ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ 20 ಯೋಧರ ಹೆಸರು, ಊರು

|
Google Oneindia Kannada News

ದೆಹಲಿ, ಜೂನ್ 17: ಸೋಮವಾರ ರಾತ್ರಿ ಲಡಾಖ್‌ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಚೀನಾ ಮತ್ತು ಭಾರತ ಸೈನಿಕರ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಓರ್ವ ಅಧಿಕಾರಿ ಸೇರಿದಂತೆ ಇತರೆ ಸೈನಿಕರು ಪ್ರಾಣ ಕಳೆದುಕೊಂಡಿದ್ದರು.

Recommended Video

Virat , sachin and kapil are now also the names of streets in Melbourne | Oneindia Kannada

ಇದೀಗ, ಚೀನಾದೊಂದಿಗೆ ಹೋರಾಡಿ ವೀರ ಮರಣ ಹೊಂದಿದ 20 ಭಾರತೀಯ ಸೈನಿಕರ ವಿವರ ಬಹಿರಂಗವಾಗಿದೆ. ಈ ಪೈಕಿ ಐದು ಯೋಧರು ಬಿಹಾರ್, ನಾಲ್ಕು ಯೋಧರು ಪಂಜಾಬ್, ಇಬ್ಬರು ಝಾಖಂಡ್‌ ಯೋಧರು ಒಳಗೊಂಡಿದ್ದಾರೆ.

Names of the 20 Indian Army personnel who lost their lives Galwan Valley

ಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ಹಿಮಾಚಲದ 'ಅಂಕುಶ್' ಠಾಕೂರ್ಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ಹಿಮಾಚಲದ 'ಅಂಕುಶ್' ಠಾಕೂರ್

1 ಸಂತೋಷ್ ಬಾಬು - ಹೈದರಾಬಾದ್ (ತೆಲಂಗಾಣ)

2 ನುಡುರಾಮ್ ಸೊರೆನ್ - ಮಯೂರ್ಭಂಜ್ (ಒಡಿಶಾ)

3 ಮಂದಿಪ್ ಸಿಂಗ್ - ಪಟಿಯಾಲ (ಪಂಜಾಬ್)

4 ಸತ್ನಮ್ ಸಿಂಗ್ - ಗುರುದಾಸ್‌ಪುರ (ಪಂಜಾಬ್)

5 ಕೆ ಪಳನಿ - ಮದುರೈ (ತಮಿಳುನಾಡು)

6 ಸುನೀಲ್ ಕುಮಾರ್ - ಪಾಟ್ನಾ (ಬಿಹಾರ್)

7 ಬಿಪುಲ್ ರಾಯ್ - ಮೀರತ್ (ಉತ್ತರ ಪ್ರದೇಶ)

8 ದೀಪಕ್ ಕುಮಾರ್ - ರೇವಾ (ಮಧ್ಯಪ್ರದೇಶ)

9 ರಾಜೇಶ್ ಒರಾಂಗ್ - ಬಿರ್ಭಮ್ (ಪಶ್ಚಿಮ ಬಂಗಾಳ)

10 ಕುಂದನ್ ಕುಮಾರ್ ಓಜಾ - ಸಾಹಿಬ್‌ಗಂಜ್ (ಝಾರ್ಖಂಡ್)

11 ಗಣೇಶ್ ರಾಮ್ - ಕಂಕೇನ್ (ಚತ್ತೀಸ್‌ಗಢ್)

12 ಚಂದ್ರಕಾಂತ್ ಪ್ರಧಾನ್ - ಕಂಧಮಾಲ್ (ಒಡಿಶಾ)

13 ಅಂಕುಶ್ ಠಾಕೂರ್ - ಹಮೀರ್‌ಪುರ (ಹಿಮಾಚಲ ಪ್ರದೇಶ)

14 ಗುರ್ಬಿಂದರ್ - ಸಾಂಗ್ರೂರ್ (ಪಂಜಾಬ್)

15 ಗುರ್ತೇಜ್ ಸಿಂಗ್ - ಮಾನ್ಸಾ (ಪಂಜಾಬ್)

16 ಚಂದನ್ ಕುಮಾರ್ - ಭೋಜ್‌ಪುರ್ (ಬಿಹಾರ್)

17 ಕುಂದನ್ ಕುಮಾರ್ - ಸರ್ಹಾಸ (ಬಿಹಾರ್)

18 ಅಮನ್ ಕುಮಾರ್ - ಸಮಸ್ತಿಪುರ (ಬಿಹಾರ್)

19 ಜೈ ಕಿಶೋರ್ ಸಿಂಗ್ - ವೈಶಾಲಿ (ಬಿಹಾರ್)

20 ಗಣೇಶ್ ಹನ್ಸ್ಡಾ - ಪೂರ್ವ ಸಿಂಗ್ಭೂಮ್ (ಝಾರ್ಖಂಡ್)

ಚೀನಾದೊಂದಿಗೆ ಘರ್ಷಣೆಯಲ್ಲಿ ಒಟ್ಟು 20 ಭಾರತೀಯರು ಮೃತಪಟ್ಟಿದ್ದಾರೆ ಎಂದು ಸೇನೆ ತಿಳಿಸಿದೆ. ಆ ಇಪತ್ತು ಸೈನಿಕರ ಹೆಸರು ಸಹ ಬಿಡುಗಡೆ ಮಾಡಿದೆ. ಆದರೆ, ಚೀನಾ ಮಾತ್ರ ಈವರೆಗೂ ತಮ್ಮ ಸೈನ್ಯದಲ್ಲಿ ಉಂಟಾದ ಪ್ರಾಣ ಹಾನಿ ಬಗ್ಗೆ ಮಾಹಿತಿ ಕೊಟ್ಟಿಲ್ಲ.

ಭಾರತಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ 40ಕ್ಕೂ ಅಧಿಕ ಚೈನೀಸ್ ಸೈನಿಕರು ಸಾವನ್ನಪ್ಪಿದ್ದಾರೆ. ಯುಎಸ್ ಗುಪ್ತಚರ ವರದಿ ಪ್ರಕಾರ 35 ಚೀನಾ ಯೋಧರ ಪ್ರಾಣ ಕಳೆದುಕೊಂಡಿದ್ದಾರೆ.

English summary
Names of the 20 Indian Army personnel who lost their lives in the "violent face-off" with China in Galwan Valley, Ladakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X