ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಜಫರಪುರ ಅತ್ಯಾಚಾರ : ಸಿಬಿಐ, ಕೇಂದ್ರಕ್ಕೆ ಸುಪ್ರೀಂ ಚಾಟಿಯೇಟು

|
Google Oneindia Kannada News

ನವದೆಹಲಿ, ಫೆಬ್ರವರಿ 7 : ಮುಜಫರ್‌ಪುರ ಆಶ್ರಯತಾಣದಲ್ಲಿ ನಡೆದ ಅತ್ಯಾಚಾರ ಪ್ರಕರಣದ ತನಿಖೆ ಮಾಡುತ್ತಿದ್ದ ಸಿಬಿಐ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಕ್ಕೆ ಸಿಬಿಐ ಮತ್ತು ಕೇಂದ್ರ ಸರಕಾರವನ್ನು ಸರ್ವೋಚ್ಚ ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

"ಇನ್ನು ಸಾಕು" ಎಂದು ಕೆಂಡಾಮಂಡಲವಾಗಿರುವ ಸುಪ್ರೀಂ ಕೋರ್ಟ್, ಮಕ್ಕಳನ್ನು ಈ ರೀತಿ ನಡೆಸಿಕೊಳ್ಳಲಾಗುತ್ತದೆಯೆ ಎಂದು ಬಿಹಾರ ಸರಕಾರವನ್ನು ಕೂಡ ಪ್ರಶ್ನಿಸಿದ್ದು, ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರನ್ನು ಕೂಡ ತರಾಟೆಗೆ ತೆಗೆದುಕೊಂಡಿದೆ. ರಾಜ್ಯ ಸರಕಾರ ವಿಫಲವಾಗಿದೆಯೆಂದು ಹೇಳಿ, ಪ್ರಕರಣವನ್ನು ಪಟ್ನಾದಿಂದ ದೆಹಲಿಯ ಪೋಕ್ಸ್ ಕೋರ್ಟಿಗೆ ವರ್ಗಾವಣೆ ಮಾಡಿದೆ.

ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿದಂತೆ ಭಾರೀ ಕುಳಗಳು ಭಾಗಿಯಾಗಿದ್ದಾರೆನ್ನಲಾದ ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಎಸ್ಪಿ ಜೆ.ಪಿ. ಮಿಶ್ರಾ ಎಂಬ ಅಧಿಕಾರಿಯನ್ನು ಅವರನ್ನು ಕಳೆದ ಆಗಸ್ಟ್ ನಲ್ಲಿಯೇ ಹಠಾತ್ತನೆ ಪಟ್ನಾ ಡಿಜಿ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು.

ಅಶ್ಲೀಲ ಹಾಡಿಗೆ ನರ್ತಿಸುವಂತೆ ಮಾಡಿ, ಮತ್ತು ಬರಿಸಿ ಬಾಲಕಿಯರ ರೇಪ್!ಅಶ್ಲೀಲ ಹಾಡಿಗೆ ನರ್ತಿಸುವಂತೆ ಮಾಡಿ, ಮತ್ತು ಬರಿಸಿ ಬಾಲಕಿಯರ ರೇಪ್!

ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಂಧಿತ ಬ್ರಜೇಶ್ ಠಾಕೂರ್ ಎಂಬಾತನಿಗೆ ಜೆಡಿಯು ನಾಯಕರ ಸಂಪರ್ಕವಿದ್ದು, ಆತನನ್ನು ಸರಕಾರವೇ ರಕ್ಷಿಸಲು ಯತ್ನಿಸುತ್ತಿದೆ ಎಂದು ಆರ್ಜೆಡಿ ನಾಯಕರು ಆರೋಪಿಸಿದ್ದರು. ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರ ಆದೇಶದ ಮೇರೆಗೆ ಈ ವರ್ಗಾವಣೆ ನಡೆದಿತ್ತು ಎಂದು ಆರ್ಜೆಡಿ ನಾಯಕ ತೇಜಸ್ವಿ ದೂರಿದ್ದರು.

