ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿಯಲ್ಲಿ ದರ್ಜಿ ಮಗನೊಂದಿಗೆ ನನ್ನ ಮಗನೂ ಓದುತ್ತಾನೆ: ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಆಗಸ್ಟ್ 28: ತಮ್ಮ ಸರ್ಕಾರದ ಉಚಿತ ಕೋಚಿಂಗ್ ಯೋಜನೆಯಿಂದಾಗಿ ದರ್ಜಿಯ ಮಗನೂ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ) ಓದುವ ಅವಕಾಶ ಪಡೆದಿದ್ದಾನೆ. ಆತನೊಂದಿಗೆ ತಮ್ಮ ಮಗನೂ ಓದುತ್ತಾನೆ ಎಂಬುದು ಸಂತಸದ ಸಂಗತಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಆರ್ಥಿಕ ಕುಸಿತ: ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇದೆ ಎಂದ ಕೇಜ್ರಿವಾಲ್ಆರ್ಥಿಕ ಕುಸಿತ: ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇದೆ ಎಂದ ಕೇಜ್ರಿವಾಲ್

'ವಿಜಯ್ ಕುಮಾರ್ ತಂದೆ ಒಬ್ಬ ದರ್ಜಿ. ಆತನ ತಾಯಿ ಗೃಹಿಣಿ. ದೆಹಲಿ ಸರ್ಕಾರವು ಆತನಿಗೆ ಉಚಿತ ಕೋಚಿಂಗ್ ಕಲ್ಪಿಸಿದ ಬಳಿಕ ಆತ ಐಐಟಿಯಲ್ಲಿ ಪ್ರವೇಶ ಪಡೆದಿದ್ದಾನೆ ಎನ್ನುವುದು ನನಗೆ ಖುಷಿ ಕೊಟ್ಟಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯ ದೆಹಲಿಯಲ್ಲಿ ಈಡೇರಿದೆ' ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

My Son Will Study With Tailors Son In IIT Arvind Kejriwal

'ನನ್ನ ಮಗು ದರ್ಜಿಯ ಮಗ ಐಐಟಿಯಲ್ಲಿ ಒಟ್ಟಿಗೆ ಓದುತ್ತಾರೆ ಎಂದು ಹೇಳುವುದಕ್ಕೂ ಸಂತಸವಾಗುತ್ತಿದೆ. ಉತ್ತಮ ಶಿಕ್ಷಣದ ಕೊರತೆಯಿಂದ ಬಡವನ ಮಗ ಬಡವನಾಗಿಯೇ ಉಳಿದುಕೊಳ್ಳುವಂತಹ ಸಂಪ್ರದಾಯವಿತ್ತು. ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿ ನೀಡುವುದರಿಂದ ಬಡವರು ಮತ್ತು ಶ್ರೀಮಂತರ ನಡುವೆ ಇರುವ ಅಂತರಕ್ಕೆ ಸೇತುವೆ ನಿರ್ಮಿಸಿದ್ದೇವೆ' ಎಂದು ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ.

'ಮೋದಿಗೆ ಜೈ' ಅಂದ್ರಾ? ಅರೆರೆ.. ಏನಾಯ್ತು ಕೇಜ್ರಿವಾಲ್ ಗೆ? 'ಮೋದಿಗೆ ಜೈ' ಅಂದ್ರಾ? ಅರೆರೆ.. ಏನಾಯ್ತು ಕೇಜ್ರಿವಾಲ್ ಗೆ?

ಕೇಜ್ರಿವಾಲ್ ಅವರ ಮಗ ಪುಳ್ಕಿತ್ ಅವರು ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ಶೇ 96.4ರಷ್ಟು ಅಂಕಗಳನ್ನು ಪಡೆದು ಗಮನ ಸೆಳೆದಿದ್ದರು. 2014ರಲ್ಲಿ ಕೇಜ್ರಿವಾಲ್ ಅವರ ಮಗಳು ಹರ್ಷಿತಾ ಕೇಜ್ರಿವಾಲ್ ಅವರೂ 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ 96ರಷ್ಟು ಅಂಕಗಳಿಸಿದ್ದರು. ಬಳಿಕ ಐಐಟಿಯ ಜಂಟಿ ಪ್ರವೇಶಾ ಪರೀಕ್ಷೆಯಲ್ಲಿ ಕೂಡ ಉತ್ತೀರ್ಣರಾಗಿದ್ದರು.

ನಾಗರಿಕ ಸೇವೆಗೆ ಸೇರಿಕೊಳ್ಳುವ ಮೊದಲು ಅರವಿಂದ್ ಕೇಜ್ರಿವಾಲ್ ಕಾನ್ಪುರದ ಐಐಟಿಯಲ್ಲಿ ಎಂಜಿನಿಯರಿಂಗ್ ಓದಿದ್ದರು.

English summary
Delhi Chief Minister Arvind Kejriwal said that, Delhi government's free coaching scheme helped a tailor's son to got admission in IIT. I am happy that my son will study with him in IIT.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X