಿಯಲ್ಲಿ ನಾವು ಈಗ ಆಧುನಿಕ ವೇದಿಕೆಯನ್ನು ಹೊಂದಿದ್ದೇವೆ. ಈ ವಾಣಿಜ್ಯ ಕಟ್ಟಡವು ಅಭಿವೃದ್ಧಿಯ ಎಲ್ಲಾ ಅಂಶಗಳಿಗೆ ಉತ್ತೇಜನ ನೀಡಬೇಕಾಗುತ್ತದೆ ಎಂದು ಪಿಎಂ ಮೋದಿ ಹೇಳಿದರು.

ಬ್ರಿಕ್ಸ್‌ ಸಮ್ಮೇಳನದ ವರ್ಚುವಲ್‌ ಸಭೆಯಲ್ಲಿ ಪಾಲ್ಗೊಳ್ಳಲಿರುವ ಮೋದಿಬ್ರಿಕ್ಸ್‌ ಸಮ್ಮೇಳನದ ವರ್ಚುವಲ್‌ ಸಭೆಯಲ್ಲಿ ಪಾಲ್ಗೊಳ್ಳಲಿರುವ ಮೋದಿ

ಇದಲ್ಲದೆ, ಯಾವುದೇ ರೀತಿಯ ತಾರತಮ್ಯವಿಲ್ಲದೆ ಎಲ್ಲಾ ವರ್ಗದ ಜನರನ್ನು ತಲುಪುವ ಸರ್ಕಾರದ ಯೋಜನೆಗಳ ಪ್ರಯೋಜನಗಳು ಎಲ್ಲರಿಗೂ 'ಸಬ್‌ ಕಾವಿಕಾಸ್‌' ಅಥವಾ ಕಲ್ಯಾಣವನ್ನು ಮಾತ್ರ ಖಚಿತಪಡಿಸುತ್ತದೆ ಎಂದು ಅವರು ಹೇಳಿದರು. ಹಿಂದಿನ ಸರ್ಕಾರ ಕಾರ್ಯಗಳನ್ನು ಉಲ್ಲೇಖಿಸಿದ ಅವರು, ರಾಜಕೀಯ ಹಿತಾಸಕ್ತಿ ಗಾಗಿ ಈ ಹಿಂದೆ ಯೋಜನೆಗಳನ್ನು ಘೋಷಿಸಲಾಗಿತ್ತು. ಆದರೆ ಅವುಗಳ ಅನುಷ್ಠಾನದ ಬಗ್ಗೆ ಯಾವುದೇ ಯಾರಿಗೂ ಖಾತರಿಗಳಿಲ್ಲ ಎಂದು ಹೇಳಿದರು.

ಈ ಯೋಜನೆಗಳನ್ನು ಪೂರ್ಣಗೊಳಿಸುವ ಬಗ್ಗೆ ಹಿಂದಿನ ಸರ್ಕಾರದ ಆಡಳಿತಗಾರರು ಗಂಭೀರ ಕ್ರಮವಹಿಸಿರಲಿಲ್ಲ. ಈ ಹೊಸ ಕಟ್ಟಡ ನಾವು ಯಾವ ಮನಸ್ಥಿತಿಯನ್ನು ಬದಲಾಯಿಸಿದ್ದೇವೆ ಎಂಬುದಕ್ಕೆ ಉದಾಹರಣೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದಲ್ಲದೆ, ನಮ್ಮ ಸರ್ಕಾರವು 32,000ಕ್ಕೂ ಹೆಚ್ಚು ಅನಗತ್ಯ ಅನುಸರಣೆಗಳನ್ನು ತೆಗೆದು ಹಾಕಿದೆ. ಇದು ದೇಶದಲ್ಲಿ ಸುಲಭ ವ್ಯವಹಾರವನ್ನು ಉತ್ತೇಜಿಸಲು ಪ್ರಮುಖವಾದ ಕ್ರಮವಾಗಿದೆ ಎಂದು ಹೇಳಿದರು.

