ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ದೂರವಾಣಿಯಲ್ಲಿ ಮೋದಿ ಮತ್ತು ಟ್ರಂಪ್ 40 ನಿಮಿಷ ಮಾತುಕತೆ

|
Google Oneindia Kannada News

ದೆಹಲಿ, ಜೂನ್ 2: ಭಾರತ ಪ್ರಧಾನಮಂತ್ರಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದು, ಕೊವಿಡ್ ವಿರುದ್ಧದ ಹೋರಾಟ, ಜಿ-7 ಸಭೆ ಸೇರಿದಂತೆ ಹಲವು ವಿಚಾರ ಚರ್ಚಿಸಿದೆವು ಎಂದು ಮೋದಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಸುಮಾರು 40 ನಿಮಿಷದ ಮಾತುಕತೆಯಲ್ಲಿ 40 ಭಾರತ-ಚೀನಾ ಗಡಿ ವಿವಾದ ಸಂಬಂಧ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಸುಧಾರಣೆ, ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ವಿರುದ್ಧದ ಹೋರಾಟ ವಿಷಯಗಳ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಪ್ರಧಾನಿ ಕಚೇರಿಯ ಹೇಳಿಕೆ ನೀಡಿದೆ.

ಅಮೆರಿಕ-ಚೀನಾ ಬಿಕ್ಕಟ್ಟು: ಅಮೆರಿಕ ಪರ ನಿಲ್ಲದಂತೆ ಭಾರತಕ್ಕೆ ಎಚ್ಚರಿಕೆ ಕೊಟ್ಟ ಚೀನಾಅಮೆರಿಕ-ಚೀನಾ ಬಿಕ್ಕಟ್ಟು: ಅಮೆರಿಕ ಪರ ನಿಲ್ಲದಂತೆ ಭಾರತಕ್ಕೆ ಎಚ್ಚರಿಕೆ ಕೊಟ್ಟ ಚೀನಾ

ಇದರಲ್ಲಿ ಪ್ರಮುಖ ಜಿ-7 ಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭಾಗವಹಿಸುವಂತೆ ಟ್ರಂಪ್ ಆಹ್ವಾನಿಸಿದ್ದಾರೆ.

"ಭಾರತ-ಯುಎಸ್ ನಡುವಿನ ಆಳವಾದ ಸಮಾಲೋಚನೆಯೂ ಕೊರೊನಾ ವೈರಸ್‌ ನಂತರ ಜಾಗತಿಕ ವಾಸ್ತುಶಿಲ್ಪದ ಪ್ರಮುಖ ಆಧಾರಸ್ತಂಭವಾಗಿ ಉಳಿಯುತ್ತದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Narendra Modi and Donald Trump phone talk about Covid G7

ಜಿ-7 ಸಭೆಗೆ ಮತ್ತಷ್ಟು ರಾಷ್ಟ್ರಗಳನ್ನು ಸೇರಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿರುವ ಟ್ರಂಪ್, ಸೆಪ್ಟೆಂಬರ್ ಅಥವಾ ನವೆಂಬರ್‌ನಲ್ಲಿ ಸಭೆ ಮಾಡಲು ಚಿಂತಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ಮೇಲೆ ಮುನಿಸಿಕೊಂಡಿರುವ ಅಮೆರಿಕ, ಚೀನಾ ಮತ್ತು ಗಡಿ ವಿವಾದದಲ್ಲಿ ಭಾರತಕ್ಕೆ ಬೆಂಬಲ ಸೂಚಿಸಿದೆ. ಯುದ್ಧ ನಡೆದರೆ ಭಾರತ ಪರ ನಿಲ್ಲುವ ಸೂಚನೆ ನೀಡಿದೆ.

English summary
Prime Minister Narendra Modi in a telephonic conversation with the US President Donald Trump and they discussed plans for the US Presidency of G-7, the COVID-19 pandemic, and many other issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X