ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಮುರಳಿ ಮನೋಹರ್ ಜೋಷಿ ಪತ್ರ

|
Google Oneindia Kannada News

ನವದೆಹಲಿ, ಮಾರ್ಚ್ 26: ಬಿಜೆಪಿ ಸಂಸದ, ಹಿರಿಯ ನಾಯಕ ಮುರಳೀ ಮನೋಹರ್ ಜೋಷಿ ಅವರು ಬರೆದ ಪತ್ರವೊಂದು ಇದೀಗ ಬಿಜೆಪಿ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಬಿಜೆಪಿಯಲ್ಲಿ ಹಿರಿತಲೆಗಳನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎಂಬ ದೂರಿಗೆ ಪುಷ್ಠಿ ನೀಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

"ನಾನು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಬಿಜೆಪಿ ನಾಯಕರೇ ನನ್ನ ಬಳಿ ಹೇಳಿದ್ದಾರೆ" ಎಂದು 85 ವರ್ಷ ವಯಸ್ಸಿನ ಜೋಷಿ ತಮ್ಮ ಪತ್ರದಲ್ಲಿ ಬರೆದಿದ್ದು, ಈ ಕುರಿತು ಮಾಧ್ಯಮಗಳು ವರದಿ ಮಾಡಿವೆ.

ಅಡ್ವಾಣಿ ಜಾಗದಲ್ಲಿ ಅಮಿತ್ ಶಾ, ನಿರ್ಧಾರದಲ್ಲಿ ತಪ್ಪಿಲ್ಲ ಎಂದ ಬಿಜೆಪಿಅಡ್ವಾಣಿ ಜಾಗದಲ್ಲಿ ಅಮಿತ್ ಶಾ, ನಿರ್ಧಾರದಲ್ಲಿ ತಪ್ಪಿಲ್ಲ ಎಂದ ಬಿಜೆಪಿ

ಕಾನ್ಪುರ ಮತದಾರರನ್ನು ಸಂಬೋಧಿಸಿ ಈ ಪತ್ರವನ್ನು ಬರೆಯಲಾಗಿದ್ದು, "ಕಾನ್ಪುರದ ಪ್ರೀತಿಯ ಮತದಾರರೇ, ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ರಾಮಲಾಲ್ ಅವರು ಇಂದು ನೀವು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ" ಎಂದು ಈ ಪತ್ರದಲ್ಲಿ ಅವರು ಬರೆದಿದ್ದಾರೆ.

Murali Manohar Joshis letter becomes a matter of debate now

2014 ರಲ್ಲಿ ವಾರಣಾಸಿ ಕ್ಷೇತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟುಕೊಟ್ಟು ಉತ್ತರ ಪ್ರದೇಶದ ಕಾನ್ಪುರದಿಂದ ಜೋಷಿ ಸ್ಪರ್ಧಿಸಿ ಗೆದ್ದಿದ್ದರು.

ಆದರೆ ಈ ಬಾರಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ ಮತ್ತು ಮುರಳೀ ಮನೋಹರ್ ಜೋಷಿ ಅವರನ್ನು ಕಣಕ್ಕಿಳಿಸದಿರಲು ಬಿಜೆಪಿ ನಿರ್ಧರಿಸಿದ್ದು, ವ್ಯಾಪಕ ಟೀಕೆಗೂ ಕಾರಣವಾಗಿತ್ತು.

Murali Manohar Joshis letter becomes a matter of debate now

ಅಡ್ವಾಣಿಯವರೇ, ನಿಮ್ಗೆ ವಯಸ್ಸಾಯ್ತು! ಆಕ್ರೋಶ ಹುಟ್ಟಿಸಿದ ಬಿಜೆಪಿ ನಡೆಅಡ್ವಾಣಿಯವರೇ, ನಿಮ್ಗೆ ವಯಸ್ಸಾಯ್ತು! ಆಕ್ರೋಶ ಹುಟ್ಟಿಸಿದ ಬಿಜೆಪಿ ನಡೆ

ಗುಜರಾತಿನ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಅವರ ಬದಲಾಗಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಳಿದಿದ್ದಾರೆ. ಈ ಬಗ್ಗೆ ಎಲ್ ಕೆ ಅಡ್ವಾಣಿ ಅವರು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

English summary
BJP MP, senior leader Murali Manohar Joshi write a letter to voters of Kanpur, quoted that, Bharatiya Janata Party, conveyed to me today that I should not contest the ensuing parliamentary election from Kanpur or elsewhere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X