Muzaffarpur shelter home case : SC lambasts CBI and centre

ರಾಜ್ಯ ಸರಕಾರಕ್ಕೆ ಎಚ್ಚರಿಕೆ : ಕೇಂದ್ರ ಸರಕಾರ ಮತ್ತು ಸಿಬಿಐ ಜೊತೆಗೆ ಬಿಹಾರ ಸರಕಾರವನ್ನೂ ಸರ್ವೋಚ್ಚ ನ್ಯಾಯಾಲಯ ತೀವ್ರವಾಗಿ ಟೀಕಿಸಿದೆ. ಮಕ್ಕಳನ್ನು ಈರೀತಿ ನಡೆಸಿಕೊಳ್ಳುವುದು ಹೇಗೆ ಸಾಧ್ಯ? ಆ ಆಶ್ರಯತಾಣದ ಬಗ್ಗೆ ಎಲ್ಲ ಮಾಹಿತಿಗಳನ್ನು ರಾಜ್ಯ ಸರಕಾರ ಕೂಡಲೆ ಬಹಿರಂಗಪಡಿಸಬೇಕು. ಸರಕಾರ ಒಂದು ವೇಳೆ ವಿಫಲವಾದರೆ ಮುಖ್ಯ ಕಾರ್ಯದರ್ಶಿಯನ್ನು ಕರೆಸಿಕೊಂಡು ಮಾಹಿತಿ ಪಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಅತಿಥಿಗಳಿಂದಲೇ ಅತ್ಯಾಚಾರ : 42 ಬಾಲಕಿಯರಿದ್ದ ಈ ಆಶ್ರಯತಾಣದಲ್ಲಿ 34ಕ್ಕೂ ಹೆಚ್ಚು ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು. ಅವರಿಗೆ ಕಾಮಪ್ರಚೋದಕ ಉಡುಪು ಧರಿಸಲು ಹೇಳಿ, ಶೆಲ್ಟರ್ ಹೋಂಗೆ ಬರುವ 'ಅತಿಥಿ'ಗಳೆದಿರು ನರ್ತಿಸುವಂತೆ ಬಲವಂತ ಮಾಡಲಾಗುತ್ತಿತ್ತು. ಅವರಿಗೆ ಮಾದಕ ವಸ್ತು ನೀಡಿ ಅವರು ಮಲಗುವಂತೆ ಮಾಡಿ, ಅವರ ಮೇಲೆ ಅತ್ಯಾಚಾರ ನಡೆಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಅಲ್ಲದೆ, ಇದನ್ನು ಪ್ರತಿರೋಧಿಸುವ ಬಾಲಕಿಯರಿಗೆ ಚಿತ್ರಹಿಂಸೆ ನೀಡಲಾಗುತ್ತಿತ್ತು ಎಂದೂ ದೂರಲಾಗಿದೆ.

ಬಿಹಾರ ಆಶ್ರಮ ತಾಣಗಳಲ್ಲಿನ ರೇಪ್ ಕೇಸ್ ಸಿಬಿಐ ತನಿಖೆಗೆ ಬಿಹಾರ ಆಶ್ರಮ ತಾಣಗಳಲ್ಲಿನ ರೇಪ್ ಕೇಸ್ ಸಿಬಿಐ ತನಿಖೆಗೆ

ಸಾಕೇತ್ ಪೋಕ್ಸೋ ಕೋರ್ಟಿಗೆ ವರ್ಗಾವಣೆ : ಇದು ಒಂದೆರಡು ವರ್ಷಗಳಲ್ಲಿ ನಡೆದಿದ್ದಲ್ಲ. ಕಳೆದ ಹತ್ತು ವರ್ಷಗಳಿಂದ ಇದು ನಿರಂತರವಾಗಿ ನಡೆಯುತ್ತಿತ್ತು. ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ನಡೆಸಿದ ಅಧ್ಯಯನದಿಂದ ಅಲ್ಲಿ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯಗಳು ಬಟಾಬಯಲಾಗಿವೆ. ಈ ಪ್ರಕರಣವನ್ನು ಪಟ್ನಾದಿಂದ ದೆಹಲಿಯಲ್ಲಿರುವ ಸಾಕೇತ್ ಪೋಕ್ಸೋ ಕೋರ್ಟಿಗೆ ವರ್ಗಾವಣೆ ಮಾಡಿದೆ. ಇನ್ನು ಎರಡು ವಾರಗಳಲ್ಲಿ ವಿಚಾರಣೆ ಆರಂಭಿಸಿ, ಆರು ತಿಂಗಳಲ್ಲಿ ಮುಗಿಸುವಂತೆ ಆದೇಶಿಸಲಾಗಿದೆ.

English summary
Supreme Court comes down heavily on CBI and Centre for transferring a CBI officer probing the Muzaffarpur shelter home case despite the Court’s embargo against the transfer of investigating officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X