 2.25 ಲಕ್ಷ ಕೋಟಿಗೆ ಆರ್ಡರ್ ಮೌಲ್ಯ

2.25 ಲಕ್ಷ ಕೋಟಿಗೆ ಆರ್ಡರ್ ಮೌಲ್ಯ

ಪೋರ್ಟಲ್ ಕುರಿತು ಮಾತನಾಡಿದ ಅವರು, ಇದು ಸರ್ಕಾರಿ ಇ- ಮಾರುಕಟ್ಟೆ ಸ್ಥಳದ ಒಂದು ಕಿರು ರೂಪ. ಇದರಲ್ಲಿ ಪ್ರಸ್ತುತ 45 ಲಕ್ಷ ಸಣ್ಣ ಉದ್ಯಮಗಳು ನೋಂದಾಯಿಸಲ್ಪಟ್ಟಿವೆ. ವೇದಿಕೆಯಲ್ಲಿ ಆರ್ಡರ್ ಮೌಲ್ಯವು 9,000 ಕೋಟಿಯಿಂದ ಈಗ 2.25 ಲಕ್ಷ ಕೋಟಿಗೆ ಏರಿದೆ. ದೇಶದಲ್ಲಿ ವ್ಯಾಪಾರ ಮಾಡುವ ಸುಲಭದ ಪ್ರಯೋಜನಗಳನ್ನು ತಿಳಿಸಿದ ಅವರು, 4 ವರ್ಷಗಳ ಹಿಂದೆ ದೇಶದಲ್ಲಿ 500 ಕ್ಕಿಂತ ಕಡಿಮೆ ನೋಂದಾಯಿತ ಫಿನ್‌ಟೆಕ್ ಸ್ಟಾರ್ಟ್‌ಅಪ್‌ಗಳು ಇದ್ದವು, ಅದು ಈಗ 2,300ಕ್ಕೆ ಏರಿದೆ ಎಂದು ಹೇಳಿದರು.

 ಲೋಕಲ್ ಫಾರ್ ವೋಕಲ್ ಉಪಕ್ರಮ

ಲೋಕಲ್ ಫಾರ್ ವೋಕಲ್ ಉಪಕ್ರಮ

ಅದೇ ಅವಧಿಯಲ್ಲಿ ವರ್ಷಕ್ಕೆ ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳು 8,000 ರಿಂದ 15,000 ಯುನಿಟ್‌ಗಳಿಗೆ ಏರಿದೆ. ಇದಲ್ಲದೆ, ದೇಶದ ಪ್ರಗತಿಗೆ ರಫ್ತುಗಳು ಅತ್ಯಗತ್ಯ. 'ಲೋಕಲ್ ಫಾರ್ ವೋಕಲ್' ನಂತಹ ಉಪಕ್ರಮಗಳು ದೇಶದ ರಫ್ತುಗಳನ್ನು ಹೆಚ್ಚಿಸಿವೆ. ಕಳೆದ ವರ್ಷ ಜಾಗತಿಕ ಅಡೆತಡೆಗಳ ಹೊರತಾಗಿಯೂ, ಭಾರತವು ಒಟ್ಟು 670 ಶತಕೋಟಿ ಡಾಲರ್‌ ರಫ್ತು ಮಾಡಿದೆ ಎಂದರು.

 ರಫ್ತುಗಳ ಪಾತ್ರ ನಿರ್ಣಾಯಕ

ರಫ್ತುಗಳ ಪಾತ್ರ ನಿರ್ಣಾಯಕ

ಆ ಸಂದರ್ಭದಲ್ಲಿ, ಮೋದಿ ರಫ್ತುದಾರರು ಕೇವಲ ಅಲ್ಪಾವಧಿಯ ರಫ್ತು ಗುರಿಯನ್ನು ಹೊಂದಿಸದೆ ದೀರ್ಘಾವಧಿಯ ಗುರಿಯನ್ನು ಹೊಂದಲು ಒತ್ತಾಯಿಸಿದರು. ಅದೂ ಕೂಡ ಸಾಧನೆಯನ್ನು ತಲುಪಲು ಸರಿಯಾದ ಮಾರ್ಗಸೂಚಿಯೊಂದಿಗೆ, ಅಭಿವೃದ್ಧಿ ರಾಷ್ಟ್ರವಾಗಲು ರಫ್ತುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಉಲ್ಲೇಖಿಸಿದರು.

 ಉತ್ತಮ ನೀತಿಗಳು ಮಾರುಕಟ್ಟೆಗಳಿಗೆ ಅಗತ್ಯ

ಉತ್ತಮ ನೀತಿಗಳು ಮಾರುಕಟ್ಟೆಗಳಿಗೆ ಅಗತ್ಯ

ಕಳೆದ ಎಂಟು ವರ್ಷಗಳಲ್ಲಿ, ಭಾರತವು ತನ್ನ ರಫ್ತುಗಳನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ರಫ್ತು ಗುರಿಗಳನ್ನು ಸಾಧಿಸುತ್ತಿದೆ. ರಫ್ತುಗಳನ್ನು ಹೆಚ್ಚಿಸಲು ರಫ್ತು ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಉತ್ಪನ್ನಗಳನ್ನು ಹೊಸ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ಉತ್ತಮ ನೀತಿಗಳು ಬಹಳಷ್ಟು ಸಹಾಯ ಮಾಡಿದೆ ಎಂದು ಅವರು ಹೇಳಿದರು.

English summary
Prime Minister Narendra Modi unveiled the central government's Niryat portal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X