ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಭೂಭಾಗವನ್ನು ಚೀನಾ ಆಕ್ರಮಿಸಿರುವುದು ಸತ್ಯ: ಮೆಹಬೂಬಾ ಮುಫ್ತಿ

|
Google Oneindia Kannada News

ದೆಹಲಿ, ಅಕ್ಟೋಬರ್ 23: ಭಾರತದ 1 ಸಾವಿರ ಚದರ ಕಿ.ಮೀ ಭೂ ಭಾಗವನ್ನು ಚೀನಾ ಆಕ್ರಮಿಸಿರುವುದು ಸತ್ಯ ಎಂದು ಪಿಡಿಪಿ ಮುಖಂಡರಾದ ಮೆಹಬೂಬಾ ಮುಪ್ತಿ ಹೇಳಿದ್ದಾರೆ.

14 ತಿಂಗಳ ನಂತರ ಗೃಹ ಬಂಧನದಿಂದ ಮುಕ್ತಿ ಪಡೆದ ನಂತರ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆಹಬೂಬಾ ಮುಪ್ತಿ, ಚೀನಾ ಸಂವಿಧಾನದ 370 ವಿಧಿ ಬಗ್ಗೆ ಮಾತನಾಡುತ್ತಿದೆ. ಅದು ವಿವಾದಿತ ಪ್ರದೇಶವಾಗಿದ್ದು, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ, ವಿಶೇಷ ಸ್ಥಾನಮಾನ ರದ್ದುಗೊಳ್ಳುವವರೆಗೂ ಜಮ್ಮು-ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ದೃಷ್ಟಿಕೋನದಲ್ಲಿ ನೋಡಿರಲಿಲ್ಲ ಎಂದರು.

''ಮನೆಯೊಳಗೆ ನುಗ್ಗಿ ಹೊಡೆಯುವ ತಂತ್ರ ಚೀನಾದಿಂದ ಹೈಜಾಕ್'' ''ಮನೆಯೊಳಗೆ ನುಗ್ಗಿ ಹೊಡೆಯುವ ತಂತ್ರ ಚೀನಾದಿಂದ ಹೈಜಾಕ್''

ಹೇಗೋ ನಿರ್ವಹಣೆ ಮಾಡಿ ಸುಮಾರು 40 ಕಿಲೋ ಮೀಟರ್ ಭೂ ಭಾಗವನ್ನು ಭಾರತ ಮರಳಿ ಪಡೆದುಕೊಂಡಿದೆ.

Mufti Says Its A Fact That China Captured 1000 sq Km Of Our Land

ಜಮ್ಮು -ಕಾಶ್ಮೀರದ ಭಾವುಟವನ್ನು ಮರಳಿ ಪಡೆಯುವವರೆಗೂ ತ್ರಿವಣ ಧ್ವಜವನ್ನು ನಾವು ತೆಗೆದುಕೊಳ್ಳುವುದಿಲ್ಲ ಎಂದು ಮೆಹಬೂಬಾ ಮುಪ್ತಿ ಹೇಳಿದರು.

ಸಂವಿಧಾನದ 370 ನೇ ವಿಧಿ ರದ್ದು ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೆಹಬೂಬಾ, ಸಂವಿಧಾನವನ್ನು ಅಪವಿತ್ರಗೊಳಿಸಲಾಗಿದೆ. ದೇಶ ಸಂವಿಧಾನದ ಮೇಲೆ ನಡೆಯಬೇಕು, ಬಿಜೆಪಿ ಚುನಾವಣಾ ಪ್ರಣಾಳಿಕೆ ಮೇಲೆ ನಡೆಯಬಾರದು ಎಂದು ಕಿಡಿಕಾರಿದರು.

ಮತ ಕೇಳಲು ಕೇಂದ್ರಕ್ಕೆ ಏನೂ ಇಲ್ಲ. ಮತ ಪಡೆಯಲು ಸಂವಿಧಾನದ 370ನೇ ವಿಧಿ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಧಾನಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.

English summary
Mehbooba Mufti Says, It's a fact that China captured 1000 sq km of our land. I think we somehow managed to get back around 40 km. China speaks of Article 370 too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X