• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗುಲಾಂ ನಬಿ ನನ್ನ ನಿಜಸ್ನೇಹಿತ; ರಾಜ್ಯ ಸಭೆಯಲ್ಲಿ ಕಣ್ಣೀರು ಹಾಕಿದ ಮೋದಿ

|
Google Oneindia Kannada News

ನವದೆಹಲಿ, ಫೆಬ್ರುವರಿ 09: ನಿವೃತ್ತಿಯಾಗುತ್ತಿರುವ ರಾಜ್ಯಸಭೆ ಸದಸ್ಯರ ಬಗ್ಗೆ ವಿದಾಯ ಭಾಷಣ ಮಾಡುವ ಸಂದರ್ಭ ರಾಜ್ಯ ಸಭೆಯಲ್ಲಿ ಮೋದಿ ಭಾವುಕರಾಗಿ ಕಣ್ಣೀರು ಹಾಕಿದ ಸಂಗತಿ ಮಂಗಳವಾರ ನಡೆಯಿತು.

ಮಂಗಳವಾರ ಕೆಲ ರಾಜ್ಯ ಸಭೆ ಸದಸ್ಯರು ನಿವೃತ್ತಿಯಾಗುತ್ತಿದ್ದು, ಇವರ ಬಗ್ಗೆ ಪ್ರಧಾನಿ ಮೋದಿ ವಿದಾಯ ಭಾಷಣ ಆರಂಭಿಸಿದ್ದರು. ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರ ಕುರಿತು ಮಾತನಾಡುವಾಗ ಗದ್ಗದಿತರಾಗಿ ಕಣ್ಣೀರು ಹಾಕಿದ ಸಂಗತಿ ನಡೆಯಿತು.

''ಕಾಂಗ್ರೆಸ್ಸಿಗರು ಫೈವ್ ಸ್ಟಾರ್ ಸಂಸ್ಕೃತಿ ತೊರೆದರೆ ಉಳಿಗಾಲ''''ಕಾಂಗ್ರೆಸ್ಸಿಗರು ಫೈವ್ ಸ್ಟಾರ್ ಸಂಸ್ಕೃತಿ ತೊರೆದರೆ ಉಳಿಗಾಲ''

"ಗುಲಾಂ ನಬಿ ಆಜಾದ್ ಅವರ ಜಾಗವನ್ನು ತುಂಬುವ ವ್ಯಕ್ತಿಯು ಗುಲಾಂ ನಬಿ ಅವರಂತೆ ಕೆಲಸ ಮಾಡುವುದು ತುಂಬಾ ಕಷ್ಟ. ಗುಲಾಂ ನಬಿ ಅವರು ತಮ್ಮ ಪಕ್ಷದ ಬಗ್ಗೆ ಮಾತ್ರವಲ್ಲ, ದೇಶದ ಬಗ್ಗೆಯೂ ಹೆಚ್ಚು ಕಾಳಜಿ ತೋರುತ್ತಿದ್ದರು" ಎಂದು ಶ್ಲಾಘಿಸಿದರು.

ಈ ಹಿಂದೆ ಭಯೋತ್ಪಾದಕ ದಾಳಿ ನಂತರ ಗುಲಾಂ ನಬಿ ಅತ್ತಿದ್ದನ್ನು ಮೋದಿ ನೆನಪಿಸಿಕೊಂಡರು. ಗುಲಾಂ ನಬಿ ಆಜಾದ್ ಅವರನ್ನು ನಿಜಸ್ನೇಹಿತ ಎಂದು ಕಣ್ಣು ತುಂಬಿಕೊಂಡ ಮೋದಿ, "ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಅದನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಗುಲಾಂ ನಬಿ ಆಜಾದ್ ನೋಡಿ ಕಲಿಯಬೇಕು. ಇವರನ್ನು ನಾನು ನಿಜ ಸ್ನೇಹಿತ ಎಂದು ಪರಿಗಣಿಸಿದ್ದೇನೆ" ಎಂದು ಭಾವುಕರಾದರು.

English summary
Prime Minister Narendra Modi on Tuesday got emotional while making a farewell speech for retiring Rajya Sabha members calling gulam nabi azad a true friend
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X