ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಷೆ ವೈವಿದ್ಯತೆಯನ್ನು ಏಕತೆಗಾಗಿ ಬಳಸೋಣ: ಮೋದಿ

|
Google Oneindia Kannada News

ನವದೆಹಲಿ, ಆಗಸ್ಟ್ 30: ಮಲಯಾಳಂ ಮನೋರಮಾ ಪತ್ರಿಕೆಯ ಕಾನ್‌ಕ್ಲೇವ್‌ ಅನ್ನು ಇಂದು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಮೋದಿ, ಭಾಷೆಯ ವೈವಿದ್ಯತೆ ಹೊಂದಿರುವ ಹೊರತಾಗಿ ನಾವೆಲ್ಲರೂ ದೇಶದ ಅಭಿವೃದ್ಧಿಯ ಒಂದು ಉದ್ದೇಶದೆಡೆಗೆ ದುಡಿಯುತ್ತಿದ್ದೇವೆ ಎಂದು ಹೇಳಿದರು.

ಆರೋಗ್ಯವಂತರಾಗಿ, ಆರೋಗ್ಯವಂತ ದೇಶ ನಿರ್ಮಿಸಿ: ಮೋದಿ ಕರೆಆರೋಗ್ಯವಂತರಾಗಿ, ಆರೋಗ್ಯವಂತ ದೇಶ ನಿರ್ಮಿಸಿ: ಮೋದಿ ಕರೆ

ಹೊಸ ಭಾರತದ ಪರಿಕಲ್ಪನೆ ದೇಶದ ಒಳಗಿರುವವರ ಜೀವನಾಭಿವೃದ್ಧಿ, ಕ್ಷೇಮ ಅಷ್ಟೆ ಮಾತ್ರವೇ ಅಲ್ಲದೆ, ದೇಶದಿಂದ ಹೊರಗಿರುವವರೂ ಹೊಸ ಭಾರತದ ಪರಿಕಲ್ಪನೆಯಲ್ಲಿ ನಮ್ಮ ಜೊತೆಗೆ ಇದ್ದಾರೆ ಎಂದು ಮೋದಿ ಹೇಳಿದರು.

Narendra Modi Inagurates Malayalam Manorama Conclave

ಭಾಷೆಯ ಶಕ್ತಿಯನ್ನು ನಾವೇಕೆ ದೇಶದ ಏಕತೆಗೆ ಬಳಸಬಾರದರು, ವಿವಿಧ ಭಾಷೆಯನ್ನು ಮಾತನಾಡುವ ಜನರನ್ನು ಹತ್ತಿರಕ್ಕೆ ತರುವ ಪ್ರಯತ್ನವನ್ನು ಪತ್ರಿಕೆಗಳು ಏಕೆ ಮಾಡಬಾರದು ಎಂದು ಮೋದಿ ಸಲಹೆ ನೀಡಿದರು.

ನಮ್ಮ ಸರ್ಕಾರವು 1.5 ಕೋಟಿ ಮನೆಗಳನ್ನು ನಿರ್ಮಿಸಿದೆ. ಈ ರೀತಿಯ ವೇಗದಲ್ಲಿ ಈ ಹಿಂದಿನ ಸರ್ಕಾರ ಕಾರ್ಯ ನಿರ್ವಹಿಸಿರಲಿಲ್ಲ. ಈಗಿರುವ ಯೋಜನೆಗಳು ಈ ಹಿಂದಿನ ಸರ್ಕಾರದಲ್ಲಿಯೂ ಇದ್ದವೆ ಆದರೇಕೆ ಕೆಲಸಗಳು ಆಗಿರಲಿಲ್ಲ ಎಂದು ಎಷ್ಟೋ ಜನ ನನ್ನನ್ನು ಪ್ರಶ್ನೆ ಮಾಡುತ್ತಾರೆ ಎಂದು ಮೋದಿ ಹೇಳಿದರು.

ದೇಶದಾದ್ಯಂತ ಬದಾವಣೆ ಆಗುತ್ತಿದೆ. ಹರಿಯಾಣಾದಂತಹಾ ರಾಜ್ಯದಲ್ಲಿ ಸರ್ಕಾರಿ ನೇಮಕಾತಿಯಲ್ಲಿ ಪೂರ್ಣ ಪಾರದರ್ಶತೆ ಎಂಬುದು ಕನಸಾಗಿತ್ತು, ಅದನ್ನು ಸಾಕಾರ ಮಾಡಿದ್ದೇವೆ ಎಂದು ಮೋದಿ ಹೇಳಿದರು.

English summary
Prime minister Narendra Modi today inaugurates Malayalam Manorama conclave. He said we need to use the power of language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X