ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ್ಯಂಟಿ ವೈರಸ್ ಔಷಧಿ ಸಂಗ್ರಹ: ಸಂಸದ ಗೌತಮ್ ಗಂಭೀರ್ ವಿರುದ್ಧ ದೂರು

|
Google Oneindia Kannada News

ನವದೆಹಲಿ, ಏಪ್ರಿಲ್ 23: ಒಂದೆಡೆ ದೆಹಲಿ ಜನತೆ ಸೂಕ್ತ ಔಷಧಿ ಸಿಗದೆ ಪರದಾಡುತ್ತಿದೆ, ಇದರ ನಡುವೆ ಆ್ಯಂಟಿ ವೈರಸ್ ಔಷಧ ಫ್ಯಾಬಿಫ್ಲುವನ್ನು ಸಂಗ್ರಹಿಸಿಟ್ಟುಕೊಂಡಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್ ವಿರುದ್ಧ ದೂರು ನೀಡಲಾಗಿದೆ.

ಗೌತಮ್ ಗಂಭೀರ್ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಮತ್ತು ಟೆಡ್‌ಎಕ್ಸ್ ಸ್ಪೀಕರ್ ಲೆಹರ್ ಲೇಥಿ ಅವರು ದೂರು ನೀಡಿದ್ದಾರೆ.ಎನ್‌ಸಿಆರ್‌ಬಿ ಆನ್‌ಲೈನ್ ಪೋರ್ಟಲ್‌ನಿಂದ ತನ್ನ ದೂರಿನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿರುವ ಲೆಹರ್ ಇದೊಂದು ಕಳವಳಕಾರಿ ಸಂಗತಿ ಎಂದಿದ್ದಾರೆ.

Explained: ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ಅಂಟಿದರೆ ಉಳಿದವರ ಕಥೆ!?Explained: ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ಅಂಟಿದರೆ ಉಳಿದವರ ಕಥೆ!?

ದೆಹಲಿ ನಿವಾಸಿಗಳು ಔಷಧಿಗಾಗಿ ಪರದಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ಫ್ಯಾಬಿಫ್ಲುವನ್ನು ಸಂಗ್ರಹಿಸಿದ್ದಕ್ಕಾಗಿ ನಾನು ಗೌತಮ್ ಗಂಭೀರ್ ವಿರುದ್ಧ ದೂರು ದಾಖಲಿಸಿದ್ದೇನೆ. ಇದೊಂದು ಕಳವಳಕಾರಿ ಸಂಗತಿ, ಏಕೆಂದರೆ ಫಾರ್ಮಸಿಗಳು ಮತ್ತು ರಸಾಯನಶಾಸ್ತ್ರಜ್ಞರು ವಾರದ 24 ಗಂಟೆ ರೋಗಿಗಳಿಗೆ ಔಷಧಿ ನೀಡುತ್ತಾರೆ. ಆದರೆ ಗಂಭೀರ್ ಅದನ್ನು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ನೀಡುತ್ತಿದ್ದಾರೆ ಎಂದಿದ್ದಾರೆ.

My Few Fabiflu Strips Causing Shortage, Gautam Gambhir Defends Offer

ಪೂರ್ವ ದೆಹಲಿ ಜನರಿಗೆ ತಮ್ಮ ಕಚೇರಿಯಲ್ಲಿ ಅತ್ಯಂತ ಪ್ರಮುಖ ಫ್ಯಾಬಿಫ್ಲು ಔಷಧಿಯನ್ನು ಉಚಿತವಾಗಿ ವಿತರಣೆ ಮಾಡುವುದಾಗಿ ಗೌತಮ್ ಗಂಭೀರ್ ಬುಧವಾರ ಘೋಷಿಸಿದ್ದರು. ಸಂಸದರ ನಡೆಗೆ ಟ್ವಿಟ್ಟರ್‌ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಕೆಲವು ದಿನಗಳಿಂದ ದೆಹಲಿ ಔಷಧ ಕೊರತೆಯನ್ನು ಎದುರಿಸುತ್ತಿದೆ, ಮತ್ತು ಹೆಚ್ಚಿನ ಔಷಧಾಲಯಗಳು ರಸಾಯನಶಾಸ್ತ್ರಜ್ಞರು ಹಾಗೂ ಆಸ್ಪತ್ರೆಯ ಔಷಧಾಲಯಗಳು ಕೂಡ ಈ ಔಷಧಿ ಕೊರತೆ ಎದುರಿಸುತ್ತಿದ್ದಾರೆ.

ಅಗತ್ಯ ಸರಕುಗಳ ಕಾಯ್ದೆಯ ಔಷಧಾಲಯಗಳು ಕೂಡ ಈ ಔಷಧ ಕೊರತೆ ಎದುರಿಸುತ್ತಿದ್ದಾರೆ. ಅಗತ್ಯ ಸರಕುಗಳ ಕಾಯ್ದೆಯ ಪ್ರಕಾರ ಔಷಧಗಳನ್ನು ಸಂಗ್ರಹಿಸುವುದು ಕಾನೂನು ಬಾಹಿರ.

ಈ ಸನ್ನಿವೇಶದಲ್ಲಿ ಜನಪ್ರತಿನಿಧಿಯಾಗಿರುವ ಗೌತಮ್ ಅವರು ಇಷ್ಟೊಂದು ಪ್ರಮಾಣದಲ್ಲಿ ಔಷಧಿ ಸಂಗ್ರಹಿಸಲು ಹೇಗೆ ಸಾಧ್ಯವಾಯಿತು ಎಂದು ಲೆಹರ್ ಪ್ರಶ್ನಿಸಿದ್ದಾರೆ.

English summary
BJP MP Gautam Gambhir today defended his offer of free anti-viral drug "Fabiflu" in his constituency in Delhi, which has been criticized by many including leaders of the Aam Aadmi Party (AAP) and Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X