ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರ ಬಗ್ಗೆಯಷ್ಟೇ ಮಾತನಾಡಬೇಡಿ:ರಾಹುಲ್ ಗೆ ಮುಸ್ಲಿಂ ಪಂಡಿತರ ಸಲಹೆ!

|
Google Oneindia Kannada News

Recommended Video

ಮುಸ್ಲಿಂ ಪಂಡಿತರಿಂದ ರಾಹುಲ್ ಗಾಂಧಿಗೆ ಸಿಕ್ಕ ಸಲಹೆ ಏನು? | Oneindia Kannada

ನವದೆಹಲಿ, ಜುಲೈ 12: 'ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯದ ಬಗ್ಗೆ ಮಾತ್ರ ಮಾತನಾಡಬೇಡಿ. ಬಡತನ, ಶಿಕ್ಷಣದ ಬಗ್ಗೆ ಮಾತನಾಡಿ...' ಹೀಗೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮುಸ್ಲಿಂ ಪಂಡಿತರೇ ಸಲಹೆ ನೀಡಿದ್ದಾರೆ.

ನವದೆಹಲಿಯಲ್ಲಿ ನಿನ್ನೆ(ಜು.11) 12 ಜನ ಮುಸ್ಲಿಂ ಪಂಡಿತರೊಂದಿಗೆ ರಾಹುಲ್ ಗಾಂಧಿ ಮಾತುಕತೆ ನಡೆಸಿದರು. 'ಮುಂಬರುವ ಲೋಕಸಭಾ ಚುನಾವಣೆಗೂ ಈ ಭೇಟಿಗೂ ಯಾವುದೇ ಸಂಬಂಧವಿಲ್ಲ. ಮುಸ್ಲಿಂ ಪಂಡಿತರೊಂದಿಗೆ ಕೆಲವು ವಿಷಯಗಳ ಬಗ್ಗೆ ಚರ್ಚಿಸುವುದಕ್ಕಷ್ಟೇ ಈ ಸಭೆ ಕರೆದಿದ್ದು' ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ರಾಹುಲ್ ಗಾಂಧಿಗೆ ಬ್ರಾಹ್ಮಣ ವಧುವಿನೊಂದಿಗೆ ಮದುವೆ:ಟಿಡಿಪಿ ಸಂಸದನ ಸಲಹೆ!ರಾಹುಲ್ ಗಾಂಧಿಗೆ ಬ್ರಾಹ್ಮಣ ವಧುವಿನೊಂದಿಗೆ ಮದುವೆ:ಟಿಡಿಪಿ ಸಂಸದನ ಸಲಹೆ!

"ಕೇವಲ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಬೇಡಿ. ಇದರಿಂದ ನಿಮ್ಮನ್ನು ಜನರು ಮುಸ್ಲಿಮರ ಪರ ಎಂದು ಕರೆಯುವುದಕ್ಕೆ ನೀವೇ ಅವಕಾಶ ನೀಡಿದಂತಾಗುತ್ತದೆ. ಅದರ ಬದಲು ದೇಶದ ಬಡತನ ಮತ್ತು ಶಿಕ್ಷಣದ ಬಗ್ಗೆ ಮಾತನಾಡಿ. ನೀವು ಈ ರೀತಿ ಮಾಡಿದರೆ 96 ಪ್ರತಿಶತ ಮುಸ್ಲಿಮರ ಮೇಲೆ ಅದು ಪರಿಣಾಮ ಬೀರಲಿದೆ ಎಂದು ರಾಹುಲ್ ಗಾಂಧಿ ಅವರಿಗೆ ತಿಳಿಸಿದ್ದೇವೆ' ಎಂದು ಇತಿಹಾಸಜ್ಞ ಎಸ್ ಇರ್ಫಾನ್ ಹಬಿಬ್ ತಿಳಿಸಿದ್ದಾರೆ.

Muslim intellectuals advise Rahul to avoid talking about the community in particular

ಈ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಸಲ್ಮಾನ್ ಖುರ್ಷಿದ್, ಲೇಖಕ ರಕ್ಷಂದ ಜಲೀಲ್, ಉದ್ಯಮಿ ಜುನೈದ್ ರೆಹ್ಮಾನ್ ಮುಂತಾದವರು ಭಾಗವಹಿಸಿದ್ದರು.

English summary
In a meeting with 12 Muslim intellectuals here on Wednesday, Congress President Rahul Gandhi was advised not to talk about Muslim community in particular and rather speak on issues like poverty and education on a whole.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X