ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರವಿಂದ ಕೇಜ್ರಿವಾಲ್ ಪದಗ್ರಹಣಕ್ಕೆ ವಿಶೇಷ ಅತಿಥಿಗೆ ಆಹ್ವಾನ!

|
Google Oneindia Kannada News

ನವದೆಹಲಿ, ಫೆಬ್ರವರಿ 13 : ದೆಹಲಿ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದೆ. ಫೆಬ್ರವರಿ 16ರಂದು ಅರವಿಂದ ಕೇಜ್ರಿವಾಲ್ 3ನೇ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಮತ್ತೊಮ್ಮೆ ಅಧಿಕಾರ ನಡೆಸಲು ಅವಕಾಶ ನೀಡಿದ ದೆಹಲಿ ಜನರ ಸಮ್ಮುಖದಲ್ಲಿ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ದೆಹಲಿ ಚುನಾವಣೆ; ಎಎಪಿಗೆ ಶಕ್ತಿ ತಂದ 'TINA' ಪ್ರಚಾರ ತಂತ್ರ! ದೆಹಲಿ ಚುನಾವಣೆ; ಎಎಪಿಗೆ ಶಕ್ತಿ ತಂದ 'TINA' ಪ್ರಚಾರ ತಂತ್ರ!

ಅರವಿಂದ ಕೇಜ್ರಿವಾಲ್ ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಯೊಬ್ಬರನ್ನು ಆಹ್ವಾನಿಸಲಾಗಿದೆ. ಅವರು ದೇಶದ ಪ್ರಧಾನಿಯಲ್ಲ, ಯಾವುದೇ ರಾಜ್ಯದ ಮುಖ್ಯಮಂತ್ರಿಯೂ ಅಲ್ಲ. ರಾಜಕೀಯ ಎಂದರೇನು? ಎಂದು ತಿಳಿಯದ ಒಂದು ವರ್ಷದ ಮಗು.

ದೆಹಲಿ ಚುನಾವಣೆ; ಅಚ್ಚರಿಗೆ ಕಾರಣವಾದ 'ನೋಟಾ' ಮತಗಳ ಸಂಖ್ಯೆ ದೆಹಲಿ ಚುನಾವಣೆ; ಅಚ್ಚರಿಗೆ ಕಾರಣವಾದ 'ನೋಟಾ' ಮತಗಳ ಸಂಖ್ಯೆ

ದೆಹಲಿ ಚುನಾವಣೆ ಫಲಿತಾಂಶ ಪ್ರಕಟಗೊಂಡ ದಿನ ಆಮ್ ಆದ್ಮಿ ಪಕ್ಷದ ಕಚೇರಿ ಮುಂದೆ ಇದ್ದ ಮಗು ಎಲ್ಲರ ಗಮನ ಸೆಳೆದಿತ್ತು. ಕೇಜ್ರಿವಾಲ್‌ ರೀತಿ ಮಫ್ಲರ್ ಸುತ್ತಿಕೊಂಡು ಎಎಪಿ ಟೋಪಿ ಧರಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ವೈರಲ್ ಆಗಿದ್ದವು.

ಕೇಜ್ರಿವಾಲ್ ಕ್ಯಾಬಿನೆಟ್ಟಿಗೆ ಎಎಪಿ ಪ್ರಮುಖರಾದ ಆತಿಶಿ, ಛಡ್ಡಾ ಇಲ್ಲ? ಕೇಜ್ರಿವಾಲ್ ಕ್ಯಾಬಿನೆಟ್ಟಿಗೆ ಎಎಪಿ ಪ್ರಮುಖರಾದ ಆತಿಶಿ, ಛಡ್ಡಾ ಇಲ್ಲ?

1 ವರ್ಷದ ಕಂದಮ್ಮ ಅತಿಥಿ

1 ವರ್ಷದ ಕಂದಮ್ಮ ಅತಿಥಿ

ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ ಸಮಾರಂಭಕ್ಕೆ 1 ವರ್ಷದ ಕಂದಮ್ಮ ಮುಖ್ಯ ಅತಿಥಿ. ಈ ಕುರಿತು ಟ್ವಿಟರ್ ಮೂಲಕ ಎಎಪಿ ಮಾಹಿತಿ ನೀಡಿದೆ. ಕೇಜ್ರಿವಾಲ್‌ರಂತೆ ವೇಷ ಧರಿಸಿದ್ದ ಕಂದಮ್ಮನನ್ನು ಪಕ್ಷ 'Baby Mufflerman' ಎಂದು ಕರೆದಿದೆ.

ಗಮನ ಸೆಳೆದಿದ್ದ ಮುದ್ದು ಕಂದಮ್ಮ

ಗಮನ ಸೆಳೆದಿದ್ದ ಮುದ್ದು ಕಂದಮ್ಮ

ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ದಿನ 1 ವರ್ಷದ ಮಗು ಅರವಿಂದ ಕೇಜ್ರಿವಾಲ್ ರೀತಿ ವೇಷ ಧರಿಸಿಕೊಂಡು ಎಎಪಿ ಕಚೇರಿ ಮುಂದೆ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಕಂದಮ್ಮನ ಚಿತ್ರ ವೈರಲ್ ಆಗಿತ್ತು.

10 ಗಂಟೆಗೆ ಪ್ರಮಾಣ ವಚನ

10 ಗಂಟೆಗೆ ಪ್ರಮಾಣ ವಚನ

ಫೆಬ್ರವರಿ 16ರಂದು ಬೆಳಗ್ಗೆ 10ಗಂಟೆಗೆ ರಾಮ್ ಲೀಲಾ ಮೈದಾನದಲ್ಲಿ ಅರವಿಂದ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ದೆಹಲಿಯ ಜನರು ಸಾಕ್ಷಿಯಾಗಲಿದ್ದಾರೆ.

ಯಾವ ಗಣ್ಯರಿಗೂ ಆಹ್ವಾನವಿಲ್ಲ

ಯಾವ ಗಣ್ಯರಿಗೂ ಆಹ್ವಾನವಿಲ್ಲ

ಎಎಪಿಯ ಹಿರಿಯ ನಾಯಕ ಗೋಪಾಲ್ ರೈ ಪ್ರಮಾಣ ವಚನ ಸಮಾರಂಭದ ಬಗ್ಗೆ ಹೇಳಿಕೆ ನೀಡಿದ್ದಾರೆ. "ಯಾವುದೇ ರಾಜ್ಯದ ಮುಖ್ಯಮಂತ್ರಿಗಳು, ರಾಜಕೀಯ ನಾಯಕರನ್ನು ಸಮಾರಂಭಕ್ಕೆ ಆಹ್ವಾನಿಸಿಲ್ಲ. ದೆಹಲಿ ಜನರೇ ನಮ್ಮ ಗಣ್ಯರು" ಎಂದು ಹೇಳಿದ್ದಾರೆ.

English summary
Arvind Kejriwal all set to take oath as the Delhi Chief Minister on February 16, 2020. One-year-old baby who spotted at the AAP headquarters dressed like Kejriwal on counting day special guest for oath tacking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X