ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಶುಭ ಗಳಿಗೆಯಲ್ಲಿ ರಾಮ ಮಂದಿರ ಶಿಲಾನ್ಯಾಸ: ದಿಗ್ವಿಜಯ್ ಸಿಂಗ್

|
Google Oneindia Kannada News

ನವದೆಹಲಿ, ಆಗಸ್ಟ್ 3: ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರು ಆಗಸ್ಟ್ 5ರಂದು ಚಾಲನೆ ನೀಡಲಿದ್ದಾರೆ. ಆದರೆ ಮೋದಿ ಅವರು ಶಿಲಾನ್ಯಾಸ ಮಾಡಲಿರುವ ಮುಹೂರ್ತ ಸರಿಯಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

Recommended Video

ರಾಮಮಂದಿರ ನಿರ್ಮಾಣಕ್ಕೆ ಮೋದಿ ಅಡಿಗಲ್ಲು | Oneindia Kannada

ರಾಮ ಮಂದಿರ ನಿರ್ಮಾಣಕ್ಕಾಗಿ ಇಟ್ಟಿರುವ ಮುಹೂರ್ತ ಸರಿಯಿಲ್ಲ ಎಂದು ಹಲವು ಬಾರಿ ಎಚ್ಚರಿಕೆ ನೀಡಿದರೂ ಅಶುಭ ಗಳಿಗೆಯಲ್ಲಿ ಶುಭ ಕಾರ್ಯಕ್ಕೆ ಮೋದಿ ಕೈ ಹಾಕಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಬಾಂಬ್ ಸಿಡಿಸಿದ್ದಾರೆ.

ರಾಮಮಂದಿರ ಭೂಮಿ ಪೂಜೆ ಕರ್ನಾಟಕದ ಕೊಡುಗೆಯೇನು?ರಾಮಮಂದಿರ ಭೂಮಿ ಪೂಜೆ ಕರ್ನಾಟಕದ ಕೊಡುಗೆಯೇನು?

ಆಗಸ್ಟ್ 05ರಂದು ಬೆಳಗ್ಗೆ 8 ರಿಂದ 12ಗೆ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ಶಂಕು ಸ್ಥಾಪನೆ ಮುಹೂರ್ತ ಇಡಲಾಗಿದೆ. ಕರ್ನಾಟಕದ ಬೆಳಗಾವಿಯ ಎನ್ ಆರ್ ವಿಜಯೇಂದ್ರ ಶರ್ಮ ಅವರು ಕೊಟ್ಟಿರುವ ಈ ಮುಹೂರ್ತದ ಬಗ್ಗೆ ದಿಗ್ವಿಜಯ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಂಕು ಸ್ಥಾಪನೆ ದಿನದಂದು 40 ಕೆಜಿ ಬೆಳ್ಳಿಯ ಇಟ್ಟಿಗೆಯನ್ನು ಇಟ್ಟು ಮೋದಿ ಪೂಜಿಸಲಿದ್ದಾರೆ. ಸೀಮಿತ ಅತಿಥಿಗಳು, ಸ್ಥಳೀಯ ಮುಖಂಡರಿಗೆ ಮಾತ್ರ ಖುದ್ದು ಹಾಜರಾಗುವ ಅವಕಾಶ ಸಿಗುತ್ತಿದ್ದು, ಮಿಕ್ಕವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳುತ್ತಿದ್ದಾರೆ.

Muhurat for Ram temple ceremony inauspicious, claims Digvijaya Singh

ಸ್ವಾಮಿ ಸ್ವರೂಪಾನಂದ ಮಹಾರಾಜ್ ಹೇಳಿಕೆ
ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿ, ದ್ವಾರಕ ಹಾಗೂ ಜೋಶಿಮಠದ ಹಿರಿಯ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಮಹಾರಾಜ್ ಅವರು ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷಿಸಲಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇಡುವ ಗಳಿಕೆ ಅಶುಭವಾಗಿದೆ ಎಂದಿದ್ದಾರೆ.

ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೋದಿ ಅವರಿಗೆ ಈ ಬಗ್ಗೆ ಕಿವಿಮಾತು ಹೇಳಲಿ, ಅಶುಭ ಮುಹೂರ್ತದಲ್ಲಿ ಭೂಮಿ ಪೂಜೆ ಮಾಡಿ ಎಷ್ಟು ಮಂದಿ ಬಲಿ ಪಡೆಯಲು ಬಯಸಿದ್ದೀರಿ? ಇದೇ ಏನು ನಿಮ್ಮ ಸನಾತನ ಧರ್ಮ ಹೇಳಿಕೊಟ್ಟ ನೀತಿ ನಿಯಮ ಎಂದು ದಿಗ್ವಿಜಯ್ ಪ್ರಶ್ನಿಸಿದ್ದಾರೆ.

ರಾಮಜನ್ಮಭೂಮಿ ಬಗ್ಗೆ ತಕರಾರು ಎತ್ತಿದ್ದ ಇಕ್ಬಾಲ್ ಗೂ ಆಹ್ವಾನರಾಮಜನ್ಮಭೂಮಿ ಬಗ್ಗೆ ತಕರಾರು ಎತ್ತಿದ್ದ ಇಕ್ಬಾಲ್ ಗೂ ಆಹ್ವಾನ

ಅಯೋಧ್ಯಾ ಮಂದಿರದ ಅರ್ಚಕರಿಗೆ ಕೊರೊನಾವೈರಸ್ ಬಂದಿದೆ. ಯುಪಿ ಸಚಿವರು, ಬಿಜೆಪಿ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ಸೋಂಕು ತಗುಲಿದೆ. ಯುಪಿ ಸಿಎಂ ಹಾಗೂ ಪ್ರಧಾನಿ ಕೂಡಾ ಕ್ವಾರಂಟೈನ್ ನಲ್ಲಿರಬೇಕಲ್ಲವೇ 14 ದಿನಗಳ ಪ್ರತ್ಯೇಕ ವಾಸದ ನಿಯಮ ಅನ್ವಯವಾಗುವುದಿಲ್ಲವೇ? ಎಂದು ಕೇಳಿದ್ದಾರೆ.

English summary
Senior Congress leader Digvijaya Singh has claimed that the foundation ceremony of Ram temple in Ayodhya is being organised despite "warnings", including by a seer, on the inauspicious date of August 5, because it suited the Prime Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X