• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಮುಸ್ಲೀಮರೇ ಗೋ ಸಾಕಣೆ ಮಾಡಬೇಡಿ, ಗೋರಕ್ಷಕರು ನಿಮ್ಮನ್ನು ಕೊಲ್ಲಬಹುದು'

By Manjunatha
|

ನವದೆಹಲಿ, ಜುಲೈ 25: ಇತ್ತೀಚೆಗೆ ರಾಜಸ್ತಾನದ ಅಲ್ವಾರ್‌ನಲ್ಲಿ ಗೋರಕ್ಷಕರು ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದಿರುವ ವಿಷಯ ರಾಜ್ಯಸಭೆಯಲ್ಲಿ ಚರ್ಚೆಯಾಯಿತು.

ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರ ಪತ್ನಿ ರಾಜ್ಯಸಭಾ ಸದಸ್ಯೆ ತಜೀಮ್ ಫಾತಿಮಾ ಈ ವಿಷಯದ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿ ಮುಸ್ಲಿಮರು ಗೋ ಸಾಕಣೆ ಮಾಡಬೇಡಿ ಗೋರಕ್ಷಕರು ನಿಮ್ಮನ್ನು ಕೊಂದು ಬಿಡುಬಹುದು ಎಂದು ಎಚ್ಚರಿಸಿದ್ದಾರೆ.

ರಾಜಸ್ಥಾನ: ಗೋಕಳ್ಳನೆಂದು ವ್ಯಕ್ತಿಯನ್ನು ಹೊಡೆದು ಕೊಂದ ಜನ

ರಾಜಸ್ತಾನದ ಅಲ್ವಾರ್ ಘಟನೆ ಬಳಿಕ ತಮ್ಮ ಕುಟುಂಬಕ್ಕೆ ಉಡುಗೊರೆಯಾಗಿ ನೀಡಲಾಗಿದ್ದ ಗೋವನ್ನು ಗೋಶಾಲೆಗೆ ಕೊಟ್ಟಿದ್ದಾಗಿ ಹೇಳಿದ ಫಾತಿಮಾ ಅವರು, ತಮ್ಮನ್ನೂ ಗೋರಕ್ಷಕರು ಕೊಲ್ಲಬಹುದೆಂಬ ಭಯಕ್ಕೆ ಹೀಗೆ ಮಾಡಿದೆವು ಎಂದಿದ್ದಾರೆ.

ಈ ಹಿಂದೆ ಗಂಗಾ ಶುದ್ಧೀಕರಣಕ್ಕೆ ಮತ್ತು ಗೋರಕ್ಷಣೆಗೆ ಬೆಂಬಲ ಸೂಚಿಸಿದ್ದ ಫಾತಿಮಾ ಅವರು ಗೋಶಾಲೆಗೆ 25 ಲಕ್ಷ ಕೊಡುವುದಾಗಿ ಹೇಳಿದ್ದರು. ಆದರೆ ಈಗ ಆ ನಿರ್ಧಾರದಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ಘೋಷಿಸಿದರು.

English summary
SP leader Azam Khan's wife Rajya Sabha member Tazeem Fatima said that ' Muslims do not form ow gow rakshak may kill you'. She also said her family returned a cow which was gifted by a seer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X