ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್19: ಜುಲೈ ತಿಂಗಳಲ್ಲಿ ರೆಮ್‌ಡೆಸಿವಿರ್ ಮಾರಾಟ, ಬೆಲೆ 4800 ರೂ!

|
Google Oneindia Kannada News

ದೆಹಲಿ, ಜುಲೈ 7: ಕೊರೊನಾ ವೈರಸ್‌ ರೋಗಿಗಳಿಗೆ ತುರ್ತು ಸಮಯದಲ್ಲಿ ರೆಮ್‌ಡೆಸಿವಿರ್ ಜನರಿಕ್ ಔಷಧವನ್ನು ಚಿಕಿತ್ಸೆಗಾಗಿ ಬಳಸಿಕೊಳ್ಳಬಹುದು ಎಂದು ಡಿಸಿಜಿಐ (ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ನಿಂದ ಅನುಮೋದನೆ ಸಿಕ್ಕಿದೆ ಮೈಲಾನ್ ಸಂಸ್ಥೆ ಘೋಷಿಸಿತ್ತು.

ಯುಎಸ್ ಮೂಲದ ಕಂಪನಿ ತಯಾರಿಸಿರುವ ಈ ಔಷಧಿ ಜುಲೈ ತಿಂಗಳಿನಿಂದ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು, 100 ಗ್ರಾಂ ಬಾಟಲಿಗೆ 4800 ರೂಪಾಯಿ ನಿಗದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕೊವಿಡ್ 19: ಭಾರತದಲ್ಲಿ 'ರೆಮ್‌ಡೆಸಿವಿರ್' ಔಷಧಕ್ಕೆ ಸಿಕ್ಕಿತು ಅನುಮತಿಕೊವಿಡ್ 19: ಭಾರತದಲ್ಲಿ 'ರೆಮ್‌ಡೆಸಿವಿರ್' ಔಷಧಕ್ಕೆ ಸಿಕ್ಕಿತು ಅನುಮತಿ

ಸಿಪ್ಲಾ ಮತ್ತು ಹೆಟೆರೊ ಸಂಸ್ಥೆಗಳು ಈಗಾಗಲೇ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ಕೋವಿಡ್ -19 ಚಿಕಿತ್ಸೆಗಾಗಿ ರೆಮ್‌ಡೆಸಿವಿರ್ ತಯಾರಿಸಲು ಮತ್ತು ಮಾರುಕಟ್ಟೆ ಮಾಡಲು ಅನುಮತಿ ಪಡೆದಿದೆ.

Mylan Prices Its Generic Remdesivir In India At 4800 Per 100 Mg Vial

ಈ ಔಷಧವನ್ನು ಭಾರತದಲ್ಲಿ ಡೆಸ್ರೆಮ್ ಎಂಬ ಬ್ರಾಂಡ್ ಹೆಸರಿನಲ್ಲಿ ಬಿಡುಗಡೆ ಮಾಡಲಾಗುವುದು ಮತ್ತು 100 ಮಿಗ್ರಾಂ ಬಾಟಲಿಗೆ, 4,800 ದರದಲ್ಲಿ ಲಭ್ಯವಿರುತ್ತದೆ. ಅಂದಾಜು ಐದು ದಿನಗಳ ಚಿಕಿತ್ಸೆಯ ವೆಚ್ಚ ಸುಮಾರು 20,000 ಮತ್ತು 30,000 ಆಗುತ್ತದೆ.

ಕೊವಿಡ್ ಸೋಂಕಿತ ವಯಸ್ಕರು, ವೃದ್ದರು, ಮಕ್ಕಳ ಮೇಲೆ ಪ್ರಯೋಗ ಮಾಡಲಾಗಿದ್ದು, ಪಾಸಿಟಿವ್ ಫಲಿತಾಂಶ ಹೊರಬಂದ ನಂತರವೇ ಈ ಔಷಧಕ್ಕೆ ಅನುಮತಿ ನೀಡಲಾಗಿದೆ ಎಂದು ಮೈಲಾನ್ ಸಂಸ್ಥೆ ಹೇಳಿದೆ.

''ಮೈಲಾನ್ ಮತ್ತು ಗಿಲ್ಯಾಡ್ ಸೈನ್ಸಸ್ ಸಂಸ್ಥೆಗಳು ಅನೇಕ ವರ್ಷಗಳಿಂದ ಸಹಭಾಗಿತ್ವವನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಔಷಧಿಗಳನ್ನು ಸಾರ್ವಜನಿಕ ವಲಯಕ್ಕೆ ಪರಿಚಯಿಸುತ್ತಿದೆ. ವಿಶ್ವದಾದ್ಯಂತ ಎಚ್ಐವಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ಪ್ರಮಾಣವನ್ನು ಕಡಿಮೆ ಮಾಡಲು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ" ಎಂದು ಮೈಲಾನ್ ಅಧ್ಯಕ್ಷ ರಾಜೀವ್ ಮಲಿಕ್ ಹೇಳಿದ್ದಾರೆ.

English summary
Mylan's Remdesivir generic Receives the DCGI Accelerated Approval for Restricted Emergency Use in COVID-19 Patients in India. prices in India at 4800 per 100 mg vial.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X